IMG 20220614 WA0035

ಪಾವಗಡ:ಪಿ.ರೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಗೀತ ವೆಂಕಟೇಶ್ ಆಯ್ಕೆ…!

DISTRICT NEWS ತುಮಕೂರು

ಪಿ.ರೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಗೀತ ವೆಂಕಟೇಶ್ ಆಯ್ಕೆ.

ಪಾವಗಡ : ತಾಲ್ಲೂಕಿನ ಪಿ.ರೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಮಂಗಳವಾರ ನಡೆದ ಚುನಾವಣೆಯಲ್ಲಿ ಗೀತಾ ವೆಂಕಟೇಶ್ ಆಯ್ಕೆಯಾಗಿದ್ದಾರೆ.
12 ಮಂದಿ ಸದಸ್ಯರಲ್ಲಿ 8 ಮಂದಿ ಇತ್ತೀಚೆಗೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದ ಕಾರಣದಿಂದಾಗಿ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲಾಧಿಕಾರಿಗಳು ಚುನಾವಣೆ ನಿಗದಿಪಡಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಗೀತಾ ವೆಂಕಟೇಶ್, ಶಂಕರನಾಯ್ಕ ನಾಮ ಪತ್ರ ಸಲ್ಲಿಸಿದರು. ಗೀತಾ ಅವರಿಗೆ 8, ಪ್ರತಿಸ್ಪರ್ಧಿ ಶಂಕರನಾಯ್ಕ ಅವರಿಗೆ 4 ಮತಗಳು ಲಭಿಸಿದವು.
ಚುನಾವಣಾಧಿಕಾರಿ ತಹಶೀಲ್ದಾರ್ ವರದರಾಜು, ಗೀತಾ ವೆಂಕಟೇಶ್ ಅವರು ಅಧ್ಯಕ್ಷರಾಗಿ ಚುನಾಯಿತರಾಗಿರುವ ಬಗ್ಗೆ ಅಧಿಕೃತವಾಗಿ ಘೋಷಿಸಿದರು.
ಫಲಿತಾಂಶ ಘೋಷಣೆಯಾದ ಕೂಡಲೆ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.