IMG 20220623 WA0018

ಪಾವಗಡ:ಬಸ್ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳ ಪ್ರತಿಭಟನೆ…!

DISTRICT NEWS ತುಮಕೂರು

ಬಸ್ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳ ಪ್ರತಿಭಟನೆ…..
ಪಾವಗಡ: ಪಳವಳ್ಳಿ ಕಟ್ಟೆ ಬಸ್ ದುರಂತದ ನಂತರ ಸಾರಿಗೆ ಸಚಿವರಾದ ಶ್ರೀರಾಮುಲು ಪಾವಗಡ ತಾಲೂಕಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಅದು ಇಂದಿಗೂ ಈಡೇರದ ಕಾರಣ. ಇಂದು ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಪಟ್ಟಣದ ಚಳ್ಳಕೆರೆ ಕ್ರಾಸ್ ಬಳಿ ಸರ್ಕಾರಿ ಬಸ್ ತಡೆದು, ವಿದ್ಯಾರ್ಥಿಗಳು ಗುರುವಾರ ಪ್ರತಿಭಟಿಸಿದರು . ತಾಲ್ಲೂಕಿನ ಬಿ.ಕೆ.ಹಳ್ಳಿ, ಬೂದಿಬೆಟ್ಟ ಸೇರಿದಂತೆ ತಾಲ್ಲೂಕಿನ ಗ್ರಾಮಗಳಿಗೆ ಸರ್ಕಾರಿ ಬಸ್ ಸೌಕರ್ಯ ಇಲ್ಲವೆಂಬುದು ವಿದ್ಯಾರ್ಥಿಗಳ ಆರೋಪವಾಗಿದೆ.
ಪಳವಳ್ಳಿ ಕಟ್ಟೆ ಮೆಲೆ ಖಾಸಗಿ ಬಸ್ ಅಪಘಾತವಾದ ನಂತರ ವೈ ಎನ್ ಹೊಸಕೋಟೆ ಮಾರ್ಗಕ್ಕೆ ಮಾತ್ರ ಹೆಚ್ಚಿನ ಸಂಖ್ಯೆಯ ಬಸ್ ಸವಲತ್ತು ಕಲ್ಪಿಸಲಾಗಿದೆ. ಆದರೆ ತಾಲ್ಲೂಕಿನ ಇತರೆ ಮಾರ್ಗಗಳಲ್ಲಿ ಸಮಸ್ಯೆ ಬಗೆಹರಿದಿಲ್ಲ. ಒತ್ತಡ ಹಾಕಿದಾಗ ಒಂದೆರೆಡು ದಿನಗಳ ಕಾಲ ಬಸ್ ವ್ಯವಸ್ಥೆ ಮಾಡಿ ನಂತರ ನಿಲ್ಲಿಸಲಾಗುತ್ತಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದರು.
ಶಾಲಾ ಕಾಲೇಜು ಆರಂಭವಾಗುವ, ಮುಗಿಯುವ ವೇಳೆಗೆ ಬಸ್ ಸೌಕರ್ಯ ಕಲ್ಪಿಸುವಂತೆ ಘಟಕ ವ್ಯವಸ್ಥಾಪಕರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಈ ಬಗ್ಗೆ ಅವರು ಗಮನಹರಿಸುತ್ತಿಲ್ಲ. ಹೀಗಾಗಿ ಲಗೇಜ್ ಆಟೋ ಗಳಲ್ಲಿ ಪ್ರಯಾಣಿಸಬೇಕಾಗಿದೆ. ಕೆಲ ಮಾರ್ಗಗಳಲ್ಲಿ ಬೆರಳೆಣಿಕೆ ಬಸ್ ಗಳು ಸಂಚರಿಸುವುದರಿಂದ ನಿಗದಿತ ಸಂಖ್ಯೆಯಗಿಂತ ದುಪ್ಪಟ್ಟು ಪ್ರಯಾಣಿಕರು ಅಪಾಯಕಾರಿ ಸ್ಥಿತಿಯಲ್ಲಿ ಸಂಚರಿಸಬೇಕಿದೆ ಎಂದು ದೂರಿದರು.
ಸ್ಥಳಕ್ಕೆ ಪೊಲೀಸರು ಆಗಮಿಸಿ ಪ್ರತಿಭಟನಾ ನಿರತರ ಮನವೊಲಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವರದಿ: ಶ್ರೀನಿವಾಸಲು ಎ