IMG 20200717 WA0057

ಪಾನಗಡ; ಕೊರೋನಾ ಖಾಸಗಿ ಫೀವರ್ ಕ್ಲೀನಿಕ್ ಆರಂಭ…!

DISTRICT NEWS ತುಮಕೂರು
ಇಂದು ಪಾವಗಡದಲ್ಲಿ ಕೋವಿಡ್19 ನಿಯಂತ್ರಣ ಕಾರ್ಯಪಡೆಯಡಿಯಲ್ಲಿ ಪ್ರಪ್ರಥಮವಾಗಿ ಖಾಸಗಿ ಫೀವರ್ ಕ್ಲಿನಿಕ್ ಆರಂಭಿಸಲಾಯಿತು. ಮೊದಲನೇ ಹಂತದಲ್ಲಿ ಮೂರು ಉಚಿತ ಜ್ವರ ತಪಾಸಣಾ ಕೇಂದ್ರಗಳನ್ನು ಭಾರತೀಯ ವೈದ್ಯಕೀಯ ಸಂಸ್ಥೆ ಹಾಗೂ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ಮತ್ತು ಕೋವಿಡ್19 ನಿಯಂತ್ರಣ ಕಾರ್ಯಪಡೆಯ ಆಶ್ರಯದಲ್ಲಿ ಸರಿಸುಮಾರು 10 ಉಚಿತ ಜ್ವರ ತಪಾಸಣ ಕೇಂದ್ರಗಳನ್ನು ಖಾಸಗಿ ವೈದ್ಯರ ಸಹಕಾರದೊಂದಿಗೆ ಆರಂಭಿಸಲಾಗುತ್ತಿದೆ. ಈ ಯೋಜನೆ ಗೌರವಾನ್ವಿತ ಜಿಲ್ಲಾಧಿಕಾರಿಗಳಾದ ಡಾ.ರಾಕೇಶ್ ಕುಮಾರ್ ರವರ ಸಲಹೆಯಂತೆ ಹಾಗೂ ಪಾವಗಡ ಪುರಸಭೆಯ ಮುಖ್ಯಾಧಿಕಾರಿಗಳಾ ಶ್ರೀ ನವೀನ್ ಚಂದ್ರ ರವರ ಸಹಕಾರದಿಂದ ಆರಂಭವಾಗುತ್ತಿದೆ ಎಂದು ಪೂಜ್ಯ ಸ್ವಾಮಿ ಜಪಾನಂದಜೀ ರವರು ತಿಳಿಸಿದರು.
IMG 20200717 WA0058
ಈ ಒಂದು ಜ್ವರ ತಪಾಸಣಾ ಕೇಂದ್ರದಲ್ಲಿ ಸಾರ್ವಜನಿಕರು ಯಾರು ಬೇಕಾದರೂ ತಮ್ಮ ಜ್ವರವನ್ನು ಹಾಗೂ ಪಲ್ಸ್ ಆಕ್ಸಿಮೀಟರ್ ಸಮೇತ ಪರೀಕ್ಷಿಸಿಕೊಂಡು ಯಾವುದೇ ರೀತಿಯ ನ್ಯೂನತೆ ಕಂಡು ಬಂದಲ್ಲಿ ತತ್‍ಕ್ಷಣ ಸರ್ಕಾರಿ ಆಸ್ಪತ್ರೆಗೆ ಸೂಚಿಸಲಾಗುವುದು. ಈ ಒಂದು ಯೋಜನೆಯಡಿಯಲ್ಲಿ ಸಾರ್ವಜನಿಕರು ಜ್ವರ ತಪಾಸಣಾ ಕೇಂದ್ರ ಆರಂಭವಾದಾಕ್ಷವೇ ತಮ್ಮ ತಮ್ಮ ತಾಪಮಾನಗಳನ್ನು ಪರೀಕ್ಷಿಸಿಕೊಂಡು ಧೈರ್ಯದಿಂದ ಹಾಗೂ ಸ್ಥೈರ್ಯದಿಂದ ಮತ್ತೆ ಮರಳುತ್ತಿರುವುದನ್ನು ಕಾಣಬಹುದಾಗಿತ್ತು. ಪೂಜ್ಯ ಸ್ವಾಮೀಜಿಯವರ ಪ್ರಕಾರ ಸಾಮಾನ್ಯ ಜನರಲ್ಲಿ ಆತ್ಮಸ್ಥೈರ್ಯ ಹಾಗೂ ಧೈರ್ಯವನ್ನು ಮೂಡಿಸುವ ಮಹತ್ತರವಾದ ಹೆಜ್ಜೆ ಇದು ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಹಿರಿಯ ಮುತ್ಸದ್ಧಿಗಳು ಹಾಗೂ ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕರಾದ ಶ್ರೀ ನರಸಿಂಹಯ್ಯರವರು, ಮಾಜಿ ಪುರಸಭಾಧ್ಯಕ್ಷರಾದ ಶ್ರೀ ಮಾನಂ ವೆಂಕಟಸ್ವಾಮಿ ರವರು, ಪಾವಗಡದ ಆರಕ್ಷಕ ಅಧಿಕಾರಿಗಳಾದ ಶ್ರೀ ನಾಗರಾಜು ರವರು, ಪುರಸಭೆಯ ಮುಖ್ಯಾಧಿಕಾರಿಗಳಾದ ಶ್ರೀ ನವೀನ್ ಚಂದ್ರ ರವರು, ಸ್ಥಳೀಯ ತಜ್ಞರಾದ ಡಾ.ಶಿವಕುಮಾರ್ ರವರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಒಟ್ಟಿನಲ್ಲಿ ಪೂಜ್ಯ ಸ್ವಾಮೀಜಿಯವರ ಅಹರ್ನಿಷಿ ಕೋವಿಡ್19 ನಿಯಂತ್ರಣ ಯೋಜನೆಗಳಲ್ಲಿ ಪಾವಗಡದ ಸಮಸ್ತ ಜನತೆ ಹಾಗೂ ರೈತಾಪಿ ಜನರು ಸಂಪೂರ್ಣವಾಗಿ ತಮ್ಮನ್ನೇ ತಾವು ತೊಡಗಿಸಿಕೊಂಡಿರುವುದು ಪಾವಗಡ ತಾಲ್ಲೂಕನ್ನು ಕೊರೊನಾ ಹೆಮ್ಮಾರಿಯಿಂದ ಮುಕ್ತವಾಗಿಸಲು ಸೂಕ್ತವಾದ ಹೆಜ್ಜೆ ಎನ್ನಬಹುದು.
ಕೋವಿಡ್19 ಹೆಮ್ಮಾರಿಯ ಜಾಗೃತಿ ನಡೆಯ ಮುಂದುವರಿದ ಭಾಗವಾಗಿ ಇಂದೂ ಸಹ ಪೂಜ್ಯ ಸ್ವಾಮಿ ಜಪಾನಂದಜೀ ರವರ ನೇತೃತ್ವದಲ್ಲಿ ಸರಳವಾದ ಕಾಲ್ನಡಿಗೆಯ ಕಾರ್ಯಕ್ರಮ ಏರ್ಪಟ್ಟಿತ್ತು. ಎಂದಿನಂತೆ 12 ಗಂಟೆಗೆ ಸರಿಯಾಗಿ ಗುರುಭವನದ ಸನಿಹದಲ್ಲಿರುವ ತರಕಾರಿ ಮಾರುಕಟ್ಟೆಯಿಂದ ಆರಂಭವಾಗಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಪಾದಯಾತ್ರೆ ಕೈಗೊಂಡು ಜನರಿಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಪುರಸಭೆಯ ಅಧಿಕಾರಿಗಳು ಮತ್ತು ಪಾವಗಡದ ಹಿರಿಯ ನಾಗರಿಕರು ಭಾಗವಹಿಸಿದ್ದರು.