IMG 20220714 WA0049

ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ….!

NATIONAL National - ಕನ್ನಡ


ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಯೋಜನೆ ಕುರಿತು ಎಐಸಿಸಿ ಪದಾಧಿಕಾರಿಗಳೊಂದಿಗೆ ಎಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿಗಳು ಮತ್ತು ಸಂಘಟನೆಗಳ ಮುಂಚೂಣಿ ಅಧ್ಯಕ್ಷರು ನವದೆಹಲಿಯಲ್ಲಿ ಇಂದು ಸಭೆ ನಡೆಸಿದರು.

ಭಾರತ್ ಜೋಡೋ ಯಾತ್ರೆಯು ಅಕ್ಟೋಬರ್ 2, 2022 ರಂದು ಪ್ರಾರಂಭವಾಗಲಿದೆ ಎಂದು ಉದಯಪುರ ಚಿಂತನ್ ಶಿವರ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ ಮೋದಿ ಸರ್ಕಾರ ಮತ್ತು ಬಿಜೆಪಿ ನಮ್ಮ ದೇಶದ ಪ್ರಜಾಪ್ರಭುತ್ವ, ನಮ್ಮ ದೇಶದ ಸಂವಿಧಾನ, ಹಾಗೂ ರಾಷ್ಟ್ರೀಯ ಸಂಸ್ಥೆಗಳ ಮೇಲೆ ಪದೇ ಪದೇ ಮಾಡುತ್ತಿರುವ ದಾಳಿಗಳನ್ನ ಗಮನಿಸಿದರೆ, ಭಾರತ್ ಜೋಡೋ ಯಾತ್ರೆಯನ್ನು ನಿಗದಿತ ದಿನಾಂಕಕ್ಕೂ ಮೊದಲೇ ಪ್ರಾರಂಭಿಸು ಅಗತ್ಯವಿದೆ. ಇದಕ್ಕಾಗಿ ಪ್ರದೇಶ ಕಾಂಗ್ರೆಸ್ ಸಮಿತಿಗಳು ಅಗತ್ಯ ಸಿದ್ಧತೆ ಮಾಡಿಕೊಂಡು ತಿಳಿಸಿದ ತಕ್ಷಣವೇ ಭಾರತ್ ಜೋಡೋ ಹೋರಾಟದ ದಿನಾಂಕವನ್ನ ಪ್ರಕಟಿಸಲಾಗುವುದು.

ಭಾರತ್ ಜೋಡೋ ಯಾತ್ರೆಯು ಸುಮಾರು 3500 ಕಿಲೋಮೀಟರ್‌ಗಳಷ್ಟು ದೂರ ಸಾಗುತ್ತದೆ ಮತ್ತು ಸುಮಾರು 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಮೂಲಕ ಹಾದು ಹೋಗಲಿದೆ. ಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ದೇಶದ ಉದ್ದಗಲಕ್ಕೂ ಅನೇಕ ಇತರ ಯಾತ್ರೆಗಳು ಮುಖ್ಯ ಪಾದಯಾತ್ರೆಯಲ್ಲಿ ಸೇರಿಕೊಳ್ಳಲಿವೆ. ಯಾತ್ರೆಯ ಮಾರ್ಗದ ನಿರ್ದಿಷ್ಟ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

75 ವರ್ಷಗಳ ಸ್ವಾತಂತ್ರ್ಯದ ನಂತರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲರಿಗೂ, ಒಡೆದು ಆಳುವ ರಾಜಕೀಯವನ್ನು ಸೋಲಿಸಿದವರಿಗೆ, ದೇಶಕ್ಕೆ ಅದರ ಶ್ರೇಷ್ಠ ಸಂವಿಧಾನವನ್ನು ನೀಡಲು ಒಗ್ಗೂಡಿದವರಿಗೆ ಮತ್ತು ಭಾರತವನ್ನು ಸ್ಥಾಪಿಸಿದ ಎಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸುತ್ತದೆ.

ಪ್ರಗತಿ, ಸಮೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಾಮರಸ್ಯದ ಹಾದಿ. ಇಂದು ನಮ್ಮ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಎಂದಿಗೂ ಭಾಗವಹಿಸದ ಮತ್ತು ರಾಷ್ಟ್ರಪಿತನ ಹತ್ಯೆಗೆ ಕಾರಣವಾದ ಅವರ ಸಿದ್ಧಾಂತಗಳು ದ್ವೇಷದ ರಾಜಕೀಯವನ್ನು ನಡೆಸುತ್ತಿರುವ ಕಾರಣ, ಭಾರತ್ ಜೋಡೋ ಯಾತ್ರೆಯನ್ನು ರಾಷ್ಟ್ರವ್ಯಾಪಿ ಆಂದೋಲನವಾಗಿ ಪ್ರಾರಂಭಿಸಲಾಗುತ್ತಿದೆ.

-ಮಹಾತ್ಮ ಗಾಂಧಿಯವರ ನೇತೃತ್ವದ ನಮ್ಮ ದೇಶದ ಸ್ವಾತಂತ್ರ್ಯದ ಚಳವಳಿಯಲ್ಲಿ ಆಧಾರವಾಗಿರುವ ಮೌಲ್ಯಗಳ ರಕ್ಷಣೆ, ಸಂರಕ್ಷಣೆ ಮತ್ತು ಪ್ರಚಾರಕ್ಕೆ ಬದ್ಧರಾಗಿರುವ ಪ್ರತಿಯೊಬ್ಬ ಭಾರತೀಯ

-ದ್ವೇಷ, ಧರ್ಮಾಂಧತೆ ಮತ್ತು ಧ್ರುವೀಕರಣದ ರಾಜಕೀಯದ ವಿರುದ್ಧ ಹೋರಾಡಲು ಸಮರ್ಪಿಸಿಕೊಂಡಿರುವ ಪ್ರತಿಯೊಬ್ಬ ಭಾರತೀಯ

-ಒಡೆದು ಆಳುವ ರಾಜಕೀಯದ ಬದಲಿಗೆ ಕೋಟಿಗಟ್ಟಲೇ ಯುವಕರಿಗೆ ಉದ್ಯೋಗಗಳನ್ನ ನೀಡುವುದು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಮ್ಮ ಕೋಟಿಗಟ್ಟಲೇ ಕುಟುಂಬಗಳ ಮೇಲಿನ ಹೊರೆ ತಗ್ಗಿಸುವುದು. ಜನರ ಕಲ್ಯಾಣ ಮತ್ತು ಯೋಗಕ್ಷೇಮವನ್ನ ಖಾತರಿಪಡಿಸುವುದು ಎಂದು ನಂಬುವ ಪ್ರತಿಯೊಬ್ಬ ದೇಶದ ರೈತರು, ಕೃಷಿ ಕಾರ್ಮಿಕರು ಮತ್ತು ಕೋಟಿಗಟ್ಟಲೇ ಆದಿವಾಸಿಗಳು. ದಲಿತರು ಮತ್ತು ಸಮಾಜದ ಇತರ ದುರ್ಬಲ ವರ್ಗಗಳಿಗೆ ಜೀವನೋಪಾಯ ಮತ್ತು ಘನತೆಯನ್ನು ಭದ್ರಪಡಿಸುವುದಕ್ಕಾಗಿ ನಮ್ಮ ಜಲ, ಅರಣ್ಯ ಮತ್ತು ಭೂಮಿಯನ್ನ ರಕ್ಷಣೆ ಮಾಡುವುದು.

-ಈ ಎಲ್ಲಾ ವಿಲಕ್ಷಣ ನೀತಿಗಳ ವಿರುದ್ಧ ದೇಶದ ಸಂವಿಧಾನವನ್ನು ಎತ್ತಿಹಿಡಿಯಲು ಮತ್ತು ಜಾತಿ, ವರ್ಗ, ನಂಬಿಕೆ, ಲಿಂಗ ಅಥವಾ ಭಾಷೆಯ ಹೊರತಾಗಿಯೂ ಎಲ್ಲರಿಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಿದ ಪ್ರತಿಯೊಬ್ಬ ಭಾರತೀಯ

-ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಾನ ಮನಸ್ಕ ರಾಜಕೀಯ ಪಕ್ಷಗಳು, ನಾಗರಿಕ ಸಮಾಜದ ಸಂಘಟನೆಗಳು, ವ್ಯಾಪಾರ ಮತ್ತು ವೃತ್ತಿಪರ ಸಂಘಗಳು ಈ ಉದ್ದೇಶಗಳಿಗೆ ಬದ್ಧವಾಗಿರುವ ಎಲ್ಲಾ ಭಾರತೀಯರಿಗೆ ಭಾರತ್ ಜೋಡೋ ಯಾತ್ರೆಯಲ್ಲಿ ಒಂದಾಗಲು ಮತ್ತು ಯಾತ್ರೆಯಲ್ಲಿ ಸೇರಿಕೊಳ್ಳಲು ಈ ಮೂಲಕ ಮನವಿ ಮಾಡಲಾಗುತ್ತಿದೆ.