!
ಜಯನಗರದಲ್ಲಿ ಶಶಿ ವಂಗಪಲ್ಲಿ
ಅವರ ಮುಗ್ಧ ಶೋರೂಂ ಆರಂಭ
ಒಂದು ವಾರದಲ್ಲಿ ಆರಂಭವಾದ ಎರಡನೇ ಶೋರೂಂ ಇದು
ಇತ್ತೀಚಿಗೆ ಮಲ್ಲೇಶ್ವರಂನಲ್ಲಿ ಹೊಸ ಶೋರೂಂ ಆರಂಭವಾಗಿತ್ತು
ಮದುವೆ ಸಮಾರಂಭಗಳಿಗೆ ಅಗತ್ಯವಿರುವ ಬಟ್ಟೆಗಳು ಲಭ್ಯ
ಬೆಂಗಳೂರು, 17 ಜುಲೈ 2022:ಸಾಂಪ್ರದಾಯಿಕ ನೇಯ್ಗೆ ಬಟ್ಟೆಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮುಗ್ಧ ದ ಮೂರನೇ ಸ್ಟೋರ್ ಅನ್ನು ಬೆಂಗಳೂರಿನ ಜಯನಗರದಲ್ಲಿ ಇಂದು ಅದ್ಧೂರಿಯಾಗಿ ಆರಂಭಿಸಲಾಯಿತು. ಬಿಟಿಎಂ ಲೇಔಟ್‍ನ ಶಾಸಕರಾದ ರಾಮಲಿಂಗಾರೆಡ್ಡಿ ಅವರು ಈ ಮುಗ್ಧ ಸ್ಟೋರ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕಿ ಮತ್ತು ಮುಖ್ಯ ವಿನ್ಯಾಸಗಾರ್ತಿಯಾಗಿರುವ ಶಶಿ ವಂಗಪಲ್ಲಿ ಮತ್ತು ಇತರರು ಇದ್ದರು.
ಚೆಟ್ಟಿನಾಡು ಇಂಟೀರಿಯರ್‍ಗಳೊಂದಿಗೆ ಸುಂದರವಾದ ದೇವಾಲಯದ ರೀತಿಯಲ್ಲಿ ಮಳಿಗೆಯನ್ನು ಸಿದ್ಧಪಡಿಸಲಾಗಿದ್ದು, ಗ್ರಾಹಕರಿಗೆ ಅನನ್ಯವಾದ ಅನುಭವವನ್ನು ನೀಡುತ್ತದೆ. 12,000 ಚದರಡಿಗಳಷ್ಟು ವಿಸ್ತಾರವಾಗಿರುವ ಈ ಮಳಿಗೆಯು ನಗರದಲ್ಲಿನ ಕೈಮಗ್ಗ ಉತ್ಪನ್ನಗಳ ಅತಿ ದೊಡ್ಡ ಸಂಗ್ರಹವನ್ನು ಹೊಂದಿದೆ. ಸ್ಟೋರ್‍ನಲ್ಲಿ ಕಾಂಜೀವರಂನಿಂದ ಬನಾರಸಿ ಸೀರೆ, ಇಕ್ಕತ್ತಾಸ್‍ನಿಂದ ಗಡ್ವಾಲ್‍ಗಳು, ಪೈಥಾನೀಸ್‍ನಿಂದ ಉಪ್ಪಡಾಸ್‍ವರೆಗಿನ ಎಲ್ಲಾ ಬಗೆಯ ಅತ್ಯುತ್ತಮವಾದ ಕೈಮಗ್ಗ ಉತ್ಪನ್ನಗಳು ಲಭ್ಯವಿವೆ. ದೇಶಾದ್ಯಂತ ನೇಕಾರರಿಂದ ತಯಾರಿಸಲಾಗಿರುವ ಈ ಉತ್ಪನ್ನಗಳು ಗ್ರಾಹಕರಿಗೆ ಮುದ ನೀಡಲಿವೆ. ಇಲ್ಲಿ ಫ್ಯಾನ್ಸಿ ಮತ್ತು ಡಿಸೈನರ್ ಸೀರೆಗಳ ಸಂಗ್ರಹವೂ ಇದೆ. ಆಧುನಿಕ ಮಹಿಳೆಯರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಮಧುಮಗಳ ಉಡುಗೆಗಳನ್ನು ತಯಾರಿಸಿ ಇಲ್ಲಿ ಮಾರಾಟಕ್ಕಿಡಲಾಗಿದೆ. ಈ ಉತ್ಪನ್ನಗಳು ಮಹಿಳೆಯರಿಗೆ ಎಲ್ಲಾ ಕಾಲಕ್ಕೂ ಹೇಳಿ ಮಾಡಿಸಿದಂತಿವೆ.
ಜಯನಗರದ ಶೋರೂಂ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಶಿ ವಂಗಪಲ್ಲಿ ಅವರು, “ಬೆಂಗಳೂರಿನಲ್ಲಿ ನಮ್ಮ ಮೂರನೇ ಸ್ಟೋರ್ ಅನ್ನು ಆರಂಭಿಸುತ್ತಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನಾವು ಮಲ್ಲೇಶ್ವರಂನಲ್ಲಿ ನಮ್ಮ ಸ್ಟೋರ್ ಅನ್ನು ಆರಂಭಿಸಿದ್ದೆವು. ನಮ್ಮ ಸಂಸ್ಥೆಯು ಬೆಂಗಳೂರು ನಗರ ಮತ್ತು ಇಲ್ಲಿನ ಜನರೊಂದಿಗೆ ದೀರ್ಘಾವಧಿಯವರೆಗೆ ಸಂಬಂಧ ಹೊಂದಿದ್ದೇವೆ. ನಾವು ಬೆಂಗಳೂರಿಗೆ ಪದಾರ್ಪಣೆ ಮಾಡುವ ಮೊದಲಿನಿಂದಲೂ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿರುವ ನಮ್ಮ ಔಟ್‍ಲೆಟ್‍ಗಳಿಗೆ ಭೇಟಿ ನೀಡುವ ಮೂಲಕ ನಗರದ ಗ್ರಾಹಕರು ನಮಗೆ ಆಶೀರ್ವದಿಸುತ್ತಾ ಬಂದಿದ್ದಾರೆ. ಇದು ನಮಗೆ ಪ್ರೇರಣೆಯನ್ನು ನೀಡಿತು. ಹೀಗಾಗಿ ನಾವು ಬೆಂಗಳೂರಿನಲ್ಲಿ ಎಚ್‍ಎಸ್‍ಆರ್, ಮಲ್ಲೇಶ್ವರಂ ಮತ್ತು ಇದೀಗ ಜಯನಗರದಲ್ಲಿ ನಮ್ಮ 3 ವಿಶಿಷ್ಟವಾದ ಲಕ್ಷುರಿ ರೀಟೇಲ್ ಮುಗ್ಧ ಸ್ಟೋರ್‍ಗಳನ್ನು ಆರಂಭಿಸಿದ್ದೇವೆ. ಮುಂಬರುವ ದಿನಗಳಲ್ಲಿ ನಾವು ಬೆಂಗಳೂರಿನ ಇತರೆಡೆಗಳಲ್ಲಿ ಮತ್ತು ಕರ್ನಾಟಕದಲ್ಲಿ ನಮ್ಮ ಮತ್ತಷ್ಟು ಶೋರೂಂಗಳನ್ನು ಆರಂಭಿಸುವ ಯೋಜನೆಯನ್ನು ರೂಪಿಸಿದ್ದೇವೆ’’ ಎಂದು ತಿಳಿಸಿದರು.
ಶಶಿ ವಂಗಪಲ್ಲಿ ಅವರು ತಮ್ಮ ಪ್ಯಾಶನ್ ಅನ್ನು ಮುಂದುವರಿಸಿ ತಮ್ಮ ಸಂಸ್ಥೆಯನ್ನು ಸ್ಥಾಪಿಸುವ ಕನಸನ್ನು ಹೊಂದಿದ್ದರು. ಮುಗ್ಧ ಆರ್ಟ್ ಸ್ಟುಡಿಯೋವನ್ನು 2012 ರಲ್ಲಿ ಆರಂಭಿಸುವ ಮೂಲಕ ಅವರು ಈ ಕನಸನ್ನು ನನಸಾಗಿಸಿಕೊಂಡರು. ಕೆಲವೇ ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದರು. ಅಲ್ಲದೇ, ದಕ್ಷಿಣ ಭಾರತೀಯ ಮತ್ತು ಅನಿವಾಸಿ ಭಾರತೀಯ ಗ್ರಾಹಕರಿಗೆ ಮೆಚ್ಚುಗೆಯನ್ನು ಗಳಿಸಿದರು. ಈ ಗ್ರಾಹಕರು ಶಶಿ ಅವರ ವಿನ್ಯಾಸಗಳನ್ನು ಸಾಕಷ್ಟು ಇಷ್ಟಪಟ್ಟು ಶ್ಲಾಘನೆ ವ್ಯಕ್ತಪಡಿಸಿದರು. ಹೊಸ ಪೀಳಿಗೆಯ ಮಧುಮಗಳಿಗೆ ಇಷ್ಟವೆನಿಸುವ ರೀತಿಯಲ್ಲಿ ಆಕರ್ಷಕ ಬಣ್ಣಗಳಲ್ಲಿ ವಿನ್ಯಾಸಗೊಳಿಸಿ ಅಪಾರ ಜನಮನ್ನಣೆಯನ್ನು ಗಳಿಸಿದ್ದಾರೆ. ಜನರು, ಸ್ಥಳಗಳು ಮತ್ತು ಪ್ರಕೃತಿಯಿಂದ ತನ್ನ ಸ್ಫೂರ್ತಿಯನ್ನು ಸೆಳೆಯುತ್ತಿರುವ ಅವರು ಸುಶ್ಮಿತಾ ಸೇನ್, ರಶ್ಮಿಕಾ, ರಾಕುಲ್ ಪ್ರೀತ್‍ಸಿಂಗ್, ತಾಪ್ಸಿಪನ್ನು, ಕಾಜಲ್ ಅಗರ್ವಾಲ್, ನೇಹಾ ಧೂಪಿಯಾ ಮತ್ತು ಇನ್ನೂ ಅನೇಕ ಸೆಲೆಬ್ರಿಟಿಗಳನ್ನು ತಮ್ಮ ವಿನ್ಯಾಸಗಳ ಮೂಲಕ ಆಕರ್ಷಿತರನ್ನಾಗಿ ಮಾಡಿದ್ದಾರೆ.
ವ್ಯಾಪಕ ಶ್ರೇಣಿಯ ಸಂಗ್ರಹದೊಂದಿಗೆ ಈ ಮುಗ್ಧ ಶೋರೂಂ ಗ್ರಾಹಕರಿಗೆ ಸೇವೆ ಸಲ್ಲಿಸುತ್ತದೆ ಮತ್ತು ಪ್ರತಿ ಋತುಮಾನಕ್ಕೂ ಸೂಕ್ತವಾದ ಉಡುಪುಗಳನ್ನು ಮಾರಾಟ ಮಾಡುತ್ತಿದೆ. ಹೊಸ ಕಂಚಿಪಟ್ಟು ಸೀರೆಗಳ ಸಂಗ್ರಹವು ಅತ್ಯಂತ ರೋಮಾಂಚಕಾರಿ ಬಣ್ಣಗಳು, ವಿಶಿಷ್ಟವಾದ ವಿನ್ಯಾಸಗಳನ್ನು ಹೊಂದಿದೆ. ಆಧುನಿಕ ಭಾರತೀಯ ವಧುಗಳಿಗೆ ಸರಿಹೊಂದುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿನ ಉತ್ಪನ್ನಗಳನ್ನು ಆಧುನಿಕ ಯುಗದ ಭಾರತೀಯ ವಧುವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಪ್ರಸ್ತುತ ಮುಗ್ಧ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಾದ್ಯಂತ 23+ ಮಳಿಗೆಗಳನ್ನು ಹೊಂದಿದ್ದು, ಪ್ರಪಂಚದಾದ್ಯಂತದ ಗ್ರಾಹಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ.