IMG 20220717 171403 scaled

ವಿಕ್ರಾಂತ್ ರೋಣ: ವಿಶ್ವದ ಮೊದಲ ಸೀಮಿತ ಆವೃತ್ತಿಯ ಎನ್.ಎಫ್.ಟಿ ಪ್ರೀಮಿಯರ್ ಸದಸ್ಯತ್ವಕ್ಕೆ ಚಾಲನೆ

FILM NEWS

ಕಾಫಿ ಅಂಡ್ ಬನ್ನ್ ಹಾಗೂ ಬ್ಲಾಕ್ ಟಿಕೆಟ್ಸ್ ನಿಂದ ಕಿಚ್ಚ ಸುದೀಪ ಅವರ ನಟನೆಯ ವಿಕ್ರಾಂತ್ ರೋಣದ ವಿಶ್ವದ ಮೊದಲ ಸೀಮಿತ ಆವೃತ್ತಿಯ ಎನ್.ಎಫ್.ಟಿ ಪ್ರೀಮಿಯರ್ ಸದಸ್ಯತ್ವಕ್ಕೆ ಚಾಲನೆ

ಬೆಂಗಳೂರು, ಜುಲೈ 17, 2022: ಬ್ಲಾಕ್ ಚೈನ್ ಆಧರಿತ ಟಿಕೆಟಿಂಗ್ ಪ್ಲಾಟ್ ಫಾರಂ ಬ್ಲಾಕ್ ಟಿಕೆಟ್ಸ್ ಕನ್ನಡ ಸೂಪರ್ಸ್ಟಾರ್ ಕಿಚ್ಚ ಸುದೀಪ ಅವರ ಹೊಸ 3ಡಿ ಚಲನಚಿತ್ರ ವಿಕ್ರಾಂತ್ ರೋಣದ ವಿಶೇಷ ಎನ್.ಎಫ್.ಟಿ ಪ್ರೀಮಿಯರ್ ಸದಸ್ಯತ್ವವನ್ನು ಪ್ರಾರಂಭಿಸುತ್ತಿದೆ. ಪ್ರಿಯಾ ಸುದೀಪ ಅವರು ಪ್ರಾರಂಭಿಸಿದ ಜಾಗತಿಕ ಹೂಡಿಕೆಯ ಕಂಪನಿ ಕಾಫಿ ಅಂಡ್ ಬನ್ನ್ ಇನ್ನೊವೇಷನ್ ಎನ್.ಎಫ್.ಟಿ ಟಿಕೆಟಿಂಗ್ ಹಕ್ಕುಗಳನ್ನು ಬ್ಲಾಕ್ ಟಿಕೆಟ್ಸ್ ಗೆ ನೀಡಿರುವುದನ್ನು ದೃಢಪಡಿಸಿದೆ. ಕಾಫಿ ಅಂಡ್ ಬನ್ನ್ ಇನ್ನೊವೇಷನ್ನ ಗ್ರೂಪ್ ಸಿಇಒ ಝಾಕಿರ್ಹುಸೇನ್ ಕರೀಂಖಾನ್ ಇತರೆ ಪ್ಲಾಟ್ಫಾರಂಗಳಿಗೆ ಹೋಲಿಸಿದರೆ ಬ್ಲಾಕ್ ಟಿಕೆಟ್ಸ್ ತಾಂತ್ರಿಕ ಔನ್ನತ್ಯವು ಈ ಚಿತ್ರಕ್ಕೆ ಟಿಕೆಟಿಂಗ್ ಪ್ಲಾಟ್ಫಾರಂ ಆಗಿ ಆಯ್ಕೆ ಮಾಡಿಕೊಳ್ಳಲು ಕಾರಣ ಎಂದರು.

IMG 20220717 WA0022

ಇದು ವಿಶ್ವದಲ್ಲಿಯೇ ಮೊದಲ ಬಾರಿಗೆ ಚಲನಚಿತ್ರವೇ ತನ್ನ ಪ್ರೀಮಿಯರ್ ಟಿಕೆಟ್ ಗಳು ಮತ್ತು ಸದಸ್ಯತ್ವಗಳನ್ನು ಎನ್.ಎಫ್.ಟಿ.ಗಳಾಗಿ ಬಿಡುಗಡೆ ಮಾಡುತ್ತಿರುವುದಾಗಿದೆ. ಅಭಿಮಾನಿಗಳು ಸಿಲ್ವರ್, ಗೋಲ್ಡ್, ಪ್ಲಾಟಿನಂ ಮತ್ತು ಡೈಮಂಡ್ ಎನ್.ಎಫ್.ಟಿ ಸದಸ್ಯತ್ವಗಳನ್ನು ಪಡೆಯುವುದಲ್ಲದೆ ಪ್ರೀಮಿಯರ್ ಕಾರ್ಯಕ್ರಮದಲ್ಲಿ ರೆಡ್-ಕಾರ್ಪೆಟ್ ಗೆ ಪ್ರವೇಶ, ಚಲನಚಿತ್ರದ ಎನ್.ಎಫ್.ಟಿ ಲೋಗೊ, ವಿಶೇಷವಾದ ಪಾರ್ಟಿ ಆಹ್ವಾನಗಳು, ಮುಂಚೂಣಿಯ ನಟರೊಂದಿಗೆ ಛಾಯಾಚಿತ್ರಗಳ ಅವಕಾಶಗಳು ಮತ್ತು ತಾರೆಯರೊಂದಿಗೆ ನೇರ ಸಂವಹನದ ಅವಕಾಶ ಹೊಂದುತ್ತಾರೆ. ವಿಕ್ರಾಂತ್ ರೋಣ ಚಲನಚಿತ್ರವು ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

IMG 20220717 171000

ವಿಕ್ರಾಂತ್ ರೋಣ ಫ್ಯಾಂಟಸಿ ಆ್ಯಕ್ಷನ್-ಸಾಹಸದ ಥ್ರಿಲ್ಲರ್ ಆಗಿದ್ದು ಅನೂಪ್ ಭಂಡಾರಿ ರಚಿಸಿ ನಿರ್ದೇಶಿಸಿದ್ದಾರೆ. ಜುಲೈ 26, 2022ರಂದು ಈ ಪ್ರೀಮಿಯರ್ ಕಾರ್ಯಕ್ರಮ ನಡೆಸಲಾಗುತ್ತದೆ. ಎನ್.ಎಫ್.ಟಿ ಸದಸ್ಯತ್ವ ಕೊಂಡ ಅಭಿಮಾನಿಗಳು ಅವುಗಳನ್ನು ಸ್ಮರಣಿಕೆಗಳಾಗಿ ಉಳಿಸಿಕೊಳ್ಳಬಹುದು ಅಥವಾ ಬ್ಲಾಕ್ ಚೈನ್ ನ್ನಲ್ಲಿ ಸೆಕೆಂಡರಿ ಮಾರುಕಟ್ಟೆಯಲ್ಲಿ ವಿಶೇಷ ಕಲೆಕ್ಟಿಬಲ್ಸ್ ಆಗಿ ಮಾರಾಟ ಮಾಡಬಹುದು. ಇದು ಅಭಿಮಾನಿಗಳು ವೈಯಕ್ತಿಕವಾಗಿ ಈ ಚಲನಚಿತ್ರದಲ್ಲಿ ತೊಡಗಿಕೊಳ್ಳುವಂತೆ ಮಾಡುವ ಮೂಲಕ ತಲ್ಲೀನಗೊಳಿಸುವ ಅನುಭವ ಸೃಷ್ಟಿಸುತ್ತದೆ. ಕಿಚ್ಚ ಸುದೀಪ ಅವರಲ್ಲದೆ `ವಿಕ್ರಾಂತ್ ರೋಣ’ದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್, ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ ಮತ್ತು ವಾಸುಕಿ ವೈಭವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

“ಇದು ದೊಡ್ಡ ಚಲನಚಿತ್ರ; ನಮಗೆ ಸದಾ ದೊಡ್ಡ ಆಲೋಚನೆ, ದೊಡ್ಡ ಚಿಂತನೆ ಇತ್ತು. ಚಲನಚಿತ್ರವೊಂದಕ್ಕೆ ವಿಶ್ವದ ಮೊದಲ ಎನ್.ಎಫ್.ಟಿ ಪ್ರೀಮಿಯರ್ ಸದಸ್ಯತ್ವ ಬಿಡುಗಡೆ ಮಾಡುವುದು ಹೊಸ, ಹೆಚ್ಚು ಸಂವಹನಪೂರ್ವಕ ಮತ್ತು ಸಕ್ರಿಯಗೊಳಿಸುವ ಅನುಭವವನ್ನು ನಮ್ಮ ಅಭಿಮಾನಿಗಳಿಗೆ ತರಲು ನೆರವಾಗಿದೆ. ಅಭಿಮಾನಿಗಳು ಈ ಅನುಭವವನ್ನು ದೀರ್ಘಕಾಲ ನೆನಪಿನಲ್ಲಿ ಇರಿಸಿಕೊಳ್ಳಬೇಕು ಎನ್ನುವುದು ನನ್ನ ಬಯಕೆ. ವಿಶ್ವದಲ್ಲಿ ಮೊಟ್ಟಮೊದಲ ಬಾರಿಗೆ ಬ್ಲಾಕ್ ಟಿಕೆಟ್ಸ್ ಜೊತೆಯಲ್ಲಿ ಸಹಯೋಗಕ್ಕೆ ನಾವು ಬಹಳ ಉತ್ಸುಕರಾಗಿದ್ದೇವೆ” ಎಂದು ತಮ್ಮ ಚಿತ್ರದ ಎನ್.ಎಫ್.ಟಿ ಸದಸ್ಯತ್ವ ಬಿಡುಗಡೆ ಮಾಡಿದ ಕಿಚ್ಚ ಸುದೀಪ ಹೇಳಿದರು.

IMG 20220717 171423

“ಈ ಸಾಂಕ್ರಾಮಿಕವು ಮನರಂಜನೆಯ ಉದ್ಯಮಕ್ಕೆ ಅದರಲ್ಲಿಯೂ ಚಲನಚಿತ್ರ ವಹಿವಾಟಿಗೆ ಬಹಳ ಕಠಿಣವಾಗಿತ್ತು. ಉದ್ಯಮವು ಮತ್ತೆ ಯಥಾಸ್ಥಿತಿಗೆ ಮರಳುತ್ತಿರುವಾಗ ಎನ್.ಎಫ್.ಟಿ ಟಿಕೆಟಿಂಗ್ ಅಭಿಮಾನಿಗಳ ಸಕ್ರಿಯತೆಯನ್ನು ಹೆಚ್ಚಿಸುವ ವಿಧಾನವಾಗಿದ್ದು ಅವರಿಗೆ ಚಲನಚಿತ್ರದ ಇತಿಹಾಸದಲ್ಲಿ ತಮ್ಮದೇ ಆದ ಭಾಗವನ್ನು ಹೊಂದಲು ಅವಕಾಶ ನೀಡುತ್ತಿದೆ. ವಿಸ್ತರಿಸುತ್ತಿರುವ ಮೆಟಾವರ್ಸ್ ಮತ್ತು ಎನ್.ಎಫ್.ಟಿಗಳ ಜಗತ್ತನ್ನು ಆವಿಷ್ಕರಿಸಲು ನಾವು ಬಹಳ ಉತ್ಸುಕರಾಗಿದ್ದೇವೆ” ಎಂದು ಪ್ರಿಯಾ ಸುದೀಪ ಹೇಳಿದರು.

ಎನ್.ಎಫ್.ಟಿಗಳು ಬ್ಲಾಕ್ ಟಿಕೆಟ್ಸ್ ನಲ್ಲಿ ರೂಪಿಸಲಾದ ಮಾಲೀಕತ್ವದ ಪ್ರಮಾಣಪತ್ರಗಳು ಅವು ಡಿಜಿಟಲ್ ಅಥವಾ ನೈಜ ಜಗತ್ತಿನ ಸಂಪತ್ತನ್ನು ಪ್ರತಿನಿಧಿಸುತ್ತವೆ” ಟಿಕೆಟಿಂಗ್ ಉದ್ಯಮವು ಹಳೆಯ ಮಾದರಿಯ ಟಿಕೆಟಿಂಗ್ ಪದ್ಧತಿ ಹೊಂದಿದ್ದು ಅದು ದೋಷಯುತವಾಗಿತ್ತು ಮತ್ತು ಆವಿಷ್ಕಾರದ ಕೊರತೆ ಹೊಂದಿತ್ತು. ಬ್ಲಾಕ್ ಟಿಕೆಟ್ಸ್ ಪ್ರವೇಶದಿಂದ ಅದು ನಿರ್ಲಕ್ಷಿಸುತ್ತಿದ್ದ ಟಿಕೆಟ್ ಳನ್ನು ಆನಂದದಾಯಕ ಅನುಭವಗಳಿಗೆ ಪರಿವರ್ತಿಸುತ್ತಿದ್ದು ಸಂಘಟಕರು, ಕಲಾವಿದರು ಮತ್ತು ಗ್ರಾಹಕರಿಗೆ ಹೊಸ ದಿಗಂತಗಳನ್ನು ತೆರೆದಿದೆ” ಎಂದು ಬ್ಲಾಕ್ ಟಿಕೆಟ್ಸ್ ನ
ಸಂಸ್ಥಾಪಕ ನಿಶಾಂತ್ ಚಂದ್ರ ಹೇಳಿದರು.

ನಾವು ನಿಜಕ್ಕೂ ಕಿಚ್ಚ ಸುದೀಪ ಹಾಗೂ ವಿಕ್ರಾಂತ್ ರೋಣ ಜೊತೆಯಲ್ಲಿ ಸಹಯೋಗವು ಚಲನಚಿತ್ರೋದ್ಯಮಕ್ಕೆ ಮುಂದುವರಿದ ಮೌಲ್ಯ ಸೃಷ್ಟಿಸುತ್ತದೆ ಎಂದು ನಂಬುತ್ತೇವೆ. ವಿಶ್ವದಲ್ಲಿ ಮೊಟ್ಟಮೊದಲ ಬಾರಿಕೆ ಚಲನಚಿತ್ರವೊಂದು ಎನ್.ಎಫ್.ಟಿ ಸದಸ್ಯತ್ವಗಳನ್ನು ಪ್ರಾರಂಭಿಸುತ್ತಿದೆ. ಇದು ಚಿತ್ರ ನಿರ್ಮಾಪಕರಿಗೆ ಮತ್ತೊಂದು ಮಾರ್ಗದ ಲಭ್ಯತೆ ತೋರಿಸುತ್ತದೆ ಮತ್ತು ಅಭಿಮಾನಿಗಳಿಗೆ ಜೀವಿತಕಾಲದ ಅನುಭವ ಉಳಿಸುತ್ತದೆ” ಎಂದು ಬ್ಲಾಕ್ ಟಿಕೆಟ್ಸ್ ಸಂಸ್ಥಾಪಕ ಅಭಿನವ್ ಗಾರ್ಗ್ ಹೇಳಿದರು.

ಬ್ಲಾಕ್ ಟಿಕೆಟ್ಸ್ ಭಾರತದಲ್ಲಿ ಎನ್.ಎಫ್.ಟಿ ಆಧರಿತ ಟಿಕೆಟಿಂಗ್ ಅನುಭವದಲ್ಲಿ ಮುಂಚೂಣಿಯಲ್ಲಿದೆ ಮತ್ತು ಈಗಾಗಲೇ ಹಲವಾರು ಕಾರ್ಯಕ್ರಮಗಳಲ್ಲಿ ಸಹಯೋಗ ಹೊಂದಿದ್ದು ಮೆಟಾವರ್ಸ್ ನಲ್ಲಿ ಮೊಟ್ಟಮೊದಲ ಹೋಳಿ ಹಬ್ಬ, ಎನ್.ಎಫ್.ಟಿ ಆಧರಿತ ಮ್ಯೂಸಿಕಾಥಾನ್ ಆಯೋಜಿಸಿತ್ತು. ವೆಬ್3ಗೆ ಅವರು ಯೂನಿಕಸ್ ಒನ್ ಎಂಬ ಮಲ್ಟಿಚೈನ್ ವೆಬ್3 ಪ್ಲಾಟ್ಫಾರಂ ಜೊತೆಯಲ್ಲಿ ಸಹಯೋಗ ಹೊಂದಿತ್ತು. ಬ್ಲಾಕ್ ಟಿಕೆಟ್ಸ್ ವಿಕ್ರಾಂತ್ ರೋಣ ಜೊತೆಯಲ್ಲಿನ ಸಹಯೋಗವು ಹಲವು ಇತರೆ ಸರಣಿಯಲ್ಲಿ ಹೊಚ್ಚಹೊಸದಾಗಿದೆ. ಈ ಅತ್ಯಂತ ನಿರೀಕ್ಷೆಯ ಚಲನಚಿತ್ರವು ಜುಲೈ 28, 2022ರಂದು ಬಿಡುಗಡೆಯಾಗಲಿದೆ.

ವಿಡಿಯೋ