20220717 002035

ಕಾಂಗ್ರೆಸ್: ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಅವೈಜ್ಞಾನಿಕವಾಗಿದೆ…!

POLATICAL STATE

ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಅವೈಜ್ಞಾನಿಕವಾಗಿದೆ: ರಾಮಲಿಂಗಾ ರೆಡ್ಡಿ ಆರೋಪ

ಬೆಂಗಳೂರು:

‘ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಅವೈಜ್ಞಾನಿಕವಾಗಿದ್ದು, ಬಿಜೆಪಿ ಪಕ್ಷಕ್ಕೆ ಅನುಕೂಲವಾಗುವಂತೆ ಹಾಗೂ ಸಾರ್ವಜನಿಕರಿಗೆ ಅನಾನುಕೂಲವಾಗುವಂತೆ ಮಾಡಲಾಗಿದೆ. ಈ ಮರುವಿಂಗಡಣೆ ವಿಚಾರವಾಗಿ 3 ಸಾವಿರಕ್ಕೂ ಹೆಚ್ಚು ಆಕ್ಷೆಪಗಳು ವ್ಯಕ್ತವಾಗಿದ್ದರೂ ಹೆಸರು ಬದಲಾವಣೆ ಹೊರತು ಯಾವುದೇ ವಾರ್ಡ್ ಗಳಲ್ಲಿ ಬದಲಾವಣೆ ತಂದಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಶನಿವಾರ ಮಾತನಾಡಿದ ಅವರು ವಾರ್ಡ್ ಮರುವಿಂಗಡಣೆ ವಿಚಾರವಾಗಿ ಹೇಳಿದ್ದಿಷ್ಟು;

ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸಂಬಂಧಿಸಿದಂತೆ ಸರ್ಕಾರ ವಾರ್ಡ್ ಮರುವಿಂಗಡಣೆಯನ್ನು ಪ್ರಕಟಿಸಿ, 15 ದಿನ ಆಆಕ್ಷೇಪಗಳಿಗೆ ಅವಕಾಶ ಮಾಡಿಕೊಟ್ಟಿತ್ತು. ಈ ವಿಚಾರವಾಗಿ 3 ಸಾವಿರಕ್ಕೂ ಹೆಚ್ಚು ಆಕ್ಷೇಪಗಳು ಸಲ್ಲಿಕೆಯಾಗಿದ್ದು ಇದರಲ್ಲಿ ಹಲವು ಆಕ್ಷೇಪಗಳು ವಾರ್ಡ್ ಗಳ ಹೆಸರು ಬದಲಾವಣೆ ವಿಚಾರವಾಗಿವೆ. ಉಳಿದಂತೆ ಎಲ್ಲ ಆಕ್ಷೇಪಗಳು ಅವೈಜ್ಞಾನಿಕವಾಗಿ ವಾರ್ಡ್ ಮರುವಿಂಗಡಣೆ ಮಾಡಲಾಗಿದೆ ಎಂಬ ವಿಚಾರವಾಗಿ ಸಲ್ಲಿಕೆಯಾಗಿದೆ.

ಅಮಿಬಾಗಳಿಗಾದರೂ ತಕ್ಕಮಟ್ಟಿಗೆ ಆಕಾರವಿರುತ್ತದೆ. ಆದರೆ ಈಗ ಮರುವಿಂಗಡಣೆಯಾದ ವಾರ್ಡ್ ಗಳಿಗೆ ಆಕಾರವೇ ಇಲ್ಲದಂತಾಗಿದೆ.

ಈ ವಿಚಾರವಾಗಿ ನಾನು ಈ ಹಿಂದೆ ಅನೇಕ ವಿಚಾರ ಹೇಳಿದ್ದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಕಂದಾಯ ಅಧಿಕಾರಿಗಳು, ಜಂಟಿ ಆಯುಕ್ತರು ಸೇರಿ ವಾರ್ಡ್ ಗಳ ಗಡಿ ಕುರಿತು ಚರ್ಚೆ ಮಾಡಿ ಮಾರ್ಗಸೂಚಿಯಂತೆ ನಿರ್ಧಾರ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ 28 ವಿಧಾನಸಭಾ ಕ್ಷೇತ್ರದ ಕಂದಾಯ ಅಧಿಕಾರಿಗಳಿಗೆ, ಜಂಟಿ ಆಯುಕ್ತರಿಗೆ ಯಾವುದೇ ಮಾಹಿತಿ ಇಲ್ಲ. ಈ ಮರುವಿಂಗಡಣೆ ಪ್ರಕ್ರಿಯೆ ಬಿಜೆಪಿ ಶಾಸಕರು, ಸಂಸದರ ಕಚೇರಿಯಲ್ಲಿ ನಿರ್ಧಾರವಾಗಿ ಕೇಶವಕೃಪದಲ್ಲಿ ಅಂತಿಮ ಒಪ್ಪಿಗೆ ಪಡೆಯಲಾಗಿದೆ.

ಈಗ ಇಷ್ಟೋಂದು ಆಕ್ಷೇಪ ವ್ಯಕ್ತವಾದ ಬಳಿಕವೂ ಕಂದಾಯ ಅಧಿಕಾರಿಗಳಾಗಲಿ, ಜಂಟಿ ಆಯುಕ್ತರಾಗಲಿ ಬಂದು ಪರಿಶೀಲನೆ ನಡೆಸಲೇ ಇಲ್ಲ. ಈಗ ಈ ಆಕ್ಷೇಪಗಳು ಸಿಎಂ ಕಚೇರಿಯಂದ ಆಚೆ ಬರಲೇ ಇಲ್ಲ. 243 ವಾರ್ಡ್ ಗಳು ಸರಿಯಾಗಿವೆ ಎಂದು ಸಣ್ಣ ಬದಲಾವಣೆ ಇಲ್ಲದೆ ಮತ್ತೆ ಅದನ್ನೇ ಬಿಡುಗಡೆ ಮಾಡಿದ್ದಾರೆ. ಕೇವಲ ಹೆಸರಿಗೆ ಮಾತ್ರ ಆಕ್ಷೇಪಗಳನ್ನು ಸಂಗ್ರಹಿಸಿದ್ದಾರೆ.

ಈ ವಿಂಗಡಣೆ ಪ್ರಕ್ರಿಯೆ ಜನರಿಗೆ ಅನುಕೂಲವಾಗಲು ಮಾಡಿಲ್ಲ, ಬಿಜೆಪಿ ಪಕ್ಷಕ್ಕೆ ಅನುಕೂಲವಾಗುವಂತೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ಎಲ್ಲಿ ಗೆಲ್ಲಲು ಸಾಧ್ಯವಿದೆಯೋ ಅಲ್ಲಿ ಮತ ವಿಭಜಿಸಿ ಸೋಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಪ್ರತಿ ಚುನಾವಣೆಯಲ್ಲೂ ಶೇ.20ರಷ್ಟು ತಟಸ್ಥ ಮತದಾರರು ಯಾವುದೇ ಪಕ್ಷಕ್ಕೆ ಸೇರದೆ ಮತಹಾಕುತ್ತಾರೆ. ಅವರು ಹಾಕುವ ಮತಗಳೇ ನಿರ್ಣಾಯಕವಾಗುತ್ತದೆ. ಈ ವಿಶ್ಲೇಷಣೆಯನ್ನು ಅವರು ಚುನಾವಣೆ ಫಲಿತಾಂಶ ಬಂದಾಗ ಮಾಡಿಕೊಳ್ಳಲಿ.

ಸದ್ಯ ನಮ್ಮ ಜನಸಂಖ್ಯೆ ಆಧಾರದ ಮೇಲೆ ನೋಡಿದರೆ, ಪ್ರತಿ ವಾರ್ಡ್ ಜನಸಂಖ್ಯೆ ಸರಾಸರಿ 35 ಸಾವಿರ ಇರಬೇಕು. ಕಾಂಗ್ರೆಸ್ ಪಕ್ಷ ಇರುವ ಕಡೆಗಳಲ್ಲಿ ಪ್ರತಿ ವಾರ್ಡ್ ಜನಸಂಖ್ಯಾ ಪ್ರಮಾಣ 36,753 ಮತದಾರರು ಇದ್ದಾರೆ. ಬಿಜೆಪಿ ಇರುವ ಕಡೆಗಳಲ್ಲಿ 33,927 ಮತದಾರರು ಬರುತ್ತಾರೆ. ಗೋವಿಂದರಾಜನಗರ ಕ್ಷೇತ್ರದ ವಾರ್ಡ್ ಗಳಲ್ಲಿ 30 ಸಾವಿರಕ್ಕಿಂತಲೂ ಕಡಿಮೆ ಮತದಾರರಿದ್ದಾರೆ. ಈ 35 ಸಾವಿರ ಸರಾಸರಿಯಲ್ಲಿ ನೋಡಿದರೆ ಬಿಜೆಪಿ ಇರುವ ಕ್ಷೇತ್ರಗಳಲ್ಲಿ 140 ವಾರ್ಡ್ ಗಳು ಇರಬೇಕಿತ್ತು. ಆದರೆ ಈಗ 145 ಸ್ಥಾನಗಳನ್ನು ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ 103 ವಾರ್ಡ್ ಗಳು ಬರಬೇಕಿತ್ತು, ಆದರೆ ಕೇವಲ 98 ವಾರ್ಡ್ ಗಳನ್ನು ನೀಡಿದ್ದಾರೆ. ಬ್ಯಾಟರಾಯನಪುರ ಜಯನಗರ, ಚಾಮರಾಜಪೇಟೆ, ದಾಸರಳ್ಳಿ ಕ್ಷೇತ್ರಗಗಳಲ್ಲಿ ಜನಸಂಖ್ಯೆ ಪರಿಗಣಿಸಿದರೆ 1 ವಾರ್ಡ್ ಗಳನ್ನು ಕಡಿಮೆ ಮಾಡಿ ಅವುಗಳನ್ನು ಬಿಜೆಪಿ ಇರುವ ಕ್ಷೇತ್ರಗಳಲ್ಲಿ ಸೇರಿಸಿಕೊಂಡಿದ್ದಾರೆ.

ಚಾಮರಾಜಪೇಟೆಯ ವಾರ್ಡ್ ಗಳಲ್ಲಿನ ಜನಸಂಖ್ಯೆ 39 ಸಾವಿರ ಸರಾಸರಿಯಲ್ಲಿದ್ದರೆ, ಪಕ್ಕದ ಚಿಕ್ಕಪೇಟೆ ಕ್ಷೇತ್ರದ ವಾರ್ಡ್ ಗಳಲ್ಲಿ ಜನಸಂಖ್ಯೆ ಪ್ರಮಾಣ 32 ಸಾವಿರ ಸರಾಸರಿಯಷ್ಟಿದೆ. ಇನ್ನು ಗೋವಿಂದರಾಜನಗರ ಕ್ಷೇತ್ರದ ವಾರ್ಡ್ ಗಳ ಜನಸಂಖ್ಯೆ ಸರಾಸರಿ 30 ಸಾವಿರಕ್ಕಿಂತ ಕಡಿಮೆ ಇದೆ. ಹೀಗೆ ಜನಸಂಖ್ಯೆ ಆಧಾರದಲ್ಲೂ ಬಿಜೆಪಿಗೊಂದು ರೀತಿ ಕಾಂಗ್ರೆಸ್ ಗೊಂದು ರೀತಿ ವಾರ್ಡ್ ವಿಂಗಡಣೆ ಮಾಡಿದ್ದಾರೆ.

ಇನ್ನು ವಾರ್ಡ್ ಗಳ ಹೆಸರು ಬದಲಾವಣೆ ಅಧಿಕಾರ ಸರ್ಕಾರಕ್ಕಿದೆ. ಆದರೆ ಇಲ್ಲಿ ವಾರ್ಡ್ ಮರುವಂಗಡಣಾ ಸಮಿತಿಯೇ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಹೆಸರುಗಳನ್ನು ಬದಲಾವಣೆ ಮಾಡಿದೆ. ಆ ಮೂಲಕ ಈ ವಾರ್ಡ್ಗಳ ಮರುವಿಂಗಡಣೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇದೆ ಎಂಬುದು ಸಾಬೀತಾಗುತ್ತದೆ.’

ಪ್ರಶ್ನೋತ್ತರ

ಈ ವಿಚಾರವಾಗಿ ನ್ಯಾಯಾಲಯದ ಮೋರೆ ಹೋಗುತ್ತೀರಾ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಸೋಮವಾರ ವಕೀಲರನ್ನು ಭೇಟಿ ಮಾಡಿ ಅವರ ಅಭಿಪ್ರಾಯ ಪಡೆಯುತ್ತೇವೆ. ಇಲ್ಲಿ ನಮ್ಮ ಪಕ್ಷಕ್ಕೆ ತೊಂದರೆ ಆಗುವುದಕ್ಕಿಂತ ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ನಾವು ಆಕ್ಷೇಪ ವ್ಯಕ್ತಪಡಿಸುತ್ತಿದ್ದೇವೆ. ಮಡಿವಾಳ ವ್ಯಾಪ್ತಿಯಲ್ಲಿ ಮಡಿವಾಳ ಗ್ರಾಮವೇ ಹೊರಗಿಡಲಾಗಿದೆ. ಕೇವಲ ಹೆಸರಿದ್ದು, ಗ್ರಾಮವಿಲ್ಲವಾಗಿದೆ. ಪ್ರತಿ ಕ್ಷೇತ್ರದ ಕಂದಾಯ ಅಧಿಕಾರಿಗಳು ಈ ಕೆಲಸ ಮಾಡಿದ್ದರೆ ಅವರಿಗೆ ಈ ಜ್ಞಾನವಿರುತ್ತಿತ್ತು. ಆದರೆ ಬಿಜೆಪಿ ಶಾಸಕರು ಮಂತ್ರಿಗಳ ಆದೇಶದಂತೆ ಮಾಡಲಾಗಿದೆ. ಹೀಗಾಗಿ ಈ ರೀತಿ ಆಗಿದೆ’ ಎಂದು ಉತ್ತರಿಸಿದರು.

ಈ ವಿಚಾರವಾಗಿ ಚುನಾವಣೆ ಮುಂದೂಡುವಂತೆ ಆಗ್ರಹಿಸುತ್ತೀರಾ ಎಂಬ ಪ್ರಶ್ನೆಗೆ, ‘ಈ ವಿಚಾರವನ್ನು ಒಂದು ವಾರದಲ್ಲಿ ಸರಿಪಡಿಸಬಹುದು. ನಾವು ಚುನಾವಣೆ ಮುಂದೂಡುವಂತೆ ಹೇಳುವುದಿಲ್ಲ. ನಾವು ನ್ಯಾಯಾಲಯಕ್ಕೆ ಹೋದರೂ 10-15 ದಿನಗಳಲ್ಲಿ ಅರ್ಜಿ ಇಥ್ಯರ್ಥ ಮಾಡಿ ಎಂದು ಕೇಳುತ್ತೇವೆ’ ಎಂದರು.

ಅನುದಾನ ತಾರತಮ್ಯ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾನು ಪದೇ ಪದೆ ಒಂದು ಮಾತು ಹೇಳುತ್ತೇನೆ. ಬೆಂಗಳೂರು ಅಭಿವೃದ್ಧಿ ಎಂದರೆ 28 ಕ್ಷೇತ್ರಗಳ ಅಭಿವೃದ್ಧಿಯೇ ಹೊರತು, ಕೇವಲ ಬಿಜೆಪಿ ಶಾಸಕರ ಕ್ಷೇತ್ರಗಳ ಅಭಿವೃದ್ಧಿಯಲ್ಲ. ಬಿಜೆಪಿ ಶಾಸಕರಿಗೆ ಮಾತ್ರ ಅನುದಾನ ಕೊಟ್ಟು, ಕಾಂಗ್ರೆಸ್ ಜೆಡಿಎಸ್ ಕ್ಷಏತ್ರಗಳಇಗೆ ಅನುದಾನ ನೀಡದಿದ್ದರೆ, ಅಭಿವೃದ್ಧಿ ಆಗುವುದಿಲ್ಲ. ಅದು ಬೆಂಗಳೂರು ಅಭಿವೃದ್ಧಿ ಹೇಗೆ ಸಾಧ್ಯ? ಆಗ ನೀವು ಬೆಂಗಳೂರು ಅಭಿವೃದ್ಧಿ ಎಂದು ಹೇಳಿಕೊಳ್ಳಬೇಡಿ. ಆ ಹಕ್ಕು ನಿಮಗಿಲ್ಲ. ಕೇವಲ ಬಿಜೆಪಿ ಶಆಸಕರ ಕ್ಷೇತ್ರ ಅಭಿವೃದ್ಧಿ ಎಂದು ಹೇಳಿಕೊಳ್ಳಲಿ. ಬಿಜೆಪಿ ಶಾಸಕರಿಗೆ 2718 ಕೋಟಿ, ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ 1022 ಕೋಟಿ, ಜೆಡಿಎಸ್ ನ ದಾಸರಹಳ್ಳಿ ಕ್ಷೇತ್ರಕ್ಕೆ 125 ಕೋಟಿ ಕೊಟ್ಟಿದ್ದಾರೆ. ಅತಿ ಕಡಿಮೆ ಅನುದಾನ ಕೊಟ್ಟಿರುವುದು ಜಯನಗರ ಹಾಗೂ ವಿಜಯನಗರ ಕ್ಷೇತ್ರಗಳಿಗೆ ಕೇವಲ 60 ಕೋಟಿ ನೀಡಲಾಗಿದೆ’ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರದ ಅಕ್ರಮಗಳ ಕುರಿತು ತನಿಖೆ ಮಾಡುತ್ತೇವೆ ಎಂಬ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾವು ಅಧಿಕಾರ ಕಳೆದುಕೊಂಡು 4 ವರ್ಷವಾಗಿದ್ದು, ಕಳೆದ ಮೂರು ವರ್ಷಗಳಿಂದ ಅವರು ಆಡಳಿತ ನಡೆಸುತ್ತಿದ್ದಾರೆ. ನಮ್ಮ ಅವಧಿಯಲ್ಲಿ ಅಕ್ರಮ ನಡೆದಿದ್ದರೆ, ಕಳೆದ 3 ವರ್ಷಗಳಲ್ಲಿ ತನಿಖೆ ಮಾಡಬಹುದಿತ್ತು. ಬೇಡ ಎಂದಿದ್ದೆವಾ? ನಾವು ಅವರನ್ನು ಕಟ್ಟಿಹಾಕಿದ್ದೆವಾ? ಅವರದೇ ಸರ್ಕಾರ ಇತ್ತು, ಅವರು ಯಾವ ತನಿಖೆ ಬೇಕಾದರೂ ಮಾಡಬಹುದಿತ್ತು. ಈಗ ಅವರ ಮೇಲೆ ಆರೋಪ ಬಂದಿದೆ ಎಂದು ಈ ರೀತಿ ಹೇಳುತ್ತಿದ್ದಾರೆ. ನಮ್ಮ ಕಾಲದಲ್ಲಿ ಅಕ್ರಮ ನಡೆದಿದ್ದರೆ ತನಿಖೆ ಮಾಡಿ ಯಾರು ಬೇಡ ಎಂದರು? ಮೂರು ವರ್ಷದಿಂದ ಕಡಲೆ ಕಾಯಿ ತಿನ್ನುತ್ತಿದ್ದರಾ? ಈಗ ಜ್ಞಾನೋದಯ ಆಗಿದೆಯಾ? ಆಗ ವಿರೋಧ ಪಕ್ಷದಲ್ಲಿದ್ದಾಗ ಏನು ಮಾಡುತ್ತಿದ್ದಿರಿ? ಆಗಲೇ ವಿಧಾನಸಭೆಯಲ್ಲಿ ಮಾತನಾಡಬಹುದಿತ್ತು, ಲೋಕಯುಕ್ತ, ಎಸಿಬಿಗೆ ದೂರು ನೀಡಬಹುದಿತ್ತು. ನಿಮ್ಮದೇ ಕೇಂದ್ರ ಸರ್ಕಾರಕ್ಕೆ ಹೇಳಿ ತನಿಖೆ ಮಾಡಿಸಬಹುದಿತ್ತು ಯಾಕೆ ಮಾಡಲಿಲ್ಲ’ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರ ಹುಟ್ಟು ಹಬ್ಬ ಕಾರ್ಯಕ್ರಮ ಕುರಿತು ಪಕ್ಷದಲ್ಲಿ ಅಸಮಾಧ್ನಾ ಇದೆಯೇ ಎಂದು ಕೇಳಿದಾಗ, ‘ಅದೆಲ್ಲಾ ಸುಳ್ಳು. ಅವರ ಜನ್ಮದಿನ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗವಹಿಸುತ್ತೇವೆ. ರಾಹುಲ್ ಗಾಂಧಿ ಅವರು ಬರುತ್ತಿದ್ದಾರೆ. ಯಡಿಯೂರಪ್ಪ ಅವರ 60ನೇ ಹುಟ್ಟುಹಬ್ಬವನ್ನು ಅರಮನೆ ಮೈದಾನದಲ್ಲಿ ಮಾಡಿದ್ದರು. ಆಗಲೇ ಅವರಿಗೆ ರಾಜಾ ಹುಲಿ ಎಂದು ಹೆಸರು ನೀಡಲಾಯಿತು. 60, 75 ವರ್ಷ ಪೂರೈಸುವುದು ವಿಶೇಷ. ಹೀಗಾಗಿ ಅವರ ಅಭಿಮಾನಿಗಳು ಮಾಡುತ್ತಿದ್ದಾರೆ. ಮನೆಯಲ್ಲಿ ದೊಡ್ಡವರಿಗೆ ಷಷ್ಠಿ ಪೂಜೆ ಮಾಡುವುದಿಲ್ಲವೇ?’ ಎಂದು ತಿಳಿಸಿದರು.

ಶಿವಕುಮಾರ್ ಅವರ ಉತ್ಸವ ಮಾಡುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಸದ್ಯಕ್ಕೆ ಆ ರೀತಿ ಯಾವುದೇ ಆಲೋಚನೆ ಇಲ್ಲ. ಅವರಿಗೆ 75 ವರ್ಷ ಪೂರ್ಣಗೊಂಡ ನಂತರ ನೋಡಿಕೊಳ್ಳೋಣ. ಅವರಿಗೆ ಇನ್ನೂ 60 ವರ್ಷ ಇನ್ನು 15 ವರ್ಷ ಸಮಯಾವಕಾಶವಿದೆ’ ಎಂದರು.

ಕೋವಿಡ್ ವಿಚಾರದಲ್ಲಿ ಲೆಕ್ಕ ಕೇಳುವ ಮುಖ್ಯಮಂತ್ರಿಗಳೇ, ನಿಮಗೆ ಬೇಕಾದ ತನಿಖೆ ಮಾಡಿಸಿ ನಾವು ಸಿದ್ಧರಿದ್ದೇವೆ: ಡಿ.ಕೆ. ಶಿವಕುಮಾರ್ ಸವಾಲ್

ಬೆಂಗಳೂರು:

‘ಕೋವಿಡ್ ಸಮಯದಲ್ಲಿ ಕಾರ್ಮಿಕರ ಪ್ರಯಾಣಕ್ಕೆ ಪಕ್ಷದ ವತಿಯಿಂದ ಸಾರಿಗೆ ಇಲಾಖೆಗೆ 1 ಕೋಟಿ ರೂ. ನೀಡಲು ಮುಂದಾದ ಬಗ್ಗೆ ಲೆಕ್ಕ ಕೇಳುವ ಮುಖ್ಯಮಂತ್ರಿಗಳೇ, ನಾವು ಅಕ್ರಮ ಮಾಡಿದ್ದರೆ ನಿಮಗೆ ಬೇಕಾದ ತನಿಖೆ ಮಾಡಿಸಿ ನಾವು ಸಿದ್ಧರಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ಹಾಕಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಹೇಳಿದ್ದಿಷ್ಟು:

‘ಕೋವಿಡ್ ಸಮಯದಲ್ಲಿ 1 ಕೋಟಿ ಹಣದ ವಿಚಾರವಾಗಿ ನಾನು ಲೆಕ್ಕ ಕೊಡಲಿ ಎಂದು ಮುಖ್ಯಮಂತ್ರಿಗಳು ಕೇಳಿದರಲ್ಲಾ, ಮೊದಲು ಅವರು ಸರ್ಕಾರದ ವತಿಯಿಂದ ಮಾಡಿದ ಕೆಲಸದ ಲೆಕ್ಕ ಕೊಡಲಿ. ನಾವು ಕೊವಿಡ್ ಸಮಯದಲ್ಲಿ ಮಾಡಿದ ಕೆಲಸ, ನಮ್ಮ ಕಾರ್ಯಕರ್ತರು ಹಾಗೂ ಶಾಸಕರು ಕೊಟ್ಟಿರುವ ಹಣ ಹಾಗೂ ವೆಚ್ಚದ ವಿಚಾರದಲ್ಲಿ ಸರ್ಕಾರ ತನಗೆ ಬೇಕಾದ ಅಧಿಕಾರಿಗಳಿಂದ ತನಿಖೆ ನಡೆಸಲಿ. ನಾವು ರೈತರಿಂದ ತರಕಾರಿ ಖರೀದಿ ಮಾಡಿದ್ದರಿಂದ, ಜನರಿಗೆ ಊಟಾ ಕೊಟ್ಟಿರುವ ವಿಚಾರದವರೆಗೂ, ಆಂಬುಲೆನ್ಸ್, ಚಾಮರಾಜನಗರದ ಆಕ್ಸಿಜನ್ ದುರಂತದಲ್ಲಿ ಸತ್ತ ಕುಟುಂಬಕ್ಕೆ ತಲಾ 1ಲಕ್ಷ ಹಣ ನೀಡಿರುವುದು ಈ ಎಲ್ಲ ನೀವು ತನಿಖೆ ಮಾಡಿಸಿ.

ನೀವು ಕೇಂದ್ರ ಸರ್ಕಾರ ಕೊಟ್ಟ 50 ಸಾವಿರ ಹಾಗೂ ನೀವು ಘೋಷಿಸಿದ 1 ಲಕ್ಷ ಹಣವನ್ನು ಫಲಾನುಭವಿಗಳಿಗೆ ತಲಿಳುಪಿಸಲು ಇಂದಿನವರೆಗೂ ಸಾಧ್ಯವಾಗಿಲ್ಲ. ಕೋವಿಡ್ ನಲ್ಲಿ ನಾವು ಏನೆಲ್ಲಾ ಕೆಲಸ ಮಾಡಿದ್ದೇವೆ ಎಂದು ಪರಿಕಾಗೋಷ್ಟಿ ಮೂಲಕ ಮಾಹಿತಿ ತಿಳಿಸುತ್ತೇನೆ. ನಾನು ಹಣ ದುರುಪಯೋಗ ಮಾಡಿದ್ದರೆ ನನ್ನ ವಿರುದ್ಧ ತನಿಖೆಗೆ ಆದೇಶಿಸಿ.

ಇತ್ತೀಚೆಗೆ ಶಾಲಾ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ನೀಡಲು ನಿಮ್ಮ ಕೈಲಿ ಸಾಧ್ಯವಾಗದಿದ್ದರೆ ಇಡೀ ರಾಜ್ಯದಲ್ಲಿ ಸಿ ಎಸ್ ಆರ್ ಮೂಲಕ ಹಣ ಸಂಗ್ರಹಿಸಲು ಸಿದ್ಧವಾಗಿದ್ದೆ. ಸಂಜೆ ವೇಳೆಗೆ ಅವರೇ ಹಣ ನೀಡುವುದಾಗಿ ಘೋಷಿಸಿದರು.

ಬಡ ಮಕ್ಕಳಿಗೆ ಶೂ ಸಾಕ್ಸ್ ಕೊಡುವ ಯೋಜನೆಯನ್ನು ಈ ಸರ್ಕಾರ ಕೈ ಬಿಡಲು ಮುಂದಾಗುತ್ತದೆ ಎನ್ನುವುದಾದರೆ ಈ ಸರ್ಕಾರ ಯಾಕೆ ಬೇಕು?

ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಇದ್ದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಕರೆಸಿಕೊಳ್ಳುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಫೋಟೋ ಕ್ಯಾಮರಾಕ್ಕೆ ಅವಕಾಶ ಕೊಟ್ಟರೆ ಏನಾಗುತ್ತದೆ? ಬಿಜೆಪಿಯವರು ನಿನ್ನೆ ಮಾತ್ರ ಸ್ವಲ್ಪ ಧ್ವನಿ ಎತ್ತಿದಿರಿ. ಆದರೆ ಸದನದ ಕಲಾಪದಲ್ಲಿ ಮಾಧ್ಯಮಗಳನ್ನು ನಿಷೇಧಿಸಿ, ಅವರಿಗೆ ಬೇಕಾದದ್ದನ್ನು ತೋರಿಸಿ, ಬೇಡವಾಗಿದ್ದನ್ನು ಬಿಡುವ ಕೆಲಸ ಆಗುತ್ತಿದೆ. ಇದರ ವಿರುದ್ಧ ಮಾಧ್ಯಮಗಳು ಧ್ವನಿ ಯಾಕೆ ಎತ್ತಲಿಲ್ಲ? ರಾಜಕಾರಣ ಮಾಡುವ ನಾಯಕರು, ಅಧಿಕಾರಿಗಳಿಗೆ ಜನ ನಮ್ಮನ್ನು ಪ್ರಶ್ನೆ ಮಾಡುತ್ತಾರೆ ಎಂಬ ಭಯ ಇರಬೇಕು ಅಲ್ಲವೇ? ಇಂದು ನ್ಯಾಯಾಧೀಶರು ಧ್ವನಿ ಎತ್ತಿದ ಕಾರಣಕ್ಕೆ ಅಲ್ಲವೇ ಇಂದು ದೇಶದೆಲ್ಲೆಡೆ ಚರ್ಚೆ ಆಗುತ್ತಿರುವುದು. ನಿಮ್ಮ ಕೆಲಸ ನೀವು ಮಾಡುತ್ತೀರಿ. ಎಚ್ಚರಿಕೆಯಿಂದ ಇರಬೇಕಾದವರು, ತಿದ್ದುಕೊಳ್ಳಬೇಕಾದವರು ನಾವು. ಎಲ್ಲ ಅಧಿಕಾರಿಗಳು, ರಾಜಕಾರಣಿಗಳು, ಸಾರ್ವಜನಿಕ ಜೀವನದಲ್ಲಿ ಇರುವವರೆಲ್ಲ ಕೆಟ್ಟವರು ಎಂದು ಹೇಳುವುದಿಲ್ಲ. ಈ ಸರ್ಕಾರ ಅನೇಕ ವಿಚಾರವಾಗಿ ತನಗೆ ಬೇಕಾದ ನಿರ್ಧಾರ ತೆಗೆದುಕೊಂಡು ನಂತರ ಅದನ್ನು ಹಿಂಪಡೆದು ತಮಗೆ ತಾವೇ ಅಪಮಾನ ಮಾಡಿಕೊಳ್ಳುತ್ತಿದೆ.

ನಿನ್ನೆ ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಪತ್ನಿ ರಾಜ್ಯಪಾಲರಿಗೆ ಪತ್ರ ಬರೆದು ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಅವರಿಗೆ ಇದುವರೆಗೂ ನ್ಯಾಯ, ರಕ್ಷಣೆ ಸಿಕ್ಕಿಲ್ಲ. ಮೂರು ಮಂತ್ರಿಗಳು ಅಲ್ಲಿ ಕಾಮಗಾರಿ ಆಗಿದೆ ಎಂದು ಒಪ್ಪಿಕೊಂಡು ಹಣ ನೀಡುವುದಾಗಿ ತಿಳಿಸಿದರು, ಈವರೆಗೂ ಹಣ ನೀಡಲಾಗಿಲ್ಲ. ಅವರು ಮಾಡಿರುವ ಕೆಲಸಕ್ಕೆ ಹಣ ನೀಡಿ ಸ್ವಾಮಿ. ನಿಮ್ಮ ಮಂತ್ರಿ ಹೇಳಿದ್ದಕ್ಕೆ ಆತ ಕೆಲಸ ಮಾಡಿದ ಅಲ್ಲವೇ? ನಿಮ್ಮ ಮಂತ್ರಿ 40% ಕಮಿಷನ್ ಕೇಳಿದಕ್ಕೆ ಅಲ್ಲವೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ರೀತಿ ಎಷ್ಟೋ ಜನ ನೊಂದು ಬೆಂದಿದ್ದಾರೆ.

ನಿಮ್ಮ 40% ಕಮಿಷನ್ ವಿರುದ್ಧ ನಾವು ಮಾತ್ರವಲ್ಲ, ಮಠಾಧೀಶರೂ ಹೇಳಿದರಲ್ಲ. ಬೊಮ್ಮಾಯಿ ಅವರೇ ಅವರ ಮೇಲೆ ಯಾಕೆ ಪ್ರಕರಣ ದಾಖಲಿಸಿಲ್ಲ?

ಪಿಎಸ್ಐ ನೇಮಕಾತಿ ಅಕ್ರಮ ಹಾಗೂ ಪೊಲೀಸ್ ಇಲಾಖೆಯಲ್ಲಿ ಯಾವ ಹುದ್ದೆಗೆ ಎಷ್ಟು ದರ ನಿಗದಿ ಮಾಡಲಾಗಿದೆ ಎಂದು ಮಾಧ್ಯಮಗಳೇ ಪಟ್ಟಿ ಬಿಡುಗಡೆ ಮಾಡಿವೆ. ಆದರೂ ಸರ್ಕಾರ ಯಾಕೆ ಈ ವಿಚಾರವಾಗಿ ಕ್ರಮ ಕೈಗೊಂಡಿಲ್ಲ? ನಿಮ್ಮ ನಾಯಕರೇ ಪಿಎಸ್ಐ ಹಗರಣದಲ್ಲಿ ಮಾಜಿ ಸಿಎಂ ಮಗ ಭಾಗಿಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಅವರು ಭಾಗಿಯಾಗಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ನಿಮ್ಮ ನಾಯಕರು ಹೇಳಿಕೆ ನೀಡಿದರೂ ತನಿಖಾಧಿಕಾರಿಗಳು ಯಾಕೆ ಅವರ ತನಿಖೆ ಮಾಡಿ ಮಾಹಿತಿ ಪಡೆದಿಲ್ಲ?

ಸರ್ಕಾರವೇ ಈ ಹಗರಣವನ್ನು ಅಧಿಕಾರಿಗಳ ಮೂಲಕ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ. ಬಂಧಿತ ಐಪಿಎಸ್ ಅಧಿಕಾರಿಯನ್ನು ಅವರ ಬೇಡಿಕೆಯಂತೆ ಸೆಕ್ಷನ್ 164 ಅಡಿಯಲ್ಲಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿ. ಯಾರೆಲ್ಲಾ ಬಂಧಿತರಾಗಿರುವವರಿಂದ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿ.

ನಮ್ಮ ಕಾಲದಲ್ಲಿ ಅಕ್ರಮ ನಡೆದಿದ್ದರೆ ಅದನ್ನು ಬಹಿರಂಗಪಡಿಸಿ. ಯಾರ ಹೆಸರಾದರೂ ಬರಲಿ ನನ್ನ ಹೆಸರು ಬಂದರೂ ನೊಟೀಸ್ ನೀಡಿ ಬಂಧಿಸಿ.’

ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡ ಇದ್ದು ಅಮೃತ್ ಪೌಲ್ ಮೇಲೆ ಒತ್ತಡ ಹಾಕಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ‘ ನಮ್ಮ ಜಿಲ್ಲೆಯಲ್ಲಿ ಅಕ್ರಮದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಯ ವಿಚಾರಣೆಯನ್ನು ತಡೆದು, ನಂತರ 20-30 ದಿನ ನಂತರ ಅವನನ್ನು ಬಂಧಿಸಿದ್ದಾರೆ. ಇದು ನಮಗೆ ಬಂದಿರುವ ಮಾಹಿತಿ. ನಮಗೆ ಯಾವ ಯಾವ ಇಲಾಖೆಯಲ್ಲಿ ಏನೇನಾಗಿದೆ ಎಂದು ಗೊತ್ತಿದೆ. ಇತರೆ ಇಲಾಖೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಆ ಪ್ರಕರಣ ವಿಚಾರವಾಗಿ ತನಿಖೆ ಮಾಡಿಲ್ಲ ಯಾಕೆ? ಸರ್ಕಾರ, ರಾಜಕಾರಣಿ, ಮಂತ್ರಿಗಳು, ಹಿರಿಯ ಅಧಿಕಾರಿಗಳ ಕುಮ್ಮಕ್ಕು ಇಲ್ಲದೆ ಇಂತಹ ಯಾವುದೇ ಪ್ರಕರಣ ನಡೆಯಲು ಸಾಧ್ಯವಿಲ್ಲ ‘ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ಅವರ ಕಾರ್ಯಕ್ರಮ ವ್ಯಕ್ತಿ ಪೂಜೆ ಅಲ್ಲವೇ ಎಂಬ ಸಚಿವ ಸುಧಾಕರ್ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ‘ ಈ ವಿಚಾರದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಪಕ್ಷದ ಅನುಕೂಲಕ್ಕೆ ಬೇಕಾಗಿರುವ ಕಾರ್ಯಕ್ರಮಗಳನ್ನು ನಾವು ಚರ್ಚೆ ಮಾಡಿದರೆ ಬಿಜೆಪಿ ಅವರಿಗೆ ಹೊಟ್ಟೆ ಕಿಚ್ಚು ಯಾಕೆ? ಅವರು ಏನಾದರೂ ಹೇಳಲಿ, ಅವರು ನಮ್ಮ ಪಕ್ಷದಲ್ಲಿ ಬಿರುಕು ಮೂಡಿಸಲು ಸಾಧ್ಯವಿಲ್ಲ. ಮೊದಲು ಅವರು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ತೆಗೆದುಹಾಕಲಿ’ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯನವರ ಹುಟ್ಟುಹಬ್ಬ ಆಚರಣೆ ವಿಚಾರವಾಗಿ ಗೊಂದಲದ ಹೇಳಿಕೆ ನೀಡಲಾಗುತ್ತಿದೆ ಎಂದು ಕೇಳಿದ ಪ್ರಶ್ನೆಗೆ, ‘ ಈ ಕುರಿತು ಯಾರನ್ನು ಪ್ರಶ್ನೆ ಮಾಡಬೇಕೋ ಅವರನ್ನು ಕೇಳಿ. ಸೋನಿಯಾ ಗಾಂಧಿ ಅವರು ನನ್ನನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದು, ನನಗೆ ಕೆಲವು ಇತಿ ಮಿತಿಗಳಿವೆ. ಎಲ್ಲರೂ ಅವರವರ ಇತಿ ಮಿತಿಯಲ್ಲಿ ಕೆಲಸ ಮಾಡಲಿದ್ದಾರೆ’ ಎಂದು ಉತ್ತರಿಸಿದರು.

ರಾಮಲಿಂಗಾ ರೆಡ್ಡಿ ಅವರ ಪತ್ರಿಕಾಗೋಷ್ಠಿ ಮುಖ್ಯಾಂಶಗಳು

ಬಿಬಿಎಂಪಿ ವಾರ್ಡ್ ಗಳ ಮರುವಿಂಗಡಣೆ ಅವೈಜ್ಞಾನಿಕ.

ಬಿಜೆಪಿ ಪಕ್ಷಕ್ಕೆ ಅನುಕೂಲವಾಗುವಂತೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮರುವಿಂಗಡಣೆ.

3 ಸಾವಿರಕ್ಕೂ ಹೆಚ್ಚು ಆಕ್ಷೆಪಗಳು ವ್ಯಕ್ತವಾಗಿದ್ದರೂ 243 ವಾರ್ಡ್ ಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಕೆಲವು ವಾರ್ಡ್ ಗಳ ಹೆಸರು ಮಾತ್ರ ಬದಲಾವಣೆ.

ಈ ವಾರ್ಡ್ ವಿಂಗಡಣೆ ಪ್ರಕ್ರಿಯೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಕಂದಾಯ ಅಧಿಕಾರಿಗಳು, ಜಂಟಿ ಆಯುಕ್ತರು ಸೇರಿ ವಾರ್ಡ್ ಗಳ ಗಡಿ ಕುರಿತು ಚರ್ಚೆ ಮಾಡಿ ಮಾರ್ಗಸೂಚಿಯಂತೆ ನಿರ್ಧಾರ ತೆಗೆದುಕೊಳ್ಳಬೇಕಿತ್ತು.

ಆದರೆ ಕಂದಾಯ ಅಧಿಕಾರಿಗಳಿಗೆ, ಜಂಟಿ ಆಯುಕ್ತರಿಗೆ ಯಾವುದೇ ಮಾಹಿತಿ ಇಲ್ಲದೆ ವಾರ್ಡ್ ಗಳ ಮರುವಿಂಗಡಣೆ ಮಾಡಲಾಗಿದೆ.

ಬಿಜೆಪಿ ಶಾಸಕರು, ಸಂಸದರ ಕಚೇರಿಯಲ್ಲಿ ಮರುವಿಂಗಡಣೆಯಾಗಿ ಕೇಶವಕೃಪದಲ್ಲಿ ಅಂತಿಮ ಒಪ್ಪಿಗೆ ಪಡೆಯಲಾಗಿದೆ.

ಕಾಂಗ್ರೆಸ್ ಪಕ್ಷ ಎಲ್ಲಿ ಗೆಲ್ಲಲು ಸಾಧ್ಯವಿದೆಯೋ ಅಲ್ಲಿ ಮತ ವಿಭಜಿಸಿ ಸೋಲಿಸಲು ಈ ರೀತಿ ಮಾಡಿದ್ದಾರೆ.

ಜನಸಂಖ್ಯೆ ಆಧಾರದಲ್ಲೂ ವಾರ್ಡ್ ವಿಭಜನೆಯಲ್ಲಿ ತಾರತಮ್ಯ ಮಾಡಲಾಗಿದೆ.

ಬೆಂಗಳೂರಿನ ಜನಸಂಖ್ಯೆ ಪ್ರಕಾರ ಪ್ರತಿ ವಾರ್ಡ್ ಜನಸಂಖ್ಯಾ ಪ್ರಮಾಣ ಸರಾಸರಿ 35 ಸಾವಿರ ಇರಬೇಕು.

ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಲ್ಲಿ ಪ್ರತಿ ವಾರ್ಡ್ ಜನಸಂಖ್ಯೆ ಪ್ರಮಾಣ ಸರಾಸರಿ 36,753 ಇದೆ.

ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಪ್ರತಿ ವಾರ್ಡ್ ನಲ್ಲಿ ಸರಾಸರಿ 33,927 ಜನಸಂಖ್ಯೆ ಇದೆ.

ಗೋವಿಂದರಾಜನಗರ ಕ್ಷೇತ್ರದ ವಾರ್ಡ್ ಗಳಲ್ಲಿ ಸರಾಸರಿ 30 ಸಾವಿರಕ್ಕಿಂತಲೂ ಕಡಿಮೆ ಜನರಿದ್ದಾರೆ.

35 ಸಾವಿರ ಸರಾಸರಿಯ ಜನಸಂಖ್ಯೆ ಪ್ರಕಾರ ನೋಡಿದರೆ ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ 140 ವಾರ್ಡ್ ಗಳು ಇರಬೇಕಿತ್ತು.

ಆದರೆ 145 ವಾರ್ಡ್ ಗಳನ್ನು ಮಾಡಿಕೊಂಡಿದ್ದಾರೆ

ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ 103 ವಾರ್ಡ್ ಗಳು ಬರಬೇಕಿತ್ತು, ಆದರೆ ಕೇವಲ 98 ವಾರ್ಡ್ ಗಳನ್ನು ಮಾಡಿದ್ದಾರೆ.

ಬ್ಯಾಟರಾಯನಪುರ, ಜಯನಗರ, ಚಾಮರಾಜಪೇಟೆ, ದಾಸರಳ್ಳಿ ಕ್ಷೇತ್ರಗಗಳಲ್ಲಿ ಜನಸಂಖ್ಯೆ ಪರಿಗಣಿಸಿದರೆ 1 ವಾರ್ಡ್ ಗಳನ್ನು ಕಡಿಮೆ ಮಾಡಲಾಗಿದೆ.

ಚಾಮರಾಜಪೇಟೆ ಕ್ಷೇತ್ರದ ವಾರ್ಡ್ ಗಳಲ್ಲಿನ ಜನಸಂಖ್ಯೆ 39 ಸಾವಿರ ಸರಾಸರಿಯಲ್ಲಿದ್ದರೆ, ಪಕ್ಕದ ಚಿಕ್ಕಪೇಟೆ ಕ್ಷೇತ್ರದ ವಾರ್ಡ್ ಗಳಲ್ಲಿ ಜನಸಂಖ್ಯೆ ಪ್ರಮಾಣ ಸರಾಸರಿ 32 ಸಾವಿರದಷ್ಟಿದೆ.

ಹೀಗೆ ಜನಸಂಖ್ಯೆ ಆಧಾರದಲ್ಲೂ ಬಿಜೆಪಿಗೊಂದು ರೀತಿ ಕಾಂಗ್ರೆಸ್ ಗೊಂದು ರೀತಿ ವಾರ್ಡ್ ವಿಂಗಡಣೆ ಮಾಡಿದ್ದಾರೆ.

ಅಧಿಕಾರ ವ್ಯಾಪ್ತಿ ಮೀರಿ ವಾರ್ಡ್ ಗಳ ಹೆಸರುಗಳನ್ನು ಬದಲಾವಣೆ ಮಾಡಲಾಗಿದೆ.

ವಾರ್ಡ್ ಗಳ ಹೆಸರು ಬದಲಾವಣೆ ಅಧಿಕಾರ ಸರ್ಕಾರಕ್ಕಿದೆ.

ಆದರೆ ಇಲ್ಲಿ ವಾರ್ಡ್ ಮರುವಂಗಡಣಾ ಸಮಿತಿಯೇ ಹೆಸರು ಬದಲಾವಣೆ ಮಾಡಿದೆ.

ಆ ಮೂಲಕ ಈ ವಾರ್ಡ್ ಮರುವಿಂಗಡಣೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇದೆ ಎಂಬುದು ಸಾಬೀತಾಗಿದೆ