ಭಾರತಾಂಬೆ ಭಾವಚಿತ್ರಕ್ಕೆ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರೈತರಿಂದ ಪುಷ್ಪಾರ್ಚನೆ………
ಮಧುಗಿರಿ ತಾಲೂಕು ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಗ್ರಾಮದಿಂದ ಗೂಬಲ ಗುಟ್ಟೇ ದೇವಸ್ಥಾನದವರೆಗೂ ರೈತರು ಸುಮಾರು 40 ಟ್ಯಾಕ್ಟರ್ ಗಳ ಮೂಲಕ ಭಾರತಾಂಬೆಯ ಭಾವಚಿತ್ರದೊಂದಿಗೆ ಭವ್ಯ ಮೆರೆವಣಿಗೆ ಮೂಲಕ ಆಂಧ್ರ ಗಡಿಭಾಗದ ತನಕ ಮೆರವಣಿಗೆಯಲ್ಲಿ ಪಾಲ್ಗೊಂಡರು.
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಮಾತನಾಡಿದ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಪಿಎನ್ ನರಸಿಂಹಮೂರ್ತಿ ಈ ದಿನ ಬಡವನಹಳ್ಳಿ ಗುಬಲ ಗುಟ್ಟೆ ರೈತರು ಟ್ರ್ಯಾಕ್ಟರ್ ಗಳ ಮುಖಾಂತರ .ಭಾರತಾಂಬೆ ಭಾವಚಿತ್ರದೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ಕಾರ್ಯಕ್ರಮ ಮಾಡುತ್ತಿರುವುದು ತುಂಬಾ ಸಂತೋಷವಾಗುತ್ತಿದೆ ಕಾರ್ಯಕ್ರಮ ನಡೆಯುತ್ತಿರುವುದು ಯಾವುದೇ ಪಕ್ಷದ ವತಿಯಿಂದ ಮಾಡುತ್ತಿಲ್ಲ ತಾಲೂಕಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಸೇರಿ ಪಕ್ಷಬೇಧ ಮರೆತು ಕಾರ್ಯಕ್ರಮ ಮಾಡುತ್ತಿರುವುದು ತಾಲೂಕಿನ ಜನತೆಗೆ ತುಂಬಾ ಖುಷಿಯಾಗಿದೆ ಹಾಗೂ ಈ ದಿನ ಭಾರತಾಂಬೆಯ ಹಬ್ಬದ ವಾತಾವರಣದಿಂದ ಕಂಗೊಳಿಸುತ್ತಿದೆ. ಮತ್ತು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತರುಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸ ಬೇಕೆಂದುತಮ್ಮಲ್ಲಿ ವಿನಂತಿ ಮಾಡುತ್ತೇನೆಂದರೂ .
ಇದೇ ಸಂದರ್ಭದಲ್ಲಿ ಗೂಬಲಗುಟೆ ಕೆರೆಯ ತುಂಬಿರುವುದಕ್ಕೆ ರಾಜ್ಯ ಉಪಾಧ್ಯಕ್ಷರಾದ ಎಂ ಬಿ ನಂದೀಶ್ ರವರು ಕೆರೆಗೆ ಬಾಗಿನ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಪ್ರಸನ್ನ ಕುಮಾರ್. ನಾಗರಾಜಪ್ಪ. ಚೌಡಪ್ಪ. ಬಹುತೇಕ ರೈತರು ಕಾರ್ಯಕ್ರಮದಲ್ಲಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ವರದಿ. ಲಕ್ಷ್ಮಿಪತಿ ದೊಡ್ಡ ಎಲ್ಕೂರು