ಪಾವಗಡ.. ಶ್ರಾವಣ ಮಾಸದ ಕೊನೆಯ ಶನಿವಾರ ದಂದು ಶನಿಮಹಾತ್ಮ ದೇವಸ್ಥಾನಕ್ಕೆ ರಾಜ್ಯದ ನಾನಾ ಮೂಲಗಳಿಂದ ಸಾವಿರಾರು ಭಕ್ತರು ಆಗಮಿಸಿ ಮಳೆಯನ್ನು ಸಹ ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ಶ್ರೀ ಶನಿಮಹಾತ್ಮ ಹಾಗೂ ಶೀತಲಾಂಬ ದೇವರ ದರ್ಶನ ಪಡೆದರು.
ಕೊನೆಯ ಶ್ರಾವಣ ಶನಿವಾರದ ಅಂಗವಾಗಿ ಶನಿಮಹಾತ್ಮ ದೇವರಿಗೆ ತೈಲ ಅಭಿಷೇಕ, ಅರ್ಚನೆ, ಕುಂಕುಮ ಅಭಿಷೇಕ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಿತು, ದೇವಸ್ಥಾನದ ಮುಂಭಾಗ ಹರಕೆ ಹೊತ್ತ ಭಕ್ತರು ಭಜನೆ ಮಾಡಿದರು, ದೇವಸ್ಥಾನಕ್ಕೆ ಬಂದಂತಹ ಭಕ್ತಾದಿಗಳಿಗೆ ತಾಲೂಕಿನ ಹಲವಾರು ಸಂಘ ಸಂಸ್ಥೆಗಳು ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳು ಸಂಪೂರ್ಣವಾಗಿ ಬಂದ್ ಮಾಡಿ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡಲಾಗಿತ್ತು, ಪೊಲೀಸ್ ಸಿಬ್ಬಂದಿಗಳನ್ನು ದೇವಸ್ಥಾನದ ಪ್ರಮುಖ ರಸ್ತೆಗಳಲ್ಲಿ ಬಂದೋಬಸ್ತುಗಾಗಿ ನಿಯೋಜಿಸಲಾಗಿತ್ತು.