IMG 20221104 WA0021

ಮಧುಗಿರಿ:ಸಭೋದಯ ಸಮಾವೇಶ ಕಾರ್ಯಕ್ರಮದ ಪೂರ್ವಭಾವಿ ಸಭೆ…!

DISTRICT NEWS ತುಮಕೂರು

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಸಭೋದಯ ಸಮಾವೇಶ ಕಾರ್ಯಕ್ರಮದ ಪೂರ್ವಭಾವಿ ಸಭೆ.

ಮಧುಗಿರಿ ಪಟ್ಟಣದ ಎಂ.ಎನ್‌. ಕೆ .ಸಮುದಾಯ ಭವನದಲ್ಲಿ ಆರನೇ ತಾರೀಖು.ನಡೆಯುವ ಎಂ .ಮಲ್ಲಿಕಾರ್ಜುನ ಖರ್ಗೆಯವರ ಸ್ವಾಗತಿಸುವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷರಾದ ಕೆ ಎನ್ ರಾಜಣ್ಣನವರು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾದ ನಂತರ ಪ್ರಪ್ರಥಮ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವುದರಿಂದ ಅರಮನೆ ಮೈದಾನದಲ್ಲಿ ನಡೆಯುವ ಅಭಿನಂದನಾ ಕಾರ್ಯಕ್ರಮಕ್ಕೆ ಮಧುಗಿರಿ ಕೊರಟಗೆರೆ ಪಾವಗಡ ಈ ಮೂರು ತಾಲೂಕುಗಳಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಈ ಅಭಿನಂದನಾ ಸಮಾರಂಭವನ್ನು ಯಶಸ್ವಿಗೊಳಿಸ ಬೇಕೆಂದರೆ.

ಈ ರಾಜ್ಯ ಈ ದೇಶ ಕಂಡರಿಯದಂತಹ ಅಭಿದಯವನ್ನು ತಳ ಸಮುದಾಯದ ಅಭಿದಯವನ್ನು ಬಯಸ ತಕ್ಕಂತಹ ಯಾರಾದರೂ ಇದ್ದರೆ ಎಂದರೆ ಎಂ.ಮಲ್ಲಿಕಾರ್ಜುನ ಖರ್ಗೆ ರವರು ಮತ್ತು ಅವರನ್ನು ನಾನು 1972 ರಿಂದ ಶಾಸಕರಾಗಿ ಆಯ್ಕೆ ಆದಾಗಿನಿಂದಲೂ ಸಹ ನಾನು ಅತ್ಯಂತ ಪ್ರೀತಿ ವಿಶ್ವಾಸ ಮತ್ತು ಆತ್ಮೀಯತೆಯನ್ನು ಇಟ್ಟುಕೊಂಡಿದ್ದೇನೆ ಅವರು ಸಚಿವರಾಗಿ ವಿರೋಧ ಪಕ್ಷದ ನಾಯಕರಾಗಿ ಸಂಸದರಾಗಿ ಅನೇಕ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿರುವುದರಿಂದ ಇಂದು ಅವರಿಗೆ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಗಿರುವುದು ನಮಗೆಲ್ಲ ಸಂತೋಷದ ವಿಚಾರ .

ಯಾವಾಗಲೂ ಕೂಡ ಬಡವರ ಪರವಾಗಿ ಕೆಲಸಗಳನ್ನು ಮಾಡುತ್ತಾ ಬಂದಿರುತ್ತಾರೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿರುವುದರಿಂದ ನಾವುಗಳೆಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಿ ಸ್ವಾಗತಿಸಬೇಕಾಗಿದೆ ಮತ್ತು ಅವರಿಗೆ ಗೌರವ ಸೂಚಿಸಬೇಕಾಗಿದೆ ನಾವೇನಾದರೂ ಲೋಪ ಮಾಡಿಕೊಂಡರೆ ನಿಜಕ್ಕೂ ಕೂಡ ನಮಗೆ ನಾವೇ ಲೋಪ ಮಾಡಿಕೊಂಡಂತೆ ಎಂದರೆ.

ಈ ಪೂರ್ವಭಾವಿ ಸಭೆಯ ಕಾರ್ಯಕ್ರಮಕ್ಕೆ ಆಗಮಿಸಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ಸಲಹೆ ಸೂಚನೆಗಳು ಏನಾದರೂ ಇದ್ದರೆ ತಿಳಿಸಬಹುದೆಂದು ಸೂಚಿಸಿದರು.

ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಕಾರ್ಯದರ್ಶಿಯಾದ.ಶ್ರೀ ಮಯೂರ ಜಯಕುಮಾರ್ ರವರು ಮಾತನಾಡಿ. ಪ್ರಪ್ರಥಮವಾಗಿ ತಮ್ಮೆಲ್ಲರಿಗೂ ಕೂಡ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಏಕೆಂದರೆ ಇತ್ತೀಚೆಗೆ ನಡೆದಂತಹ ಭಾರತ್.ಜೋಡೋ ಕಾರ್ಯಕ್ರಮದಲ್ಲಿ ಕರ್ನಾಟಕದಲ್ಲಿ ಹಾಗೂ ತುಮಕೂರು ಜಿಲ್ಲೆಯಿಂದ ಅಭೂತಪೂರ್ವವಾದ ಸ್ವಾಗತವನ್ನು ರಾಹುಲ್ ಗಾಂಧಿಯವರಿಗೆ ಮಾಡಿಕೊಟ್ಟಿದ್ದೀರಾ ಮತ್ತೊಮ್ಮೆ ತಮ್ಮೆಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಕರ್ನಾಟಕಕ್ಕೆ ಆಗಮಿಸುತ್ತಿರುವುದರಿಂದ ತಾವುಗಳೆಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಎಂ. ಮಲ್ಲಿಕಾರ್ಜುನ ಖರ್ಗೆ ಜಿ ಅವರನ್ನು ಸ್ವಾಗತಿಸಬೇಕು ಮತ್ತು ಈ ರಾಜ್ಯದಲ್ಲಿ 40% ಕಮಿಷನ್ ಸರ್ಕಾರವನ್ನು ಕಿತ್ತೊಗೆದು ರಾಜ್ಯ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಆಡಳಿತಕ್ಕೆ ತರಲು ತಾವುಗಳೆಲ್ಲರೂ ಅತಿ ಹೆಚ್ಚಿನ ಶ್ರಮವಹಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ತಾವುಗಳು ಕಾರಣಿಭೂತರಾಗಬೇಕು. ನೀವುಗಳು ಈಗಲ್ಲಿಂದಲೇ ಪಂಚಾಯಿತಿ ದಿಂದ ಬೂತ್ ಮಟ್ಟದಿಂದ ಸಂಘಟನೆ ಮಾಡಿಕೊಂಡು ಕಾಂಗ್ರೆಸ್ ಪಕ್ಷ ರಾಜ್ಯ ಹಾಗೂ ರಾಷ್ಟ್ರದಲ್ಲಿ ಅಧಿಕಾರಿ ಚುಕ್ಕಾಣಿ ಹಿಡಿಯಲು ತಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕೆ ಎನ್ ರಾಜಣ್ಣ ಜಿ ಮತ್ತು ಆತ್ಮೀಯ ಗೆಳೆಯ ರಾಜೇಂದ್ರ ರವರನ್ನು ನಾನು ತುಂಬು ಹೃದಯದಿಂದ ಅಭಿನಂದನೆಸುತ್ತೇನೆ ಎಂದರು.

ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ರಾಮಕೃಷ್ಣಯ್ಯ ಮಾತನಾಡಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಎಂ ಮಲ್ಲಿಕಾರ್ಜುನ ಖರ್ಗೆ ರವರು ರಾಜ್ಯಕ್ಕೆ ಆಗಮಿಸುತ್ತಿರುವುದರಿಂದ ಅವರನ್ನು ಅಭೂತಪೂರ್ವಕವಾಗಿ ಸ್ವಾಗತಿಸಬೇಕಾಗಿರುವುದರಿಂದ ತುಮಕೂರು ಜಿಲ್ಲೆಯಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಕಾರ್ಯದರ್ಶಿಯಾದ ಶ್ರೀ ಮಯೂರ ಜಯಕುಮಾರ್ ಕರ್ನಾಟಕ ರಾಜ್ಯ ಕೆಪಿಸಿಸಿ ಉಪಾಧ್ಯಕ್ಷರಾದ ಕೆಏನ್ ರಾಜಣ್ಣ ರವರು. ವಿಧಾನ ಪರಿಷತ್ತಿನ ಸದಸ್ಯರಾದ ಆರ್ ರಾಜೇಂದ್ರ ಕೆಪಿಸಿಸಿ .ಸದಸ್ಯರಾದ ಬಾಲಕೃಷ್ಣರವರು ತುಮಕೂರು ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ರಾಮಕೃಷ್ಣ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ಗೀತಾ ರಾಜಣ್ಣ .ಪಾವಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೆಂಕಟೇಶ್. ಸತೀಶ್. ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶ್ವಥ್ ನಾರಾಯಣ್. ಶಂಕರ್ ಎಂ ಎಸ್ ಮಲ್ಲಿಕಾರ್ಜುನಯ್ಯ ಎಂ ಜಿ ಶ್ರೀನಿವಾಸ್ ಮೂರ್ತಿ ಎಂ ಕೆ ನಂಜುಂಡಯ್ಯ ಪುರಸಭಾ ಸದಸ್ಯರಾದ ಚಂದ್ರಶೇಖರ್ ಬಾಬು. ಗಂಗಣ್ಣಿ ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ನಾಗೇಶ್ ಬಾಬು. ಆದಿ ನಾರಾಯಣ ರೆಡ್ಡಿ.
ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು