ಉಪವಿಭಾಗಾಧಿಕಾರಿಗಳಾದ ಸೋಮಪ್ಪ ಕಡಕೋಳರವರ ವರ್ಗಾವಣೆ ವಿರೋಧಿಸಿ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಶಾಸಕರಿಗೆ ಮನವಿ……
ಮಧುಗಿರಿ ತಾಲೂಕಿನಲ್ಲಿ ಉಪವಿಭಾಗಾಧಿಕಾರಿಗಳಾಗಿ ಸೋಮಪ್ಪ ಕಡಕೋಳ ರವರು ದಕ್ಷ ಹಾಗು ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ ಅವರನ್ನು ಏಕಾಏಕಿ ವರ್ಗಾವಣೆ ಮಾಡಿರುವುದು ನಮಗೆ ತುಂಬಾ ನೋವಿನ ಸಂಗತಿಯಾಗಿದೆ ಎಂದು .ಮಧುಗಿರಿ ತಾಲೂಕಿನ ಶಾಸಕರಾದ ಎಂ.ವಿ. ವೀರಭದ್ರಯ್ಯನವರಿಗೆ ದಲಿತ ಪರ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮನವಿ ಪತ್ರವನ್ನು ಕೊಟ್ಟು ಉಪವಿಭಾಗಾಧಿಕಾರಿಗಳ ವರ್ಗಾವಣೆಯನ್ನು ರದ್ದು ಪಡಿಸುವಂತೆಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರಹತ್ತಿರ ಮಾತನಾಡಿ ಕಂದಾಯ ಇಲಾಖೆಯ ಸಚಿವರಾದ ಆರ್ ಅಶೋಕ್ ರವರ ಹತ್ತಿರ ಮಾತನಾಡಿ ಆದಷ್ಟು ಬೇಗನೆ ವರ್ಗಾವಣೆ ರದ್ದುಪಡಿಸಿ ಮಧುಗಿರಿ ಉಪ ವಿಭಾಗದಲ್ಲಿ ಉಪ ವಿಭಾಗಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೊಡಬೇಕೆಂದು ಮಧುಗಿರಿ ತಾಲೂಕಿನ ದಲಿತ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಮನವಿಯನ್ನು ಸ್ವೀಕರಿಸಿ ಮಾತನಾಡಿದ ಶಾಸಕರಾದ ಎಂ.ವಿ .ವೀರಭದ್ರಯ್ಯನವರು. ನಾನು ಕೂಡ ಮುಖ್ಯಮಂತ್ರಿಗಳ ಹತ್ತಿರ ಹಾಗೂ ಸಂಬಂಧ ಪಟ್ಟ ಸಚಿವರ ಹತ್ತಿರ ಮಾತನಾಡಿ ಕಾನೂನು ರೀತಿಯಲ್ಲಿ ವರ್ಗಾವಣೆ ರದ್ದು ಪಡಿಸಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳಾದ. ದೊಡ್ಡೇರಿ ಮಹಾಲಿಂಗಯ್ಯ. ವಕೀಲರಾದ ಬೆಲ್ಲದ ಮಡಗು ಶಿವಣ್ಣ. ಬಹುಜನ ಸಮಾಜ ಪಾರ್ಟಿಯ ಅಧ್ಯಕ್ಷರಾದ ಗೋಪಾಲ್. ರಾಮಯ್ಯ. ಮೈಲಾರಪ್ಪ. ನಾಗೇಶ್. ಅರಳಾಪುರ ರಮೇಶ. ಕೊಡ್ಲಾಪುರ ರಾಜು.ಮುಂತಾದ ಪದಾಧಿಕಾರಿಗಳು ಹಾಜರಿದ್ದರು.
ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು.