ಬೀದರ್: ಮೋದಿ ಕಪ್ಪು ಹಣವನ್ನು ಭಾರತಕ್ಕೆ ತರುತ್ತೇನೆ ಎಂದು ಹೇಳಿದ್ದರು. ಆದರೇ ಅವರು ತರಲಿಲ್ಲ. ನಾನು ಅವರಂತೆ ಸುಳ್ಳು ಮಾತುಗಳನ್ನು ಹೇಳುವುದಿಲ್ಲ.
ಇಬ್ಬರು ಮಕ್ಕಳೊಂದಿಗೆ ತಂದೆ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿರುವುದು ನಾನು ಇವತ್ತಿನ ಪತ್ರಿಕೆಯಲ್ಲಿ ಓದಿದ್ದಿನಿ. ಈ ಭಾಗದಲ್ಲಿ ಆ ಘಟನೆ ನಡೆದಿದೆ. ಅದರಂತೆ ಚಿಟಗುಪ್ಪಾದ ಹುಡಗಿ ಬಳಿ ಕೆಲಸ ಮಾಡುತ್ತಿದ್ದ ಮಹಿಳಾ ಕುಲಿ ಕಾರ್ಮಿಕರನ್ನು ನಾನು ಮಾತಾಡಿಸಿದಾಗ ಅವರು ತಮ್ಮ ಕಷ್ಟಗಳನ್ನು ಹೇಳಿಕೊಂಡರು. ಅವರ ಕಷ್ಟಗಳನ್ನು ನೋಡಿದಾಗ ಅಂತವರಿಗೆ ನೆರವಾಗಬೇಕು ಎಂಬ ನಿಟ್ಟಿನಲ್ಲಿ ನಾನು ಅನೇಕ ಯೋಜನೆಗಳನ್ನು ರೂಪಿಸಿದ್ದಿನಿ.
ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಾಕಷ್ಟು ಯೋಜನೆಗಳನ್ನು ತರುವ ಉದ್ದೇಶದಿಂದ ಪಂಚರತ್ನ ಕಾರ್ಯಕ್ರಮ ಆರಂಭಿಸಿದ್ದೇನೆ. ತಾವು ಬರುವ ಚುನಾವಣೆಯಲ್ಲಿ ನಮ್ಮನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತಂದರೆ ಆ ಎಲ್ಲಾ ಕಾರ್ಯಕ್ರಮಗಳನ್ನು ನಾನು ಅನುಷ್ಠಾನಕ್ಕೆ ತರುತ್ತೇನೆ.
ರಾಜ್ಯದಲ್ಲಿನ ರೈತರು ಸಂಕಷ್ಟದಲ್ಲಿದ್ದಾರೆ.:
ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ನೆಟೆ ರೋಗದಿಂದ ತೊಗರಿ ಬೆಳೆ ನಾಶವಾಗಿದೆ. ಅಂತವರಿಗೆ ಪರಿಹಾರ ಒದಗಿಸುವ ಕೆಲಸವಾಗುತ್ತಿಲ್ಲ. ಬಿತ್ತನೆ ಬೀಜವಷ್ಟೆ ಅಲ್ಲ ರಸಗೊಬ್ಬರದ ಖರ್ಚು ವೆಚ್ಚವನ್ನು ನಾವು ಅಧಿಕಾರಕ್ಕೆ ಬಂದರೆ ಬರೆಸುತ್ತೇವೆ.
ಭೂಮಿ, ಆಧಾಯವಿಲ್ಲದವರಿಗೂ ನೆರವಾಗುತ್ತೇವೆ:
ಭೂಮಿ, ಆಧಾಯವಿಲ್ಲದವರಿಗೂ ಸರ್ಕಾರದಿಂದ ಬಡ್ಡಿ ರಹಿತ ಸಹಾಯಧನವನ್ನು ಮನೆಯ ಭಾಗಿಲಿಗೆ ತಲುಪಿಸುವ ಚಿಂತನೆ ನಾನು ಹೊಂದಿದ್ದೇನೆ. ಅದನ್ನು ದೂರಪಯೋಗ ಪಡಸಿಕೊಳ್ಳದೇ ಸದುಪಯೋಗ ಮಾಡಿಕೊಳ್ಳುವುದಾದರೆ ಅಂತ ಯೋಜನೆ ಜಾರಿಗೆ ತರುತ್ತೇನೆ.
ಮೋದಿ ತರ ನಾನು ಸುಳ್ಳು ಮಾತಾಡಲ್ಲ.: .
ಮೋದಿ ಕಪ್ಪು ಹಣವನ್ನು ಭಾರತಕ್ಕೆ ತರುತ್ತೇನೆ ಎಂದು ಹೇಳಿದ್ದರು. ಆದರೇ ಅವರು ತರಲಿಲ್ಲ. ನಾನು ಅವರಂತೆ ಸುಳ್ಳು ಮಾತುಗಳನ್ನು ಹೇಳುವುದಿಲ್ಲ.
ರಾಜ್ಯದಲ್ಲಿನ ಸರ್ಕಾರ ತೆರಿಗೆ ಹಣದ ಲೂಡಿ ಮಾಡ್ತಿದೆ. ಅಂತಹ ದುಡ್ಡನ್ನು ಉಳಿಸುವ ಕೆಲಸ ನಾನು ಮಾಡುತ್ತೇನೆ.
*ನಾವು ಅಧಿಕಾರಕ್ಕೆ ಬಂದು ಐದು ವರ್ಷಗಳಲ್ಲಿ ನಾವು ಹೇಳಿದ ಕೆಲಸ ಮಾಡದಿದ್ದರೆ 2028ರೊಳಗೆ ನಮ್ಮ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ. ತಾವು ನನ್ನ ಮೇಲೆ ನಂಬಿಕೆ ಇಟ್ಟು ನಮ್ಮನ್ನು ಒಂದು ಬಾರಿ ಐದು ವರ್ಷಗಳ ಕಾಲ ಅಧಿಕಾರದಲ್ಲಿರುವಂತೆ ಮಾಡಿ. ರಾಜ್ಯದ ಒಳಿತಿಗಾಗಿ ನಮಗೆ ಅವಕಾಶ ನೀಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದರು.
ಹುಮಾನಾಬಾದ್ ಕ್ಷೇತ್ರದ ಅಭ್ಯರ್ಥಿ ಸಿಎಂ ಫೈಜ್ ರವರನ್ನು ಗೆಲ್ಲಿಸುವಂತೆ ಇದೇ ವೇಳೆ ಹೆಚ್ಡಿಕೆ ಮನವಿ ಮಾಡಿದರು.
ಬಂಡೆಪ್ಪ ಖಾಶೆಂಪುರ್ ಮಾತು:
ಕುಮಾರಸ್ವಾಮಿ ರವರು ಮುಖ್ಯಮಂತ್ರಿಯಾಗಿದ್ದಾಗ ಏಡ್ಸ್ ಪೇಸೆಂಟ್, ಕ್ಯಾನ್ಸರ್ ಪೆಸೆಂಟ್ ಅಂತ ಲೆಕ್ಕಿಸಲಿಲ್ಲ ವಿವಿಧ ಕಾಯಿಲೆಗಳಿದ್ದರು ಅಂತವರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಅವರು ಸ್ವಾರ್ಥಕ್ಕಾಗಿ ಏನನ್ನು ಮಾಡುತ್ತಿಲ್ಲ ನಾಡಿನ ಒಳಗಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ನಾವು ಗೆಲ್ಲಿಸಬೇಕಾಗಿದೆ. ಅವರಿಗೆ ರಾಜ್ಯದ ಬಡವರ ಬಗ್ಗೆ ಕಾಳಜಿಯಿದೆ. ಅವರನ್ನು ನಾವೆಲ್ಲರೂ ಸೇರಿ ಗೆಲ್ಲಿಸಬೇಕಾಗಿದೆ.
ಅಧಿಕಾರಕ್ಕೆ ಬಂದರೆ ಅನೇಕ ಯೋಜನೆ ಜಾರಿ:
ನಾವು ಅಧಿಕಾರಕ್ಕೆ ಬಂದರೆ ಕುಮಾರಣ್ಣ ಮುಖ್ಯಮಂತ್ರಿಯಾದರೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತೇವೆ. ನಾಡಿನ ಒಳಿತಿಗಾಗಿ ನಾವು ಹೋರಾಟ ಮಾಡುತ್ತೇವೆ. ರೈತರಣ ಬಡವರ, ಶ್ರಮಿಕರ ಪರವಾಗಿ ನಾವು ಕೆಲಸ ಮಾಡಲು ತಯಾರಿದ್ದೇವೆ.
*ನಾವೆಲ್ಲರೂ ಸೇರಿ ಜೆಡಿಎಸ್ ಅಧಿಕಾರಕ್ಕೆ ತರೋಣ. ಕುಮಾರಣ್ಣರವರ ಪರವಾಗಿ ಹೋರಾಡೋಣ ಎಂದು ಮನವಿ ಮಾಡಿದರು.
*ಸಿಎಂ ಇಬ್ರಾಹಿಂ ಮಾತು:*
ನಾನು ಹಿಂದೆ ಒಬ್ಬ ಮಗನನ್ನ ನಾಡಿನ ಒಳಿತಿಗಾಗಿ ಕಳೆದುಕೊಂಡಿದ್ದೇನೆ. ನನಗೆ ಇಬ್ಬರು ಮಕ್ಕಳಿದ್ದರು. ಅದರಲ್ಲಿ ಒಬ್ಬ ಮಗನನ್ನು ಜಾರಿಸ್ ನಿಂದ ಕಳೆದುಕೊಂಡಿದ್ದೇನೆ. ಮಗನನ್ನು ಕಳೆದುಕೊಂಡ ಮರುದಿನವೇ ನಾನು ಮತ್ತೇ ನಾಡಿನ ಒಳಿತಿಗಾಗಿ ಹೋರಾಡಿದ್ದೇನೆ.
ಮಗನನ್ನು ನಿಮ್ಮ ಉಡಿಯಲ್ಲಿ ಹಾಕಿದ್ದಿನಿ:
ಈಗ ನನಗೆ ಇರುವುದು ಒಬ್ಬನೇ ಗಂಡುಮಗ ನಾನು ನನ್ನ ಮಗನನ್ನು ನಿಮ್ಮ ಉಡಿಯಲ್ಲಿ ಹಾಕಿದ್ದಿನಿ. ನೀವು ಅವನನ್ನು ನಿಮ್ಮ ಮಗ ಎಂದುಕೊಂಡು ಗೆಲ್ಲಿಸಿಕೊಡಿ ಎಂದು ಇಬ್ರಾಹಿಂ ಮನವಿ ಮಾಡಿದರು. ಇದೇ ವೇಳೆ ಬಿಜೆಪಿ, ಕಾಂಗ್ರೆಸ್ ವಿರುದ್ಧ ಗುಡುಗಿದರು.