ಶ್ರದ್ಧೆ, ನಿರಂತರ ಅಧ್ಯಯನದಿಂದ ಏನನ್ನು ಬೇಕಾದರೂ ಸಾಧಿಸಬಹುದು. ಹೆಚ್. ವಿ ಕುಮಾರಸ್ವಾಮಿ
ಪಾವಗಡ : ಪಟ್ಟಣದ ಶ್ರೀ ವೆಂಕಟೇಶ್ವರ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ 16ನೇ ಶಾಲಾ ವಾರ್ಷಿಕೋತ್ಸವ ಸಮಾರಂಭ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಶ್ರೀ ವೆಂಕಟೇಶ್ವರ ಸಂಸ್ಥೆಯ ಕಾರ್ಯದರ್ಶಿಯಾದ ಎಚ್ ಡಿ ಕುಮಾರಸ್ವಾಮಿ ಮಾತನಾಡಿ.
ಶಾಲೆಯು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿಕೊಳ್ಳಲು ಇರುವ ಕೇಂದ್ರ.
ವಿದ್ಯಾರ್ಥಿಗಳು ಶಾಲೆಯಲ್ಲಿ ಜ್ಞಾನಾರ್ಜನೆ ಪಡೆದು ಉನ್ನತ ಮಟ್ಟಕ್ಕೆ ಹೋಗಲು ಬೇಕಾಗುವ ಎಲ್ಲಾ ಅವಕಾಶಗಳನ್ನು ತಮ್ಮ ಸಂಸ್ಥೆಯಲ್ಲಿ ಕಲ್ಪಿಸಲಾಗಿದೆ ಎಂದರು.
ಈ ಸಂಸ್ಥೆಯು ಶಾಲಾ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೂ ಇರುವಂತಹ ಸಂಸ್ಥೆಯಾಗಿದ್ದು, ಗುಣಮಟ್ಟದ ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತನ್ನ ಕೊಡಲಾಗಿದೆ ಎಂದರು.
ಈ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಸಾಕಷ್ಟು ವಿದ್ಯಾರ್ಥಿಗಳು ಇಂದು ಉನ್ನತ ಮಟ್ಟದಲ್ಲಿದ್ದಾರೆ ಎಂದರು
.
ಸಿ .ಐ ಅಜಯ್ ಸಾರಥಿ ಮಾತನಾಡಿ, ಶಿವರಾತ್ರಿಯ ಹಬ್ಬದಂದು ಶಾಲಾ ವಾರ್ಷಿಕೋತ್ಸವ ಏರ್ಪಡಿಸಿ ರುವುದರಿಂದ, ಜಾಗರಣೆ ಮಾಡುವವರಿಗೆ ತುಂಬಾ ಅನುಕೂಲವಾಗಿ ಎಂದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಪ್ರತಿಭೆಗಳನ್ನು ಪ್ರದರ್ಶಿಸಲು ಇದೊಂದು ಪ್ರಮುಖ ವೇದಿಕೆಯಾಗಿದೆ ,
ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮ ಕುರಿತು ರೋದ್ದಂನ ಮದರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಯಾದ ಧನಂಜಯ ರೆಡ್ಡಿ ಮಾತನಾಡಿ,
ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನವನ್ನು ಕೊಡಬೇಕು.
ಮಕ್ಕಳನ್ನು ಅತಿಯಾಗಿ ನಿಯಂತ್ರಣ ಮಾಡುವುದರಿಂದ ಹಾಗೂ ಮಕ್ಕಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವುದರಿಂದ, ಏನಾಗುತ್ತದೆ ಎಂಬುದನ್ನು ಒಂದು ಕಥೆಯ ಮೂಲಕ ತಿಳಿಸಿದರು,
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯ, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿದರೆ ಮಾತ್ರ ಸಾಲದು, ಮಕ್ಕಳ ಕಲಿಕೆ ಬಗ್ಗೆ ಹೆಚ್ಚಿನ ಗಮನ ಕೊಡುವುದು ಪೋಷಕರ ಕರ್ತವ್ಯವಾಗಿದೆ ಎಂದರು.
ಶಿವರಾತ್ರಿಯ ಹಿನ್ನೆಲೆ
ಶಾಲಾ ವಾರ್ಷಿಕೋತ್ಸವಕ್ಕೆ ಸಾವಿರಾರು ಜನ ಹಾಜರಿದ್ದರು.
ಶಾಲಾ ಮಕ್ಕಳು ನಾಟಕ, ನೃತ್ಯಗಳ ಮೂಲಕ ಸಾರ್ವಜನಿಕರನ್ನು ರಂಜಿಸಿದರು.
ಕಾರ್ಯಕ್ರಮಕ್ಕೆ ಬಂದಂತಹ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಬಿ ಆರ್ ಸಿ ಪವನ್ ಕುಮಾರ್ ರೆಡ್ಡಿ, ಮದರ್ ಸಂಸ್ಥೆಯ ಸಂಸ್ಥಾಪಕರಾದ, ವೆಂಕಟರೆಡ್ಡಿ, ಬಿ ಆರ್ ಪಿ ವೇಣುಗೋಪಾಲ ರೆಡ್ಡಿ, ಮಾರುತೇಶ್, ಪರಂದಾಮ ರೆಡ್ಡಿ, ಮುಖ್ಯ ಶಿಕ್ಷಕ, ಸಹ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.