ಗ್ರಾ. ಪಂ. ಅಧ್ಯಕ್ಷರ ಆಯ್ಕೆ.
ಪಾವಗಡ : ತಾಲ್ಲೂಕಿನ ರಂಗಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಬೆಳ್ಳಿಬಟ್ಲು ಗ್ರಾಮದ ಮಾರಕ್ಕರಾಜಣ್ಣ ಅಧ್ಯಕ್ಷೆಯಾಗಿ ಮರು ಆಯ್ಕೆಯಾಗಿದ್ದಾರೆ
ಈ ಹಿಂದೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ
ಮಾರಕ್ಕನವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ
ಬೆಳ್ಳಿಬಟ್ಲು ಗ್ರಾಮ ದಿಂದ ಮಾರಕ್ಕ ಮತ್ತು ರಂಗಸಮುದ್ರ ಗ್ರಾಮದಿಂದ ಗುಣವತಿ ಮಾತ್ರ ನಾಮ ಪತ್ರ ಸಲ್ಲಿಸಿದ್ದು.
ಕೊನೆಯ ಕ್ಷಣದಲ್ಲಿ ಗುಣವತಿ ನಾಮಪತ್ರ ಹಿಂಪಡೆದುಕೊಂಡ ಕಾರಣ ತಹಶೀಲ್ದಾರ್ ಡಿ.ಎನ್ ವರದರಾಜು ಚುನಾವಣಾಧಿಕಾರಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಅವಿರೋಧ ಆಯ್ಕೆ ಪ್ರಕಟಿಸಿ ಮಾರಕ್ಕ ಅವರಿಗೆ ಅಧಿಕಾರ ವಹಿಸಿಕೊಟ್ಟರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಭವಾನಿ, ಮಹಲಿಂಗಪ್ಪ ಸೇರಿದಂತೆ 18 ಮಂದಿ ಸದಸ್ಯರು ಮತ ಚಲಾಯಿಸಿ ಮಾರಕ್ಕರಾಜಣ್ಣ ನವರಿಗೆ ಎರಡನೇ ಅವಧಿಗೆ ಮರು ಆಯ್ಕೆ ಮಾಡಿದ್ದಾರೆ.
ನೂತನ ಅಧ್ಯಕ್ಷ ಮಾರಕ್ಕರಾಜಣ್ಣ ಮಾತನಾಡಿ, ಮರುಆಯ್ಕೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುದಾಗಿ ತಿಳಿಸಿದರು.
ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ. ಪಂ ಸದಸ್ಯರಾದ ಮಹಲಿಂಗಪ್ಪ, ನರಸಿಂಹನಾಯಕ,ಅಂಜಿನೇಯ,ಲಕ್ಷ್ಮೀದೇವಿ,ಗಂಗಮ್ಮ,ಮಂಜುನಾಥ,ಓಬಳಪತಿ, ಸುರೇಂದ್ರ,ಅಕ್ಕಮಹಾದೇವಿ, ರಾಮಪ್ಪ,ಗುಣವತಿ,ಮದಕರಿ ನಾಯಕ ಹಾಗೂ ಮುಖಂಡರಾದ ಗಿರಿಯಪ್ಪ, ನಾರಾಯಣಪ್ಪ,ತಿಪ್ಪೇಸ್ವಾಮಿ, ನೀಲಕಂಠ
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಾದಲೂರಪ್ಪ ಮತ್ತು ಇತರರು ಹಾಜರಿದ್ದರು.
ವರದಿ : ಶ್ರೀನಿವಾಸಲು ಎ