IMG 20230222 WA0007

ಪಾವಗಡ: ಪಟ್ಟಣದ ಪ್ರತಿ ವಾರ್ಡಿನಲ್ಲಿ ಪಂಚರತ್ನ ಕಾರ್ಯಕ್ರಮ ದ ಅರಿವು…!

DISTRICT NEWS ತುಮಕೂರು

ಪಟ್ಟಣದ ಪ್ರತಿ ವಾರ್ಡಿನಲ್ಲಿ ಪಂಚರತ್ನ ಕಾರ್ಯಕ್ರಮ ದ ವಿವರವನ್ನು ತಿಳಿಸುವ ಕಾರ್ಯ ಮಾಡಲಾಗುತ್ತದೆ . ಮಾಜಿ ಶಾಸಕ ತಿಮ್ಮರಾಯಪ್ಪ

ಪಾವಗಡ : ಪಟ್ಟಣದ ಬನಶಂಕರಿಯ ಬಡಾವಣೆಯಲ್ಲಿ ಬುಧವಾರ ಜೆಡಿಎಸ್ ನಗರ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯನ್ನು
ಸಭೆಯನ್ನು ಉದ್ದೇಶಿಸಿ ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ,
ಜೆಡಿಎಸ್ ಪಕ್ಷ ರೈತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ ಪಕ್ಷವಾಗಿದೆ ಎಂದು,
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅಧಿಕಾರದ ಅವಧಿಯಲ್ಲಿ ರೈತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ರೈತರನ್ನು ಸಂಕಷ್ಟಗಳಿಂದ ಪಾರು ಮಾಡಲು , ರೈತರ ಸಾಲಮನ್ನಾ ಮಾಡಿದ್ದಾರೆ ಎಂದರು.
ಜೆಡಿಎಸ್ ಪಕ್ಷದ ಪ್ರಮುಖ ಯೋಜನೆಯಾದ ಪಂಚರತ್ನ ಯೋಜನೆಯಿಂದ ರಾಜ್ಯದಾದ್ಯಂತ ಪಕ್ಷದ ಅಲೆ ಎದ್ದಿದ್ದೆ ಎಂದು,

ನೂತನವಾಗಿ ಆಯ್ಕೆಯಾದ ನಗರ ಘಟಕದ ಪದಾಧಿಕಾರಿಗಳು ಹೆಚ್ಚಿನ ಶ್ರಮ ವಹಿಸಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸಬೇಕೆಂದರು,
ಪಾವಗಡ ನಗರದಲ್ಲಿ ಮುಕ್ತಿಧಾಮವನ್ನು ನನ್ನ ಅಧಿಕಾರದ ಅವಧಿ ನಿರ್ಮಾಣ ಮಾಡಲಾಗಿದೆ ಎಂದು,
ಪಟ್ಟಣದ ಎಲ್ಲಾ ವಾರ್ಡುಗಳಲ್ಲಿ ಪಂಚರತ್ನ ಕಾರ್ಯಕ್ರಮ ದ ವಿವರವನ್ನು ಪ್ರತಿ ಮನೆಗೂ ತಲುಪಿಸುವ ಕಾರ್ಯ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಎನ್.ಎ. ಈರಣ್ಣ ಮಾತನಾಡಿ , 2023 ರಲ್ಲಿ ನಡೆಯುವ ಪಾವಗಡ ತಾಲೂಕಿನ ವಿಧಾನಸಭೆಯ ಚುನಾವಣೆಯು ಹಣವಂತರು ಹಾಗೂ ಬಡವರ ನಡುವೆ ನಡೆಯುವ ಸಮರ ಎಂದರು.
ತಾಲೂಕಿನಲ್ಲಿ ಹಣವನ್ನು ಚೆಲ್ಲಿ ಚುನಾವಣೆಯಲ್ಲಿ ಗೆಲ್ಲುವ ಹುನ್ನಾರ ನಡೆಯುತ್ತಿದೆ ಎಂದರು.

IMG 20230222 WA0008
ಜನಕ

ಜೆಡಿಎಸ್ ಪಕ್ಷ, ಕುಮಾರಸ್ವಾಮಿಯವರು ರಾಜ್ಯಕ್ಕೆ ನೀಡಿದ ಕೊಡುಗೆ, ಹಾಗೂ ತಿಮ್ಮರಾಯಪ್ಪನವರು ತಾಲೂಕಿಗೆ ನೀಡಿರುವ ಕೊಡುಗೆಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗಲಾಗುವುದು ಎಂದರು.
ಕಾರ್ಯಕ್ರಮದಲ್ಲಿ
ತಾಲ್ಲೂಕು ಅಧ್ಯಕ್ಷರಾದ ಬಲರಾಮರೆಡ್ಡಿ,
ಈರಣ್ಣ, ಗಡ್ಡಂ ತಿಮ್ಮರಾಜು, ರಾಮಕೃಷ್ಣರೆಡ್ಡಿ, ಅಂಬಿಕಾ, ಸೊಗಡು ವೆಂಕಟೇಶ್ , ರಾಜಶೇಖರಪ್ಪ ಅಕ್ಕಲಪ್ಪನಾಯ್ಡು, ಕೆ.ಟಿ.ನಾಗರಾಜು, ರಫೀಕ್ ಸಾಬ್, ಸತೀಸ್, ಕೊಂಡರಾಳ್ಳ ರಾಮಣ್ಣ, ಖಲೀದ್, ಹಮಾಲಿ ಸಂಘದ ಅಧ್ಯಕ್ಷ ನಾರಾಯಣಪ್ಪ, ಶ್ರೀರಾಮಪ್ಪ, ಮಿಷನ್ ನಾರಾಯಣಪ್ಪ, ವೇಣುಗೋಪಾಲ, ಕಮಲ್ ಬಾಬು, ರಂಗಮ್ಮ, ಸತ್ಯಪ್ಪ, ನಾಗರಾಜು, ಕೃಷ್ಣಮೂರ್ತಿ, ಯೂನಸ್, ಸಾದೀಕ್ ಸಾಬ್, ಕೋಟಗುಡ್ಡ ಅಂಜಿನಪ್ಪ, ಬುಲೇಟ್ ರಾಜು, ನಾಗೇಂದ್ರ, ಗೀತಾ ವೆಂಕಟೇಶ್, ಲೋಕೇಶ್, ಶಿವಪ್ಪ ನಾಯಕ, ಗೇಟ್ ಕುಮಾರ್, ಧರ್ಮಪಾಲ್, ಹನುಮಂತರಾಯುಡು, ಗುಟ್ಟಹಳ್ಳಿ ಮಣಿ, ಜಿ.ಎ.ವೆಂಕಟೇಶ್, ವಸಂತ, ಗೋಪಾಲ, ಗಿರಿ ನಲ್ಲಪ್ಪ, ಶಿವಕುಮಾರ್, ಈರಪ್ಪ, ಸುಬ್ಬರಾಯಪ್ಪ, ಹಮಾಲಿ ರಾಮಾಂಜಿ, ದಾಸಪ್ಪ, ಸುಹೇಲ್, ಮಂಜುನಾಥ ಕಾವಲಗೇರಿ ರಾಮಾಂಜಿ,
ಮಹಿಳಾ ಕಾರ್ಯಕರ್ತರು, ಮತ್ತು ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.