ಪಾವಗಡ: ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆ ಗ್ರಾಮದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯು ಶತಮಾನದ ಸೇವೆಯನ್ನು ಪೂರೈಸಿ ಮುಂದೆ ಸಾಗುತ್ತಿದೆ
ಈ ಹಿನ್ನೆಲೆಯಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಶತಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಜ್ಜಾಗುತ್ತಿದ್ದಾರೆ
ಈ ನಿಟ್ಟಿನಲ್ಲಿ ನಿರಂತರ ಸಭೆಗಳು ನಡೆದು ಹಳೆಯ ವಿದ್ಯಾರ್ಥಿಗಳ ಸಂಘ ರಚನೆಯಾಗಿದ್ದು ಅದರ ಮೂಲಕ ಶತಮಾನೋತ್ಸವ ಸಮಿತಿ ರೂಪುಗೊಳ್ಳು ತ್ತಿದೆ
ದಿನಾಂಕ 25.02.2023 ರಂದು ನಡೆದ ಸಭೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ಮಾರ್ಚ್ 19 ರಂದು ಆಚರಿಸಲು ನಿರ್ಧರಿಸಲಾಯಿತು
ಹಾಗೂ ಒಂದು ದಿನ ನಡೆಯುವ ಕಾರ್ಯಕ್ರಮದಲ್ಲಿ ಪುರಮೆರವಣಿಗೆ, ಉದ್ಘಾಟನೆ , ಗುರುವಂದನೆ, ಅಭಿನಂದನೆ, ಸಾಧಕರಿಗೆ ಸನ್ಮಾನ, ಸಮಾರೋಪ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಓ. ನಾಗರಾಜ ತಿಳಿಸಿದರು
ದಿನಾಂಕ 28 .2.2022 ರಂದು ಬೆಳಿಗ್ಗೆ 10 ಗಂಟೆಗೆ ಶಾಲೆಯಲ್ಲಿ ನಡೆಯಲಿರುವ ಸಭೆಯಲ್ಲಿ ಸ್ವಾಗತ ಸಮಿತಿ ರಚನೆಯಾಗಲಿದ್ದು ಅದರ ಮೂಲಕ ಕಾರ್ಯ ಚಟುವಟಿಕೆಗಳನ್ನು ವಿಸ್ೃತ ಗೊಳ್ಳಲಿವೆ
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಹಣಕಾಸಿನ ಅವಶ್ಯಕತೆ ಇದ್ದು ಹಳೆಯ ವಿದ್ಯಾರ್ಥಿಗಳು, ಶಾಲೆಯ ಹಿತೈಷಿಗಳು, ಸಾರ್ವಜನಿಕರು ಮತ್ತು ಮುಖಂಡರು ತನುಮನ ಧನದೊಂದಿಗೆ ಸಹಕರಿಸಬೇಕು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದರು
ಸಾವಿರಾರು ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡಿರುವುದರಿಂದ ಎಲ್ಲಾ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮಾಧ್ಯಮದ ಮೂಲಕ ತಮ್ಮೆಲ್ಲರನ್ನು ಶಾಲೆಯ ಕಾರ್ಯಕ್ರಮಕ್ಕೆ ಆಹ್ವಾನಿಸುತಿದ್ದೇವೆ.
ಬನ್ನಿ ನಮ್ಮ ಶಾಲೆ ನಮ್ಮ ಕಾರ್ಯಕ್ರಮ ಯಶಸ್ವಿ ಮಾಡೋಣ ಎಂದರು
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ಅಧ್ಯಕ್ಷರು-99809 57846 ಸಂಚಾಲಕರು – 9449497940 ಮುಖ್ಯ ಶಿಕ್ಷಕರು- 9620134823 ರವರನ್ನು ಸಂಪರ್ಕಿಸಿ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಹೊ.ಮ.ನಾಗರಾಜು, ಮುಖ್ಯ ಶಿಕ್ಷಕ ಐ.ಎ.ನಾರಾಯಣಪ್ಪ, ಮುಖಂಡರಾದ ಎನ್ ಆರ್ ಅಶ್ವತ್ಥ ಕುಮಾರ್ ಟಿ ಎನ್ ಜಗನ್ನಾಥ್, ಎಚ್ ಅಂಜಯ್ಯ ನಿವೃತ್ತ ಶಿಕ್ಷಕರಾದ ಫಕ್ರುದ್ದೀನ್ , ಚಂದ್ರಶೇಖರ್ ಮುದ್ರಾಡಿ ಹಳೆಯ ವಿದ್ಯಾರ್ಥಿಗಳಾದ ಪಿ ಸಿ ಉಮೇಶ್, ಕೃಷ್ಣಕುಮಾರ್ , ಅಶ್ವಥ್ ನಾರಾಯಣ, ನಾಗರಾಜ, ಮಂಜುನಾಥ, ರಮೇಶ್ ಕುಮಾರ್, ನಾಗಪ್ಪ, ಸತ್ಯನಾರಾಯಣ ಚಾರಿ ಇತರರು ಇದ್ದರು.
ವರದಿ :- ನಂದೀಶ್ ನಾಯ್ಕ