ಮಧುಗಿರಿ : ಬಿ ಎಸ್ ಪಿ ಪಕ್ಷದ ಅಧಿಕೃತ ಅಭ್ಯರ್ಥಿಯು ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿ ತನ್ನ ಉಮೇದುವಾರಿಕೆಯನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸದೆ ವಾಪಸ್ ಹಿಂದಿರುಗಿರುವ ಘಟನೆ ನಡೆದಿದೆ.
ಪಟ್ಟಣದ ಹೊರ ವರ್ತುಲ ರಸ್ತೆಯಿಂದ ಹಿಡಿದು ಕಾರ್ಯಕರ್ತರೊಂದಿಗೆ ಪ್ರಮುಖ ರಸ್ತೆಗಳಲ್ಲಿ ತೆರೆದ ಪ್ರಚಾರ ವಾಹನದಲ್ಲಿ ಉಮೇದುವಾರಿಕೆ ಸಲ್ಲಿಸಲು ಆಗಮಿಸಿದ ಬಿ ಎಸ್ ಪಿ ಅಭ್ಯರ್ಥಿ ಸಿ ಎನ್ ಮಧು ಪಕ್ಷದ ರಾಜ್ಯ ನಾಯಕರ ಭಾಷಣ ಮುಕ್ತಾಯವಾದ ನಂತರ ಒಳ ಹೋದವರು ನಂತರ ಕಚೇರಿ ಮುಂದೆ ಜಮಾವಣೆಯಾಗಿದ್ದ ಸ್ಥಳೀಯ ಕಾರ್ಯಕರ್ತರಿಗೆ ಯಾವುದೇ ವಿಚಾರ ಬಹಿರಂಗ ಪಡಿಸದೆ ಅಲ್ಲಿಂದ ಹೊರ ನಡೆದಿದ್ದಾರೆಂದು ಬಲ್ಲ ಮೂಲಗಳ ಪ್ರಕಾರ ತಿಳಿದು ಬಂದಿದೆ.
ಸ್ಥಳೀಯವಾಗಿ ಚುನಾವಣೆಗೆ ಸಂಬಂಧಪಟ್ಡಂತೆ ಬ್ಯಾಂಕ್ ಖಾತೆ ಹಾಗೂ ಮತ್ತಿತರ ದಾಖಲೆಗಳು ಅಭ್ಯರ್ಥಿ ಬಳಿ ಸ್ಥಳದಲ್ಲಿ ಲಭ್ಯವಿರಲಿಲ್ಲದ ಕಾರಣ ಚುನಾವಣಾ ಕಚೇರಿ ಯಿಂದ ವಾಪಸ್ ತೆರಳಿದ್ದು ನಾಳೆ ಅಥವಾ ನಾಡಿದ್ದು ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಇತ್ತ ತಮ್ಮ ನೆಚ್ಚಿನ ಅಭ್ಯರ್ಥಿ ಕಚೇರಿ ಬಳಿ ಬರುತ್ತಾರೆಂದು ಕಾದು ಕಾದು ಕುಳಿತ್ತಿದ್ದ ಕಾರ್ಯಕರ್ತರು ಅಲ್ಲಿಂದ ವಾಪಸ್ ಆಗಿದ್ದಾರೆ. ನಾಳೆ ಮತ್ತೆ ಸಿಗುತ್ತೇನೆ ಬರುತ್ತೇನೆಂದು ಹೇಳಿ ಹೋಗಿದ್ದಾರೆಂದು ಕಚೇರಿ ಬಳಿ ಜಮಾಯಿಸಿದ್ದ ಕಾರ್ಯಕರ್ತರು ತಿಳಿಸಿದ್ದಾರೆ.
ಸೋಮವಾರ ಶುಭದಿನವೆಂದು ಸಾಂಕೇತಿಕ ವಾಗಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್ ರಾಜಣ್ಣ , ಜೆಡಿಎಸ್ ಪಕ್ಷದಿಂದ ಎಂ.ವಿ.ವೀರಭದ್ರಯ್ಯ , ಪ್ರಜಾಕೀಯ ಪಕ್ಷದಿಂದ ತೊಣಗೊಂಡನಹಳ್ಳಿಯ ಮುದ್ದರಾಜು , ಕೆ ಆರ್ ಎಸ್ ಪಕ್ಷದ ಜಯಂತ್ ಸೇರಿದಂತೆ ಒಟ್ಟು ನಾಲ್ಕು ಉಮೇದುವಾರಿಕೆಗಳು ಮಧುಗಿರಿ ವಿಧಾನ ಸಭಾ ಕ್ಷೇತ್ರಕ್ಕೆ ಸಲ್ಲಿಕೆ ಯಾಗಿವೆ.
ವರದಿ. ಲಕ್ಷ್ಮಿಪತಿ ದೊಡ್ಡ ಯ ಲ್ಕೂರು