28 ynh 03 scaled

ಪಾವಗಡ: ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ…!

DISTRICT NEWS ತುಮಕೂರು

ಪ್ರತಿಭೆಗೆ ಪ್ರೋತ್ಸಾಹ ಅಗತ್ಯ….!

ವೈ.ಎನ್.ಹೊಸಕೋಟೆ : ವಿದ್ಯಾರ್ಥಿಗಳಿಗೆ ಅಗತ್ಯವಾದ ಪ್ರೋತ್ಸಾಹ ದೊರೆತರೆ ಉತ್ತಮ ಪ್ರತಿಭೆಗಳಾಗಿ ಬೆಳೆಯಲು ಸಾಧ್ಯ ಎಂದು ರೈಲ್ವೆ ಇಲಾಖೆಯ ಅಧಿಕಾರಿ ಬಿ.ಆರ್.ನಾಗೇಶ್ ತಿಳಿಸಿದರು.
ಗ್ರಾಮದ ರಾಷ್ಟ್ರೀಯ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ 1989 ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಪ್ರೇರಣಾ ಟ್ರಸ್ಟಿನ ವಾರ್ಷಿಕ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಅನೇಕ ಪ್ರತಿಭೆಗಳಿವೆ. ಅವುಗಳನ್ನು ಗುರ್ತಿಸಿ ಅವಕಾಶ ನೀಡಬೇಕು.

ನಾವು ಓದುವ ಸಂದರ್ಭದಲ್ಲಿ ಶಾಲೆಗೆ ಪ್ರಥಮ ಬಂದರೆ ಅಥವಾ ಇನ್ನಾವುದೇ ಕ್ಷೇತ್ರದಲ್ಲಿ ಪ್ರತಿಭೆ ಹೊಂದಿದ್ದರೆ ನಮ್ಮನ್ನು ಪ್ರೋತ್ಸಾಹಿಸುವವರ ಕೊರತೆ ಇತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿ ಪ್ರತಿಭಾ ಪುರಸ್ಕಾರ ನಡೆಯುತ್ತಿದೆ. ಇದು ಅಗತ್ಯವೂ ಹೌದು. ಸನ್ಮಾನಿಸಿ ಗೌರವಿಸುವುದರಿಂದ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಶ್ರಮ ಪಡುವ ಮತ್ತು ಹೆಚ್ಚಿನ ಅಂಕ ಗಳಿಸುವ ಶಕ್ತಿ ವೃದ್ಧಿಯಾಗುತ್ತದೆ ಎಂದರು.

28 ynh01

ಸಮಾಜಮುಖಿ ಚಿಂತನೆ ಮತ್ತು ಚಟುವಟಿಕೆಗಳಿಂದ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗುತ್ತದೆ. ದಿನನಿತ್ಯದ ವ್ಯಾಪಾರ ವ್ಯವಹಾರ ಉದ್ಯೋಗ ಇತ್ಯಾದಿಗಳು ನೆಮ್ಮದಿಯ ಜೀವನಕ್ಕೆ ಭಂಗ ತರುವುದು ಸಹಜ. ಅಂತಹ ಸಂದರ್ಭಗಳಲ್ಲಿ ಸಂಘಸಂಸ್ಥೆಗಳ ಒಡನಾಟ ಮತ್ತು ಸಮಾಜಮುಖಿ ಚಿಂತನೆಗಳಿಂದ ಜೀವನೋತ್ಸಾಹ ಮೂಡುತ್ತದೆ. ಸಹಪಾಟಿ ಗೆಳೆಯರೆಲ್ಲಾ ಸೇರಿ ಸ್ಥಾಪಿಸಿ ಕಾರ್ಯೋನ್ಮುಖವಾಗಿರುವ ಪ್ರೇರಣ ಟ್ರಸ್ಟ್ ಹಳೆಯ ವಿದ್ಯಾರ್ಥಿ ದಿನಗಳನ್ನು ನೆನಪಿಸುತ್ತಿದೆ ಮತ್ತು ಎಲ್ಲರ ಒಗ್ಗೂಡುವಿಕೆ ಸಂತೋಷವನ್ನುಂಟು ಮಾಡುತ್ತಿದೆ ಎಂದು ರಾಷ್ಟ್ರೀಯ ವಿದ್ಯಾಪೀಠ ಸಂಸ್ಥೆಯ ನಿರ್ದೇಶಕರಾದ ಜಿ.ಬಿ.ಸತ್ಯನಾರಾಯಣ ತಿಳಿಸಿದರು.

ಟ್ರಸ್ಟಿನ ಅಧ್ಯಕ್ಷ ಪಿ.ಸಿ. ಗೋಪಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಷ್ಟ್ರೀಯ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ಕಲಿತ ನಾವು ಇಂದು ಪ್ರೇರಣಾ ಟ್ರಸ್ಟನ್ನು ರಚನೆ ಮಾಡಿಕೊಂಡು ಶಾಲೆಯ, ವಿದ್ಯಾರ್ಥಿಗಳ ಮತ್ತು ಸಮಾಜ ಸೇವೆ ಮಾಡಲು ಮುಂದಾಗಿದ್ದೇವೆ. ಇದಕ್ಕಾಗಿ ಎಲ್ಲಾ ಗೆಳೆಯರ ಸಹಕಾರ ಅಗತ್ಯವಾಗಿ ನೀಡಬೇಕು ಎಂದರು.
ಟ್ರಸ್ಟಿನ ಪದಾಧಿಕಾರಿಗಳಾದ ಹಿದಾಯತ್ ಉಲ್ಲಾ, ಪದ್ಮಾವತಿ, ಯರ್ರಪ್ಪ, ವೆಂಕಟೇಶ್, ಹೊ.ಮ.ನಾಗರಾಜು ಇತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಚಂದ್ರಣ್ಣ, ಎಂ.ಜಿ.ವೀಣಾ, ಸುಭದ್ರಮ್ಮ, ಸೌಭಾಗ್ಯ, ನಾಗಭೂಷಣ, ಗೆನ್ನೆ ನಾಗರಾಜು, ಮಲ್ಲಿ, ಜಿ.ಹೆಚ್.ಅಂಜಿನೇಯಲು, ನಯಾಜ್, ಗೋಪಾಲಕೃಷ್ಣ, ಮಂಜುನಾಥ.ಟಿ, ಇತರರು ಇದ್ದರು.

ವರದಿ :ರಾಮಚಂದ್ರ