IMG 20220715 WA0000

ಪಾವಗಡ:ವಿಶ್ವ ಜನಸಂಖ್ಯೆ ದಿನಾಚರಣೆ ಆಚರಣೆ…!

DISTRICT NEWS ತುಮಕೂರು

ಇಡೀ ವಿಶ್ವದಲ್ಲಿಯೇ ಉತ್ತಮ ಮಾನವ ಸಂಪನ್ಮೂಲಕ್ಕೆ ಭಾರತ ಜನಪ್ರಿಯತೆ ಗಳಿಸಿದೆ. ಪ್ರಾಂಶುಪಾಲ ಡಾ. ಎನ್.ಶ್ರೀಧರ್ .

ಪಾವಗಡ: ….ಪಟ್ಟಣದ ವೈ ಇ ಆರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ವಿಶ್ವ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಎನ್.ಶ್ರೀಧರ್ . ಮಾತನಾಡಿ ಜನಸಂಖ್ಯೆ ನಿಯಂತ್ರಣದೊಂದಿಗೆ, ನಿಭಾಯಿಸುವ ಸಾಮರ್ಥ್ಯವನ್ನು ನಾವು ರೂಡಿಸಿಕೊಳ್ಳಬೇಕೆಂದು ಎಂದು ಕರೆ ನೀಡಿದರು.

ಜನಸಂಖ್ಯೆ ತೀವ್ರವಾಗಿ ಕುಸಿದರೂ ದೇಶದ ಅಭಿವೃಧ್ಧಿ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹೀಗಾಗಿ ಜನಸಂಖ್ಯೆಯನ್ನು ಸಮರ್ಪಕವಾಗಿ ನಿಭಾಯಿಸುವ ಅಗತ್ಯವಿದೆ ಎಂದರು. ಚೀನಾ ಜನತೆ ಮೇಲೆ ಒತ್ತಡ ಹೇರಿ ಜನಸಂಖ್ಯೆ ನಿಯಂತ್ರಣ ಮಾಡಿದ ಪರಿಣಾಮ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದರು.
ಭಾರತದಂತಹ ರಾಷ್ಟ್ರದಲ್ಲಿ ಜನಸಂಖ್ಯೆ ಸಮತೋಲವಾಗಿರುವಂತೆ ನೋಡಿಕೊಳ್ಳಬೇಕು. ಮಿತಿ ಮೀರಬಾರದು, ತೀವ್ರ ಕುಸಿಯಲೂ ಬಾರದು. ಇಡೀ ವಿಶ್ವದಲ್ಲಿಯೇ ಉತ್ತಮ ಮಾನವ ಸಂಪನ್ಮೂಲಕ್ಕೆ ಭಾರತ ಜನಪ್ರಿಯತೆ ಗಳಿಸಿದೆ ಎಂದರು.
ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಕಿಟ್ಟಪ್ಪ, ಜನಸಂಖ್ಯೆ ಹೆಚ್ಚಳದಿಂದ ಲಿಂಗ ಅಸಮಾನತೆ, ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚುತ್ತಿದೆ. ಜಾಗತಿಕವಾಗಿ ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಕ್ಷೇತ್ರಗಳ ಮೇಲೆ ಮಿತಿ ಮೀರಿದ ಜನಸಂಖ್ಯೆ ಪರಿಣಾಮ ಬೀರುತ್ತಿದೆ ಎಂದರು.
ಅನಗತ್ಯ ಗರ್ಭಧಾರಣೆ, ಹದಿಹರೆಯದ ಹೆಣ್ಣು ಮಕ್ಕಳು ಗರ್ಭಿಣಿಯಾದಾಗ ಕಡಿಮೆ ತೂಕ, ಗರ್ಭಪಾತ, ರಕ್ತಹೀನತೆ, ಅಪೌಷ್ಟಿಕತೆ ಸೇರಿದಂತೆ ದೈಹಿಕ, ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ನಿಯಂತ್ರಣಾ ಕ್ರಮಗಳ ಬಗ್ಗೆ ಅರಿವಿರಬೇಕು ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಎಂ ಗಂಗಾಧರಪ್ಪ, ಪ್ರೇರಣಾ ಫೌಂಡೇಷನ್ ಕಾರ್ಯದರ್ಶಿ ರಾಮಕೃಷ್ಣನಾಯ್ಕ ಮಾತನಾಡಿದರು.
ಐ ಕ್ಯು ಎ ಸಿ ಸಂಚಾಲಕ ಬಿ ಬೊಮ್ಮಲಿಂಗಯ್ಯ, ನಂದಿನಿ, ಚಿತ್ರಲಿಂಗ, ಸುಬ್ರಮಣಿ, ಎಂ. ಅನಿಲ್ ಕುಮಾರ್ ಉಪಸ್ಥಿತರಿದ್ದರು.

ವರದಿ: ಶ್ರೀನಿವಾಸಲು ಎ