ಮಹಿಳೆಯ ಹೊಟ್ಟೆಯಲ್ಲಿ 5kg ಗಡ್ಡೆ . ಯಶಸ್ವಿ ಚಿಕಿತ್ಸೆ.
ಪಾವಗಡ : ಮಹಿಳಾ ರೋಗಿಯೊಬ್ಬರ ಹೊಟ್ಟೆ ಯಲ್ಲಿ ಬೆಳೆದಿದ್ದ 5 ಕೆ.ಜಿ ತೂಕದ ಗಡ್ಡೆಯನ್ನು ಶುಕ್ರವಾರ ಪಟ್ಟಣದ ಡಾ ಶಿವಕುಮಾರ್ ಆಸ್ಪತ್ರೆಗೆ ಬೆಂಗಳೂರಿನಿಂದ ಆಗಮಿಸಿದ ವೈದ್ಯರಾದ ಡಾಕ್ಟರ್ ಚಂದ್ರಶೇಖರ್ ಮೂರ್ತಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ.
ತಾಲೂಕಿನ ಬಾಲಮ್ಮನಹಳ್ಳಿಯ ಮುದ್ದಮ್ಮ (65)
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದರು.
ತಪಾಸಣೆ ನಡೆಸಿದಾಗ ಗಡ್ಡೆ ಬೆಳೆದಿದ್ದು ಪತ್ತೆಯಾಗಿತ್ತು. ಮಹಿಳೆ ಜೀವಕ್ಕೆ ಅಪಾಯ ಎಂಬುದನ್ನು ಅರಿತ ವೈದ್ಯರ ತಂಡ, ತಕ್ಷಣವೇ ಮಹಿಳೆಯನ್ನು ಚಿಕಿತ್ಸೆಗೆ ದಾಖಲಿಸಿಕೊಂಡರು.
ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರಾದ ಡಾಕ್ಟರ್ ಚಂದ್ರಶೇಖರ್ ಮೂರ್ತಿ ಡಾಕ್ಟರ್ ಶಿವಕುಮಾರ್ ರವರ
ತಂಡ ಈ ಶಸ್ತ್ರಚಿಕಿತ್ಸೆ ನಡೆಸಿ
ಮಹಿಳೆ ಗರ್ಭಕೋಶದಲ್ಲಿ ಬೆಳೆದಿದ್ದ 5.ಕೆಜಿ ತೂಕದ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದು ಆಕೆಯ ಜೀವ ರಕ್ಷಿಸುವಲ್ಲಿ ಶಿವಕುಮಾರ್ ಆಸ್ಪತ್ರೆ ವೈದ್ಯರು ಸಫಲರಾಗಿದ್ದಾರೆ.
ವರದಿ : ಶ್ರೀನಿವಾಸಲು ಎ