, ಐ.ಡಿ. ಹಳ್ಳಿಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇಂದು 2023-2024ನೇ ಸಾಲಿನ ಅಲೆಮಾರಿ ವಸತಿ ಮಂಜೂರಾತಿಪತ್ರಗಳ ವಿತರಣಾ ಕಾರ್ಯಕ್ರಮ.
ಮಧುಗಿರಿ. ಐ.ಡಿ ಹ ಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷರಾದ ನರಸಿಂಹ ರೆಡ್ಡಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಜಿಲಾನ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಎ.ಪಿ. ಪ್ರಕಾಶ್ ಕಾರ್ಯದರ್ಶಿ ಆದಿ ನರಸಿಂಹಲು. ಮುಖಂಡರುಗಳಾದ ನಾಗರಾಜು. ಡಿ ಇ. ಓ. ಕಮಲೇಶ್. ಬಿಲ್ ಕಲೆಕ್ಟರ್ ಸಾಯಿಪ್ರಕಾಶ್. ಸದಾಶಿವಯ್ಯ. ಹಾಜರಿದ್ದು 12 ಜನ ಫಲಾನುಭವಿಗಳಿಗೆ ಮನೆ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿದರು.
ಮನೆ ಮಂಜೂರಾತಿ ಪತ್ರಗಳನ್ನು ವಿತರಿಸಿ ಮಾತನಾಡಿದ ಅಧ್ಯಕ್ಷರಾದ ನರಸಿಂಹ ರೆಡ್ಡಿ ಅವರು ಮಂಜೂರಾತಿ ಪತ್ರ ತೆಗೆದುಕೊಂಡು ಹೋಗಿ ಮನೆಯಲ್ಲಿ ಇಟ್ಟುಕೊಳ್ಳದೆ ಆದಷ್ಟು ಬೇಗನೆ ಮನೆ ಕಟ್ಟಿಕೊಳ್ಳಬೇಕು ನೀವು ಎಷ್ಟು ಬೇಗ ಮನೆ ಕಟ್ಕೊಳಲು ಪ್ರಾರಂಭಿಸುತ್ತಿದ್ದರು ನಿಮ್ಮ ಖಾತೆಗೆ ಹಣ ಜಮಾಾವಣೆಯಾಗುತ್ತದೆ ಎಂದು ತಿಳಿಸಿದರು ಮತ್ತು ಈ ಸಂದರ್ಭದಲ್ಲಿ ಸಹಕಾರಿ ಸಚಿವರಾದ ಕೆ ಎನ್ ರಾಜಣ್ಣನವರ ಆದೇಶದ ಮೇರೆಗೆ ನಾವು ಈ ದಿನ ಮಂಜೂರಾತಿ ಪತ್ರಗಳನ್ನು ತಮಗೆ ನೀಡಿದ್ದೇವೆ ಎಂದು ತಿಳಿಸಿದರು.
ವರದಿ. ಲಕ್ಷ್ಮಿಪತಿ ದೊಡ್ಡ ಯ ಲ್ಕೂರು.