IMG 20230830 WA0040

ಪಾವಗಡ: ಶೀಘ್ರವೇ 500 ಮನೆಗಳ ನಿರ್ಮಾಣಕ್ಕೆ ಯೋಜನೆ…!

DISTRICT NEWS ತುಮಕೂರು

ಶೀಘ್ರವೇ 500 ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು. ಶಾಸಕ ಹೆಚ್. ವಿ ವೆಂಕಟೇಶ್

ಪಾವಗಡ : ಬಿಜೆಪಿ ಸರ್ಕಾರ ಕಾರ್ಪೊರೇಟ್ ವ್ಯಕ್ತಿಗಳ ಪರವಿದ್ದರೆ ಕಾಂಗ್ರೆಸ್ ಪಕ್ಷ ಬಡವರ ಪರ ಇದೆ. ಎಂದು ಶಾಸಕ ಹೆಚ್.ವಿ ವೆಂಕಟೇಶ್ ತಿಳಿಸಿದರು.

ಪಟ್ಟಣದ ಎಸ್ ಎಸ್ ಕೆ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ ಅವರು ಮಾತನಾಡಿದರು.
ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಗಳು ಬಗ್ಗೆ ಕೇವಲವಾಗಿ ಮಾತನಾಡಿದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅದೇ ಗ್ಯಾರೆಂಟಿ ಯೋಜನೆಗಳಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದರಿಂದ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳಿಗೆ ನಿಂಗಲಾರದ ತುತ್ತಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿಗಳ ಪೈಕಿ ನಾಲ್ಕನೇ ಗ್ಯಾರಂಟಿ ಆದ ಮನೆಯ ಯಜಮಾನಿಗೆ 2000 ಹಣ ಹಾಕುವಂತಹ ಗೃಹಲಕ್ಷ್ಮಿ ಯೋಜನೆಗೆ ಮೈಸೂರಿನಲ್ಲಿ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಚಾಲನೆ ನೀಡುತ್ತಿರುವ ಹಿನ್ನೆಲೆ ಪಾವಗಡ ಪಟ್ಟಣದ ಎಸ್ ಎಸ್ ಕೆ ಬಯಲು ರಂಗಮಂದಿರದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಯಿತು ಎಂದು ತಿಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಚರ್ಚೆ ನಡೆಸಿ ಕೊಳಚೆ ನಿರ್ಮೂಲನ ಮಂಡಳಿಯಿಂದ, ವಸತಿ ಸಮುಚ್ಚಯದಲ್ಲಿ 500 ಮನೆಗಳಿಗೆ ಯೋಜನೆ ರೂಪಿಸಲಾಗುತ್ತಿದ್ದು ಅತಿ ಶೀಘ್ರದಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಗುವುದು, ಈ ಹಿಂದೆ ತಂದೆಯವರಾದ ವೆಂಕಟರಮಣಪ್ಪ ಅವರು ಶಾಸಕರಾಗಿದ್ದಾಗ ಶಿರಾ ರಸ್ತೆ ಮಾರ್ಗದಲ್ಲಿ 500 ಮನೆಗಳನ್ನು ನಿರ್ಮಾಣ ಮಾಡಿ ವೆಂಕಟರಮಣಪ್ಪ ಬಡಾವಣೆಯೆಂದು ನಾಮಕರಣ ಮಾಡಲಾಗಿತ್ತು ಆದರೆ ಜೆಡಿಎಸ್ ನವರು ಅದನ್ನು ಕುಮಾರಸ್ವಾಮಿ ಬಡಾವಣೆ ಎಂದು ಬದಲಿಸಿದ್ದಾರೆ, ಶೀಘ್ರದಲ್ಲಿಯೇ ವೆಂಕಟರಮಣಪ್ಪ ಬಡಾವಣೆ ಎಂದು ನಾಮಫಲಕ ಅಳವಡಿಸುವಂತೆ ಮುಖ್ಯ ಅಧಿಕಾರಿ ಶಂಸುದ್ದೀನ್ ಅವರಿಗೆ ವೇದಿಕೆಯಲ್ಲಿ ತಾಕೀತು ಮಾಡಿದರು.IMG 20230830 WA0041

ಮಾಜಿ ಶಾಸಕರಾದ ವೆಂಕಟರಮಣಪ್ಪ ಮಾತನಾಡಿ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 5 ಗ್ಯಾರಂಟಿಗಳನ್ನು ತಂದು ಬಡವರ ಉದ್ಧಾರಕ್ಕೆ ಬದ್ಧರಾಗಿದ್ದು, ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ತಾವು ಬೆಂಬಲಿಸುವಂತೆ ಮನವಿ ಮಾಡಿದರು .

ಕಾರ್ಯಕ್ರಮ ಉದ್ದೇಶಿಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ್ ಮಾತನಾಡಿ ಪಾವಗಡ ತಾಲೂಕಿನ ಅತ್ಯಂತ ಒಟ್ಟು 51977 ಜನ ನೋಂದಾಯಿಸಿಕೊಂಡಿದ್ದು ಅದರಲ್ಲಿ ನಗರ ಪ್ರದೇಶದಿಂದ 5286 ಜನ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 46691 ಜನ ಯಜಮಾನಿರು ನೋಂದಾಯಿಸಿಕೊಂಡಿದ್ದಾರೆ ಇದರಲ್ಲಿ 8139 ಜನರ ಅರ್ಜಿ ಬಾಕಿ ಉಳಿದಿದ್ದು ಪ್ರತಿ ತಿಂಗಳು ಪಾವಗಡ ತಾಲೂಕಿನ ಗೃಹಲಕ್ಷ್ಮಿ ಪಲಾನುಭವಿಗಳಿಗೆ 103954000 ಅಷ್ಟು ಹಣ ಬರಲಿದೆ ಎಂದು ಇದೆ ವೇಳೆ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವರದರಾಜು,, ತಾಪಂ ಇಒ ಜಾನಕಿ ರಾಮ್, ಪುರಸಭೆ ಮುಖ್ಯ ಅಧಿಕಾರಿ ಶಂಸುದ್ದೀನ್, ಎಸಿಡಿಪಿಒ ರಖೀಬ್, ಪುರಸಭೆಯ ಮಾಜಿ ಅಧ್ಯಕ್ಷರು ಗಳಾದ ಗುರಪ್ಪ, ರಾಮಾಂಜಿನಪ್ಪ,ವೇಲುರಾಜು, ಧನಲಕ್ಷ್ಮಿ, ಗಂಗಮ್ಮ, ಸುಮ ಅನಿಲ್, ಮಾಜಿ ಉಪಾಧ್ಯಕ್ಷರಾದ ಸುಧಾ ಲಕ್ಷ್ಮಿ ಪ್ರಮೋದ್ ಕುಮಾರ್, ಪುರಸಭಾ ಸದಸ್ಯರಾದ ಸುದೇಶ್ ಬಾಬು, ಪಿ ಎಚ್ ರಾಜೇಶ್, ರವಿ, ಮಹಮದ್ ಇಮ್ರಾನ್, ರವಿ , ನಾಗಭೂಷಣ ರೆಡ್ಡಿ, ಇನ್ನು ಮುಂತಾದವರು ಹಾಜರಿದ್ದರು.