IMG 20231105 WA0011

Karnataka : “ದಿಮೈಂಡ್‌ಫುಲ್ಸ್ಟ್ರೈಡ್ಸ್ವಾಕಥಾನ್ 2023″…!

BUSINESS

ಹಿಮಾಲಯ ವೆಲ್ನೆಸ್ ಕಂಪನಿಯಿಂದ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲುದಿ ಮೈಂಡ್‌ಫುಲ್ ಸ್ಟ್ರೈಡ್ಸ್ ವಾಕಥಾನ್ 2023″

ಬೆಂಗಳೂರು, ಭಾನುವಾರ, ನವೆಂಬರ್ 5: ಭಾರತದ ಪ್ರಮುಖ ವೆಲ್‌ನೆಸ್ ಬ್ರಾಂಡ್‌ಗಳಲ್ಲಿ ಒಂದಾದ ಹಿಮಾಲಯ ವೆಲ್‌ನೆಸ್ ಕಂಪನಿಯು ನವೆಂಬರ್ 5 ರ ಭಾನುವಾರದಂದು ದಿ ಮೈಂಡ್‌ಫುಲ್ ಸ್ಟ್ರೈಡ್ಸ್ ವಾಕಥಾನ್ 2023 ಅನ್ನು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಆಯೋಜಿಸಿತ್ತು. ಚೈತನ್ಯದಾಯಕವಾದ 5K (ಐದು ಕಿಲೋಮೀಟರ್ ಗಳ) ವಾಕಥಾನ್ ಮಾನಸಿಕ ಸ್ವಾಸ್ಥ್ಯವನ್ನು ಉತ್ತೇಜಿಸಲು ಮತ್ತು ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮುಡಿಪಾಗಿಡಲಾದ ಒಂದು ಸಮುದಾಯ ಕಾರ್ಯಕ್ರಮವಾಗಿದೆ. ಮಕ್ಕಳಿಂದ ಹಿರಿಯರವರೆಗೆ, ದೈಹಿಕ ಸದೃಢತೆಯ ಬಗ್ಗೆ ಅತೀವ ಕಾಳಜಿ ಇರುವವರಿಂದ ಹಿಡಿದು ಸಾಮಾನ್ಯ ನಡಿಗೆಗಾರರವರೆಗೆ ಈ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಜನರು   ಮಾನಸಿಕ ಯೋಗಕ್ಷೇಮದ  ಅನ್ವೇಷಣೆಯಲ್ಲಿ ಭಾಗವಹಿಸಿ ಜೊತೆ ಸೇರಿದ್ದರು.

ಶ್ರೀ ಕೆ.ಜಿ.ಉಮೇಶ್-ನಿರ್ದೇಶಕರು, ಮಾನವ ಸಂಪನ್ಮೂಲ ವಿಭಾಗ,  ಹಿಮಾಲಯ ವೆಲ್‌ನೆಸ್ ಕಂಪನಿ ಇವರು ಕ್ರೀಡಾ ಉತ್ಸಾಹಿಗಳ ಕೇಂದ್ರಸ್ಥಾನವಾಗಿರುವ , ಶ್ರೀಮಂತ ಕ್ರೀಡಾ ಇತಿಹಾಸವನ್ನು ಹೊಂದಿರುವ  ಕಂಠೀರವ ಸ್ಟೇಡಿಯಂನಲ್ಲಿ ಬೆಳಿಗ್ಗೆ 7:30 ಕ್ಕೆ  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಕುರಿತು ಮಾತನಾಡಿದ ಶ್ರೀಮತೀ ಜಯಶ್ರೀ ಉಳ್ಳಾಲ್, “ಮೈಂಡ್‌ಫುಲ್ ಸ್ಟ್ರೈಡ್ಸ್ ವಾಕಥಾನ್ ಮಾನಸಿಕ ಆರೋಗ್ಯದ ಮಹತ್ವದ ಆಚರಣೆಯಾಗಿದೆ. ಹೆಚ್ಚುತ್ತಿರುವ ಒತ್ತಡಗಳು ಮತ್ತು ಆಧುನಿಕ ಜೀವನದ ವೇಗ ಸ್ವಭಾವದ ಕಾಲದಲ್ಲಿ ಮಾನಸಿಕ ಆರೋಗ್ಯದ ಕಾಪಾಡುವಿಕೆಯು ಅಗತ್ಯವಾದ  ಕಾಳಜಿಯ ವಿಷಯವಾಗಿದೆ. ವ್ಯಕ್ತಿಗತವಾಗಿ ಮತ್ತು ಸಮುದಾಯಗಳಲ್ಲಿರುವ ಮಾನಸಿಕ ಆರೋಗ್ಯದ ಬಗೆಗಿನ  ತಪ್ಪುಗ್ರಹಿಕೆಯನ್ನು  ತೊಡೆದುಹಾಕಿ ಧನಾತ್ಮಕವಾದ ಬದಲಾವಣೆಗಳನ್ನು  ತರಲು  ನಾವು ಮುಂದೆ ಬರಬೇಕು” ಎಂದು ಹೇಳಿದರು.

IMG 20231105 WA0010

ಆರೋಗ್ಯಕರ ಮನಸ್ಸು ದೊಡ್ಡ ಸಂಪತ್ತು. ಇಂದು ನೀವು ಇಡುವ ಸಕಾರಾತ್ಮಕ ಹೆಜ್ಜೆಯು,  ನಾಳೆಯನ್ನು ಉತ್ತಮವಾಗಿ ಮುನ್ನಡೆಸಲು ನಿಮಗೆ ಸಹಾಯ ಮಾಡುತ್ತದೆ. ವಾಕಥಾನ್‌ಗಳಂತಹ ಸಮುದಾಯಗಳ ಮುಂದಾಳ್ತನದ ವೇದಿಕೆಗಳ ಮೂಲಕ ತಮ್ಮನ್ನು ತಾವು ಹಾಗೂ ಇತರರನ್ನು ಜಾಗೃತಿಗೊಳಿಸುವುದು ಸಮಾಜದಲ್ಲಿ   ಮುಕ್ತ ಸಂವಾದವನ್ನು ಬೆಳೆಸಲು ಸಹಾಯ ಮಾಡುತ್ತದೆ.   ಸ್ವಾನುಭೂತಿ ಹಾಗೂ ಸಹಾನುಭೂತಿಯನ್ನು   ತೋರುವುದು  ಮತ್ತು ಸಹಾಯ-ಕೋರಿಕೆಯ ನಡವಳಿಕೆಗಳನ್ನು ಒಪ್ಪಿಕೊಳ್ಳುವುದು ಮೊದಲಾದುವುಗಳು, ಅಗತ್ಯತೆಯಿರುವವರಿಗೆ ಬೆಂಬಲ ನೀಡುವಲ್ಲಿ ಬಹಳ ಸಹಕಾರಿಯಾಗಬಲ್ಲವು. ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಹಿಮಾಲಯ ವೆಲ್ ನೆಸ್ ಕಂಪನಿ ಸದಾ ಬದ್ಧವಾಗಿದೆ” ಎಂದು ಎಂದು ಶ್ರೀ ಕೆ.ಜಿ.ಉಮೇಶ್ ಹೇಳಿದರು.

ದಿ ಮೈಂಡ್‌ಫುಲ್ ಸ್ಟ್ರೈಡ್ಸ್ ವಾಕಥಾನ್‌ನಲ್ಲಿ ಭಾಗವಹಿಸಿದವರು ನಗರದ ಅತ್ಯಂತ ಸುಂದರವಾದ ಸ್ಥಳಗಳಾದ ಶೇಷಾದ್ರಿ ಅಯ್ಯರ್ ಮೆಮೋರಿಯಲ್ ಹಾಲ್ (ಸೆಂಟ್ರಲ್ ಸ್ಟೇಟ್ ಲೈಬ್ರರಿ), ಕಬ್ಬನ್ ಪಾರ್ಕ್‌ನಲ್ಲಿರುವ ಬ್ಯಾಂಡ್ ಸ್ಟ್ಯಾಂಡ್ ಮತ್ತು ಜವಾಹರ್ ಬಾಲಭವನ ಆಡಿಟೋರಿಯಂ ಮೂಲಕ ಹಾದು ಹೋಗುವ ರಮಣೀಯವಾದ ಮಾರ್ಗವನ್ನು ಆನಂದಿಸಿದರು. ಈ ಕಾರ್ಯಕ್ರಮವು ಕೇವಲ 5 ಸಾವಿರ ಮೀಟರ್ ಗಳ ನಡಿಗೆಯನ್ನು ಪೂರ್ಣಗೊಳಿಸುವುದು ಮಾತ್ರವಲ್ಲದೆ, ಇದು ಭಾಗವಹಿಸಿದವರ ದೇಹ ಮತ್ತು ಮನಸ್ಸನ್ನು ಪೋಷಿಸುವ ಸಮಗ್ರ ಅನುಭವವಾಗಿತ್ತು ಹಾಗೂ  ಇದು ದೈಹಿಕ ಚಟುವಟಿಕೆ ಮತ್ತು ಮಾನಸಿಕ ನೆಮ್ಮದಿಯ ನಡುವಿನ ಸಂಬಂಧವನ್ನು ಸಾರಿತು.

ಮಾನಸಿಕ ಆರೋಗ್ಯದ ಬಗೆಗಿನ ತಪ್ಪು ಕಲ್ಪನೆಯನ್ನು ತೊಡೆದುಹಾಕುವ ಉಪಕ್ರಮಗಳಲ್ಲಿ ಹಿಮಾಲಯನ್ ವೆಲ್ನೆಸ್ಸ್ ಸಂಸ್ಥೆಯು ಮುಂಚೂಣಿಯಲ್ಲಿದೆ. ‘ಕೇರ್ ಫಾರ್ ಕಮ್ಯುನಿಟಿ- ಸಮುದಾಯದ ಬಗ್ಗೆ ಕಾಳಜಿ’ ಎಂಬ ವ್ಯಾವಹಾರಿಕ ತತ್ವದ ಮಾರ್ಗದರ್ಶನದಡಿಯಲ್ಲಿ  ಪ್ರೇರಿತಗೊಂಡು    ’ಹಿಮಾಲಯ  ಸುರಕ್ಷಾ’ ಎಂಬ ಆತ್ಮಹತ್ಯಾ ತಡೆಗಟ್ಟುವ ಸಂಶೋಧನೆ ಮತ್ತು ಕಣ್ಗಾವಲು ಚೌಕಟ್ಟನ್ನು ಅಭಿವೃದ್ಧಿಪಡಿಸಲು 2022 ರಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋಸೈನ್ಸ್ (ನಿಮ್ಹಾನ್ಸ್) ನೊಂದಿಗೆ ಪಾಲುದಾರಿಕೆಯನ್ನು  ಹೊಂದಿತು. ಈ ಉಪಕ್ರಮವು ಕರ್ನಾಟಕದ ರಾಮನಗರ ಜಿಲ್ಲೆಯ ಜನರಿಗೆ  ಮಾನಸಿಕ ಆರೋಗ್ಯವನ್ನು ದೊರಕಿಸುವಂತೆ ಮಾಡುವ ಉದ್ದೇಶವನ್ನು ಹಾಗೂ ದೇಶೀಯವಾಗಿ  ಪ್ರಾಯೋಗಿಕ ಸಂಶೋಧನಾ ಮಾದರಿಯ ಕಾರ್ಯಸಾಧ್ಯತೆಯನ್ನು ಪರೀಕ್ಷಿಸುವ ಗುರಿಯನ್ನು ಹೊಂದಿದೆ. ಆತ್ಮಹತ್ಯೆಗಳ  ತಡೆಗಟ್ಟುವಿಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ಯ  ‘ಲೈವ್ ಲೈಫ್’ ಚೌಕಟ್ಟಿನೊಂದಿಗೆ ಈ ಯೋಜನೆಯು ಬೆಸೆಯಲ್ಪಟ್ಟಿದೆ.