ಭ್ರಷ್ಟ ಮುಕ್ತ ಆಡಳಿತ ನಮ್ಮ ಗುರಿ : ಲೋಕಾಯುಕ್ತ ಡಿವೈಸ್ಪಿ ಹರೀಶ್
ಪಾವಗಡ: ಸಮಸ್ಯೆಯನ್ನು ಪರಿಹರಿಸುವ ಜ್ಞಾನ ಹೊಂದಿರುವವರು ಮಾತ್ರ ದಕ್ಷ, ಭ್ರಷ್ಟ ಮುಕ್ತ ಆಡಳಿತ ನೀಡಲು ಸಾಧ್ಯ ಎಂದು ಲೋಕಾಯುಕ್ತ ಡಿವೈಎಸ್ಪಿ ಹರೀಶ್ ರವರುಹೇಳಿದರು.
ಕರ್ನಾಟಕ ಲೋಕಾಯುಕ್ತ ತುಮಕೂರು ಮತ್ತು ತಾಲ್ಲೂಕು ಆಡಳಿತ ವತಿಯಿಂದ ಪಾವಗಡ ತಾಲ್ಲೂಕಿನ ಅಂಬೇಡ್ಕರ್ ಭವನದಲ್ಲಿ ಇಂದು “ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ 2023” ಕಾರ್ಯಕ್ರಮವು ಆಯೋಜಿಸಿದ್ದ ಕಾರ್ಯಕ್ರಮವನ್ನು.
ರವರು ಉದ್ಘಾಟಿಸಿ ಮಾತನಾಡಿದ ಅವರು,
ಸಾರ್ವಜನಿಕರು ನಿಮ್ಮ ಕಚೇರಿಗೆ ಬಂದರೆ ಮೊದಲು ಅವರಿಗೆ ಗೌರವ ನೀಡಿ ಅವರ ಸಮಸ್ಯೆಯನ್ನು ವಿಚಾರಣೆ ಮಾಡಿ ಅವರ ಕೆಲಸವನ್ನು ನಿಗಧಿತ ಸಮಯದಲ್ಲಿ ಪೂರ್ಣಗೊಳಿಸಿದರೆ ಅಧಿಕಾರಿ ಸಾರತವಜನಿಕರ ಪಾಲಿನ ದಕ್ಷ ಅಧಿಕಾರಿಯಾಗಲು ಸಾಧ್ಯವಾಗಲಿದೆ. ಸರ್ಕಾರಿ ನೌಕರರು ಜೀವನ ಹಾಗೂ ವೃತ್ತಿಯಲ್ಲಿ ಶಿಸ್ತನ್ನು ಅಳವಡಿಸಿಕೊಂಡಲ್ಲಿ ಮಾತ್ರ ನಾವು ಭ್ರಷ್ಟಮುಕ್ತ ಆಡಳಿತ ನಿರ್ವಹಿಸ ಬೇಕು ಎಂದರು.
ಸರ್ಕಾರವು ಜನರಿಂದ ಸಂಗ್ರಹಸಿದ ತೆರಿಗೆ ಹಣದಿಂದ ಸರ್ಕಾರಿ ಅಧಿಕಾರಿಗಳಿಗೆ ವೇತನ ನೀಡುತ್ತಾರೆ.
ಸಾರ್ವಜನಿಕರಲ್ಲಿ ಸರ್ಕಾರಿ ನೌಕರರಿಗೆ ಗೌರವ ಸಿಗ ಬೇಕು ಎಂದರೆ ಅದು ಶಿಸ್ತು ಮತ್ತು ದಕ್ಷ ಆಡಳಿತ ನಿರ್ವಹಣೆಯಿಂದಾಗಿ ನಿಮಗೆ ಗೌರವ ಸಿಗುತ್ತದೆ
ಲೋಕಾಯುಕ್ತ ಇನಸ್ಪೆಕ್ಟರ್ ರಾಮ ರೆಡ್ಡಿ ರವರು ಮಾತನಾಡಿ ಗ್ರಾಮೀಣಾ ಭಾಗದ ಬಡ ಕೂಲಿಕಾರ್ಮಿಕರ ಕೆಲಸ ಕಾರ್ಯಗಳನ್ನು ಯಾವುದೇ ಆಸೆ ಅಮೀಷಗಳಿಗೆ ಒಳಪಡದೇ ಸಕಾಲದಲ್ಲಿ ಮಾಡಿಕೊಡುವುದರಿಂದ ನಾವು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬಹುದು ಎಂದು ಹೇಳಿದರು.
ಕಾನೂನು ಉಪನ್ಯಾಸಕಿ ಶೋಭಾ ರವರು ಮಾತನಾಡಿ ಎಲ್ಲ ಹುಟ್ಟಿನಿಂದ ಸಾವಿನವರೆಗೂ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಲು ಒಂದಲ್ಲೊಂದು ಸಮಯದಲ್ಲಿ ಲಂಚ ಸುಳಿಗೆ ಸಿಕ್ಕಿಕೊಳ್ಳುವುದು ಸಹಜವಾಗಿದ್ದು ಇದನ್ನು ನಾವು ನಿರ್ಮೂಲನೆ ಮಾಡಲು ಪ್ರಭುದ್ಧವಾಗಿ ಕಾರ್ಯನಿರ್ವಹಿಸ ಜವಾಬ್ದಾರಿ ಸರ್ಕಾರಿ ನೌಕರರ ಮೇಲೆ ಇದೆ.
ಸರ್ಕಾರಿ ನೌಕರರಿಗೆ ಸರ್ಕಾರ ಸೂಕ್ತ ವೇತನ ನೀಡಿದರು ತಮ್ಮ ಅತೀ ಆಸೆಗಳಿಗೆ ಒಳಪಟ್ಟವರು ಭ್ರಷ್ಟಚಾರ ಮಾಡಲು ಮುಂದಾಗುತ್ತಾರೆ ಎಂದರು.
ನಂತರ ಪ್ರತಿಜ್ಞಾವಿಧಿಯನ್ನು ಸರ್ಕಾರಿ ಅಧಿಕಾರಿಗಳಿಗೆ ಬೋಧಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿಗಳಾಗಿರುವ ವರದರಾಜು ರವರು ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಾನಕೀರಾಮ್ ರವರು, ಪಾವಗಡ ತಾಲ್ಲೂಕು ಅರಕ್ಷಕ ವೃತ್ತನೀರೀಕ್ಷಕರಾದ ಸುರೇಶ್ ರವರು , ಗಿರೀಶ್ ರವರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು , ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಸಿದ್ದರು.
ವರದಿ :- ನಂದೀಶ್ ನಾಯ್ಕ
ಪಾವಗಡ