ಡಿಸೆಂಬರ್ 30 2026ರ ಒಳಗೆ ರಾಯದುರ್ಗ ತುಮಕೂರು ಮಾರ್ಗದಲ್ಲಿ ರೈಲು ಸಂಚರಿಸುವುದು ಖಚಿತ. ಕೇಂದ್ರ ಸಚಿವ ಸೋಮಣ್ಣ.
ಪಾವಗಡ : ಕರ್ನಾಟಕ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿದ್ದ ಯೋಜನೆಗಳನ್ನು ತಕ್ಷಣವೇ ಕೈಗೆತ್ತುಕೊಳ್ಳುವಂತೆ ಪ್ರಧಾನಿ ಮೋದಿ ತಿಳಿಸಿದ್ದಾರೆ ಎಂದು ಕೇಂದ್ರ ಸಚಿವ ಸೋಮಣ್ಣ ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿ ನಡೆಯುತ್ತಿದ್ದ ರೈಲ್ವೆ ಕಾಮಗಾರಿಯನ್ನು ಪರಿಶೀಲಿಸಿ ಅವರು ಮಾತನಾಡಿದರು.
ಈಗಾಗಲೇ ರಾಯದುರ್ಗ ತುಮಕೂರು, ಮತ್ತು ತುಮಕೂರು,ಚಿತ್ರದುರ್ಗ,ದಾವಣಗೆರೆ ರೈಲ್ವೆ ಕಾಮಗಾರಿಗಳಿಗಾಗಿ 700 ಕೋಟಿಗಳನ್ನು ನೀಡಲಾಗಿದೆ ಎಂದು 300 ಕೋಟಿಗೂ ಹೆಚ್ಚು ಹಣವನ್ನು ವಿದ್ಯುದ್ಧೀಕರಣ ಗಾಗಿ ನೀಡಲಾಗಿದೆ ಎಂದರು
.
ಅಧಿಕಾರಿಗಳು ಮತ್ತು ಕಾಂಟ್ರಾಕ್ಟರ್ ಗಳ ವಿಳಂಬ ನೀತಿಯಿಂದ ಯೋಜನೆ ನಿಧಾನಗೊಂಡಿದೆ ಎಂದು
ಯೋಜನೆ ಪೂರ್ಣಗೊಳಿಸಲು ಹಣಕ್ಕೆ ಸಮಸ್ಯೆ ಯಾವುದೇ ತೊಂದರೆ ಇಲ್ಲ. ತಾನು ಸಚಿವನಾದ ಮೇಲೆ ಈಗಾಗಲೇ 23 ಸಭೆಗಳನ್ನು ಕರೆದಿದ್ದು, ಎಲ್ಲ ರಾಜ್ಯಗಳು ತಮ್ಮ ರಾಜ್ಯಗಳಿಗೆ ನೀಡಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಹಾ ತೊರೆಯುತ್ತಿದ್ದರೆ ಕರ್ನಾಟಕದಲ್ಲಿ ಮಾತ್ರ ಬೆಳಿಗ್ಗೆ ಎದ್ದರೆ ಮೂಡ, ವಾಲ್ಮೀಕಿ ಎಂದು ಕಾಲ ಕಳೆಯುತ್ತಿದ್ದಾರೆ ಎಂದರು.
ರೈಲ್ವೆ ಯೋಜನೆಗಾಗಿ 300 ಕಿಲೋಮೀಟರು ಎಕರೆ ಜಮೀನು ಸಮಸ್ಯೆಯಲ್ಲಿದ್ದು ಈಗ ಅದು 130 ಎಕರೆಗೆ ಬಂದಿದೆ ಭೂ ವಿವಾದವನ್ನು ಶೀಘ್ರವಾಗಿ ಬಗೆಹರಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗುವುದೆಂದರು.
ಇನ್ನು ಮೂರು ವರ್ಷದಲ್ಲಿ ಕರ್ನಾಟಕದಲ್ಲಿ ನೆನೆಗುದಿಗೆ ಬಿದ್ದಿರುವ 12 ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಹೆಚ್ ವಿ ವೆಂಕಟೇಶ್, ಮಾಜಿ ಸಚಿವ ವೆಂಕಟರಮಣಪ್ಪ, ಮಾಜಿ ಶಾಸಕ ತಿಮ್ಮರಾಯಪ್ಪ, ಆರ್ ಸಿ ಅಂಜಿನಪ್ಪ ಇತರರು ಹಾಜರಿದ್ದರು.
ವರದಿ. ಶ್ರೀನಿವಾಸಲು. A