ವಿಷ ಸೇವಿಸಿ ದಂಪತಿ ಆತ್ಮಹತ್ಯೆ.
ಪಾವಗಡ : ಪಟ್ಟಣದ ಚಳ್ಳಕೆರೆ ರಸ್ತೆ ಯ ಸಮೀಪದ ಜಮೀನಿನಲ್ಲಿ ಶುಕ್ರವಾರ ದಂಪತಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಆಂಧ್ರಪ್ರದೇಶದ ಕುಂದುರ್ಪಿಮಂಡಲಂನ ವೆಂಕಟಮ್ಮಪಲ್ಲಿ ಗ್ರಾಮದ ಗೋವಿಂದರೆಡ್ಡಿ(48) ಮತ್ತು ಬೆಂಗಳೂರು ಮೂಲದ ಜ್ಯೋತಿ(38) ಮೃತರು.
ಗೋವಿಂದ ರೆಡ್ಡಿ ಜ್ಯೋತಿ ಮತ್ತು ಲಕ್ಷ್ಮಿ ದೇವಿ ಎಂಬುವರನ್ನು ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ.
ಪಾವಗಡ ಪಟ್ಟಣದ ಲಾಡ್ಜ್ ಒಂದರಲ್ಲಿ ರಾತ್ರಿ ಜ್ಯೋತಿ ಮತ್ತು ಗೋವಿಂದ ರೆಡ್ಡಿ ತಂಗಿದ್ದು ಬೆಳಗ್ಗೆ ಒಂಬತ್ತು ಗಂಟೆಯ ಸಂದರ್ಭದಲ್ಲಿ ಪಟ್ಟಣದ ಹೊರವಲಯದ ಜಮೀನಿನ ಬಂಡೆಯ ಮೇಲೆ ಮದ್ಯಕ್ಕೆ ವಿಷವನ್ನು ಬೆರೆಸಿ ಕುಡಿದಿದ್ದು ಜ್ಯೋತಿ ಸ್ಥಳದಲ್ಲಿಯೇ ಸಾವನಪ್ಪಿದ್ದರೆ. ಗೋವಿಂದರೆಡ್ಡಿ ಆಸ್ಪತ್ರೆಗೆ ದಾಖಲಾದ ನಂತರ ಸಾವನ್ನಪ್ಪಿದ್ದಾರೆ.
ಕೊನೆ ಉಸಿರಿನಲ್ಲಿದ್ದ ಗೋವಿಂದ ರೆಡ್ಡಿಯನ್ನು ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ ಸುಮಾರು 11 ಗಂಟೆಯ ಸಮಯದಲ್ಲಿ ಸಂದರ್ಭದಲ್ಲಿ ಈತನು ಸಹ ಮೃತಪಟ್ಟಿದ್ದಾನೆ
ಘಟನಾ ಸ್ಥಳಕ್ಕೆ ತುಮಕೂರು ಎ ಎಸ್ ಪಿ ಮರಿಯಪ್ಪ, ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ, ಪಾವಗಡ ಸಿಪಿಐ ಸುರೇಶ್, ಪಿಎಸ್ಐ ಗುರುನಾಥ, ಹೆಡ್ ಕಾನ್ಸ್ಟೇಬಲ್ ರಾಮಕೃಷ್ಣ ಭೇಟಿ ನೀಡಿ ಪರಿಶೀಲಿಸಿ. ಪಟ್ಟಣ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ.
ವರದಿ : ಶ್ರೀನಿವಾಸಲು.ಎ