IMG 20250212 WA0019

ಪಾವಗಡ : ಅದ್ದೂರಿ ಯಾಗಿ ನಡೆದ ಶ್ರೀ ಶನೇಶ್ವರ ಸ್ವಾಮಿ ಬ್ರಹ್ಮರಥೋತ್ಸವ……!

DISTRICT NEWS ತುಮಕೂರು

ಅದ್ದೂರಿ ಯಾಗಿ ನಡೆದ ಶ್ರೀ ಶನೇಶ್ವರ ಸ್ವಾಮಿ ಬ್ರಹ್ಮರಥೋತ್ಸವ…….

ಪಾವಗಡ: ಪಟ್ಟಣ ಸುಪ್ರಸಿದ್ಧ ಶ್ರೀ ಕ್ಷೇತ್ರ ಶನಿಮಹಾತ್ಮ ದೇಗುಲದಲ್ಲಿ ಜೇಷ್ಠಾದೇವಿ ಸಹಿತ ಶೈನೈಶ್ಚರ ಸ್ವಾಮಿ ಬ್ರಹ್ಮ ರಥೋತ್ಸವ ಬುಧವಾರ ಬಹಳ ವಿಜೃಂಭಣೆಯಿಂದ ನಡೆಯಿತು.

ಬ್ರಹ್ಮ ರಥೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಬೆಳಿಗ್ಗೆ 5-00 ಗಂಟೆಯಿಂದ ಶ್ರೀಸತ್ಯನಾರಾಯಣಸ್ವಾಮಿ ವ್ರತ, ರಥೋತ್ಸವಾಗಮನ, ಆವಾಹಿತ ದೇವತಾರಾಧನೆ, ಸೂರ್ಯಾರಾಧನೆ, ಅಲಂಕಾರ, ಎಲೆಪೂಜೆ ಇತ್ಯಾದಿ ಕೈಂಕರ್ಯಗಳು ಪೂರ್ಣಾಹುತಿ ನಡೆಯಿತು.

ಶೀತಲಾಂಭ ದೇವಿಗೆ ರಥೋತ್ಸವದ ಅಂಗವಾಗಿ ಅಭಿಷೇಕ, ಕುಂಕುಮಾರ್ಚನೆ ಏರ್ಪಡಿಸಲಾಗಿತ್ತು. ಶೀತಲಾಂಭ ದೇವಿ ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಬುಧವಾರ 11.50 ಕ್ಕೆ ಸರಿಯಾಗಿ ಶುಭ ಮೇಷ ಲಗ್ನದಲ್ಲಿ ಮಂಗಳ ವಾಧ್ಯಗೊಂದಿಗೆ ಜ್ಯೇಷ್ಠದೇವಿ ಹಾಗೂ ಶನೈಶ್ಚರ ಸ್ವಾಮಿ ಉತ್ಸವ ಮೂರ್ತಿಗಳನ್ನು ಕರೆ ತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಕೂಡಲೆ ನೆರೆದಿದ್ದ ಭಕ್ತಾದಿಗಳ ಧವನ ಸಿಕ್ಕಿಸಿದ್ದ ಬಾಳೆಹಣ್ಣನ್ನು ರಥದತ್ತ ಎಸೆದು ಶನೈಶ್ಚರ ಸ್ವಾಮಿಯ ಘೋಷಣೆಗಳನ್ನು ಕೂಗಿದರು.ರಥವನ್ನು ವಿವಿಧ ಬಣ್ಣದ ಹೂಗಳಿಂದ ಅಲಂಕರಿಸಲಾಗಿತ್ತು.

ಶನೇಶ್ವರ ದೇವಾಲಯವನ್ನು ವಿವಿಧ ಹೂಗಳಿಂದ ಹಾಗೂ ಹಲವಾರು ಕಲಾಕೃತಿಗಳಿಂದ ಸಿಂಗರಿಸಲಾಯಿತು.
ಬ್ರಹ್ಮೋತ್ಸವದ ಅಂಗವಾಗಿ ಅಪಾರ ಭಕ್ತಾದಿಗಳು ದೇವಾಲಯಕ್ಕೆ ಬಂದು ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು.

ವರದಿ : ಶ್ರೀನಿವಾಸಲು ಎ

Leave a Reply

Your email address will not be published. Required fields are marked *