ವೈ.ಎನ್.ಹೊಸಕೋಟೆ: ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ ಗ್ರಾಮದ ಬಸ್ ನಿಲ್ದಾಣದಲ್ಲಿರುವ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಪಿ.ಸಿ. ನಾಗರಾಜ್ ಭಾನುವಾರ ಚಾಲನೆ ನೀಡಿದರು.
ಮಾತನಾಡಿ ಮಕ್ಕಳನ್ನು ವಿಕಲಚೇತನವಾಗದಂತೆ ತಡೆಯಲು 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲಿಯೋ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಗೌರಮ್ಮ ತಿಮ್ಮಪ್ಪ,ಆರೋಗ್ಯ ಇಲಾಖೆ ಸಿಬ್ಬಂದಿ ಯಾನ ಕೇಶವ್, ನಿರಂಜನ್, ಶ್ರೀಹರಿ, ವೆಂಕಟೇಶ್, ಹಾಜರಿದ್ದರು.