1670379321206 IMG 20221206 WA0062

ಪಾವಗಡ:ಕನ್ನಡ ರಾಜ್ಯೋತ್ಸವದ ಆಚರಣೆ…!

DISTRICT NEWS ತುಮಕೂರು

ರಾಮಯ್ಯನಪಾಳ್ಯದಲ್ಲಿ ವಿಜೃಂಭಣೆಯಿಂದ ನಡೆದ ಕನ್ನಡ ರಾಜ್ಯೋತ್ಸವದ ಆಚರಣೆ...

ಪಾವಗಡ: ಕನ್ನಡ ನಾಡು ನುಡಿ, ಸಂಸ್ಕೃತಿಗೆ ನಿಜವಾದ ಅರ್ಥವನ್ನು ಕೊಡುವ ರೀತಿಯಲ್ಲಿ ತಾಲ್ಲೂಕಿನ ರಾಮಯ್ಯನಪಾಳ್ಯದಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು….. 

  ರಾಮಯ್ಯನಪಾಳ್ಯದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.                                        ಕೆ.ಟಿ.ಹಳ್ಳಿ, ದೇವಲಕೆರೆ, ಗುಜ್ಜನಡು, ಚಿನ್ನಮ್ಮನಹಳ್ಳಿ ಗ್ರಾಮಗಳಲ್ಲಿ ಭುವನೇಶ್ವರಿ ತಾಯಿಯ  ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.            ಮೆರವಣಿಗೆಯಲ್ಲಿ ನಾಸಿಕ್ ಡೋಲು, ಚಿಲಿ ಪಿಲಿ ಗೊಂಬೆ, ವಾದ್ಯ ವೃಂದಗಳು ಭಾಗವಹಿಸಿದ್ದವು.

ಇಡೀ ಗ್ರಾಮ ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದು, ವಿವಿಧ ಬಣ್ಣಗಳ ವಿದ್ಯುತ್ ದೀಪಗಳಿಂದ ಊರೆಲ್ಲಾ ಸಿಂಗಾರ ಗೊಂಡಿತ್ತು. . ರಾಜ್ಯೋತ್ಸವವನ್ನು ಊರ ಹಬ್ಬದಂತೆ ಆಚರಿಸಿ, ಮನೆಗಳಲ್ಲಿ ವಿವಿಧ ಬಗೆಯ ಸಿಹಿ ಖಾದ್ಯಗಳನ್ನು ತಯಾರಿಸಿ,  ಸಂಬಂಧಿಕರನ್ನು  ರಾಜ್ಯೋತ್ಸವಕ್ಕೆ ಆಹ್ವಾನಿಸಲಾಗಿತ್ತು. 

 ಸರ್ಕಾರಿ ಶಾಲಾ ಮಕ್ಕಳು ರಾತ್ರಿಯಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. 

ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವ ಉದ್ದೇಶದಿಂದಾಗಿ ಕೆ.ಟಿ.ಹಳ್ಳಿಯಲ್ಲಿ ಪಿ.ಯು ಕಾಲೇಜು ಆರಂಭಿಸಿ,  ವಸತಿ ನಿಲಯದ ವ್ಯವಸ್ಥೆಯನ್ನೂ ಮಾಡಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.                            ಕನ್ನಡ ನುಡಿ ನಡೆಯ ಬಗ್ಗೆ ಜನರೆಲ್ಲಾ ಒಂದಾಗಿ ಕನ್ನಡ ರಾಜ್ಯೋತ್ಸವವನ್ನು ಊರ ಹಬ್ಬವನ್ನಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಆಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ವಿ.ವೆಂಕಟೇಶ್ ಮಾತನಾಡಿ,  ಗಡಿನಾಡ ಪ್ರದೇಶವಾದ ಪಾವಗಡದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯವೈಕರಿ ಶ್ಲಾಘನೀಯ ಎಂದರು.          ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಹಳ್ಳಿಗಳಿಗೆ ಗ್ರಾಮಾಂತರ ಸಾರಿಗೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು. 

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಟಕ್ಷ ಕಟ್ಟಾ ನರಸಿಂಹಮೂರ್ತಿ, ನಾಡಹಬ್ಬವನ್ನು ಗ್ರಾಮದ ಹಬ್ಬವನ್ನಾಗಿ ಆಚರಿಸುವ, ಹೆಣ್ಣುಮಕ್ಕಳನ್ನು ಕರೆಸಿ, ಹರಿಶಿಣ, ಕುಂಕುಮ ಕೊಟ್ಟು, ನೂತನ ವಸ್ತ್ರಗಳನ್ನು ಧರಿಸಿ ರಾಜ್ಯೋತ್ಸವ ಆಚರಿಸುವ ರಾಜ್ಯದ ಏಕೈಕ ಗ್ರಾಮ ರಾಮಯ್ಯನಪಾಳ್ಯ. ಇಂತಹ ಗ್ರಾಮಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕೆಲಸವಾಗಬೇಕು. ನಿಜವಾಗಿ ಕನ್ನಡ ಕಟ್ಟುವ ಕೆಲಸ ಇಂತಹ ಗ್ರಾಮಗಳಲ್ಲಿ ನಡೆಯುತ್ತಿದೆ ಎಂದರು.

ಸಾಹಿತಿ ಸಣ್ಣನಾಗಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕಕ್ಷ ಐ.ಎ. ನಾರಾಯಣಪ್ಪ, ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಖಜಾಂಚಿ ಕೆ.ಎಂ.ಪ್ರಭಾಕರ್, ಪಿಡಿಒ ಮಂಜುನಾಥ್, ಶಿಕ್ಷಕ ಅ.ಮು.ತಿಪ್ಪೇಸ್ವಾಮಿ, ನರಸಿಂಹಮೂರ್ತಿ, ಮುಖ್ಯ ಶಿಕ್ಷಕ ಸಿದ್ದೇಶ್ವರಪ್ಪ, ನಾಗರಾಜು ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಘಕ್ಷೆ ಆದಿಲಕ್ಷ್ಮಮ್ಮ, ಉಪಾಧ್ಯಕ್ಷ ಚಂದ್ರಶೇಖರ್, ಸದಸ್ಯ ಆರ್.ಎಂ.ಚಿಕ್ಕೇಗೌಡ, ಮಂಜುನಾಥ್, ಇತಿಹಾಸ ಲೇಖಕ ಹೊ.ಮಾ.ನಾಗರಾಜು, ಶಾಲಾ ಅಭಿವೃಧ್ಧಿ ಸಮಿತಿ ಅಧ್ಯಕ್ಷ ನಾಗೇಂದ್ರಪ್ಪ, ಉಪಾಧ್ಯಕ್ಷೆ ಭಾಗ್ಯಮ್ಮ ಶಿವಣ್ಣ, ಟಿ.ಎಂ.ರಂಗಧಾಮಯ್ಯ, ರಾಮಚಂದ್ರಪ್ಪ, ಗೊಂಚಿಕಾರ್ ಹನುಮಂತರಾಯಪ್ಪ, ಎರಗುಂಟಪ್ಪ, ತಿಪ್ಪೇಲಿಂಗಪ್ಪ, ಆರ್.ಜೆ.ಮಂಜುನಾಥ್, ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ನರಸೀ ಪಟೇಲ್, ಮಲ್ಲಪ್ಪ, ನಾಗಪ್ಪ, ಗ್ರಾಮಸ್ಥರು ಉಪಸ್ಥಿತರಿದ್ದರು.