ಕನ್ನಡದ ಅಸ್ತಿತ್ವಕ್ಕಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿರುವುದು ವಿಪರ್ಯಾಸ ಎಂದು ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆಏನ್ ರಾಜಣ್ಣ . ….
ತಾಲೂಕಿನ ಕಸಬಾ ಹೋಬಳಿ ಬಸವನಹಳ್ಳಿ ಗ್ರಾಮದಲ್ಲಿ ಕನ್ನಡ ಜಾಗೃತಿ ವೇದಿಕೆ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಬೆಂಗಳೂರಿನಲ್ಲಿ ಕನ್ನಡಿಗರು 32% ಇರುವುದು ನೋಡಿದರೆ ಬೆಂಗಳೂರಿನಲ್ಲಿ ಕನ್ನಡಿಗರು ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ ಎಂಬ ಭಾವನೆ ಮೂಡುತಿದೆ ಕನ್ನಡಕ್ಕೆ ಮಾತೃಭಾಷೆ ಸ್ಥಾನಮಾನ ನೀಡಬೇಕು. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದರು ಅವರು ಮಧುಗಿರಿ ಕ್ಷೇತ್ರದ ಜನತೆ ನನ್ನ ಹಿಂದಿನ ಐದು ವರ್ಷದ ಆಡಳಿತದ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳು ಒಂದು ಸರ್ಕಾರಿ ಅಧಿಕಾರಿಗಳು ಯಾವ ರೀತಿ ಸ್ಪಂದಿಸುತ್ತಿದ್ದರು ಈಗಿನ ಆಡಳಿತ ವ್ಯವಸ್ಥೆ ಬಗ್ಗೆ ಆತ್ಮ ವಿಮರ್ಶ ಮಾಡಿಕೊಳ್ಳಬೇಕು. ನನ್ನ ಅವಧಿಯಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 16,000 ಮನೆಗಳನ್ನು ನಿರ್ಮಿಸಿ ಗುಡಿಸಲು ರಹಿತ ಕ್ಷೇತ್ರ ಮಾಡಿದ್ದೆ ಆದರೆ ಕಳೆದ ನಾಲಕ್ಕು ವರ್ಷಗಳಲ್ಲಿ ಒಂದು ಮನೆನಿರ್ಮಿಸಲು ಸಾಧ್ಯವಾಗಿಲ್ಲ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಿದರೆ ಸಚಿವನಾಗುತ್ತೇನೆ ಸಚಿವನಾಗಿ ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡುವುದು ಎತ್ತಿನಹೊಳೆ ಯೋಜನೆಯಲ್ಲಿ ತಾಲೂಕಿನ ಎಲ್ಲಾ ಕೆರೆಗಳಿಗನೀರು ಹರಿಸುವುದು. ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಕೆ ರಾಯದುರ್ಗ ರೈಲ್ವೆ ಯೋಜನೆಗೆ ಚಾಲನೆ ನೀಡಲಾಗುವುದು. ನಾನು ಯಾರನ್ನು ಟೀಕಿಸುವುದಿಲ್ಲ ನನ್ನ ಅವಧಿ ಯಲ್ಲಿಅಭಿವೃದ್ಧಿ ಕಾರ್ಯಗಳು ಮುಂದೆ ಮಾಡಬೇಕಾದ ಅಭಿವೃದ್ಧಿಕಾರ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದರು.
ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ ದೇವ ಮಾತನಾಡಿ 2023ರ ಚುನಾವಣೆಯಲ್ಲಿ ಕೆ ಎನ್ ರಾಜಣ್ಣ ರವರನ್ನು ಆಯ್ಕೆ ಮಾಡಿ ಮಧುಗಿರಿಯ ಅಭಿವೃದ್ಧಿಯಾಗಲುಕಾರಣ ಭೂತರಾಗಬೇಕು 2018ರ ಚುನಾವಣೆಯಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದರು ಸೋಲಿಸಿರುವುದು ಯಾವ ಕಾರಣಕ್ಕೆ ಎಂದುಇಂದು ಕೂಡತಿಳಿಯುತ್ತಿಲ್ಲ.
ಕನ್ನಡ ಜಾಗೃತಿ ವೇದಿಕೆ ಯಾವುದೇ ಪಕ್ಷದ ಮುಖವಾಡ ಅಲ್ಲ ಉತ್ತಮ ಕೆಲಸ ಮಾಡುವವರನ್ನು ಬೆಂಬಲಿಸುತ್ತದೆ. ಅಸ್ತಿತ್ವಕ್ಕಾಗಿ ಹೋರಾಟ ಮಾಡಲು ಪ್ರತಿಯೊಬ್ಬರು ಸಂಗೊಳ್ಳಿ ರಾಯಣ್ಣರಾಗಬೇಕು ಕನ್ನಡ 2500 ವರ್ಷಗಳ ಇತಿಹಾಸ ಹೊಂದಿರುವ ಭಾಷೆಯಾಗಿದೆ 6,000 ಭಾಷೆಗಳಲ್ಲಿ ಕನ್ನಡ ಭಾಷೆ 28ನೇ ಸ್ಥಾನ ಪಡೆದಿದೆ ಕನ್ನಡ ಭಾಷೆ ಜೀವಂತವಾಗಿರುವುದು ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರಎಂದರು.
ಸಮಾರಂಭದಲ್ಲಿ ಕನ್ನಡ ಜಾಗೃತಿ ವೇದಿಕೆ ಉಪಾಧ್ಯಕ್ಷ ಮಂಜೇಗೌಡ ಕೇಬಲ್ ಕೃಷ್ಣ ತಾಲೂಕು ಅಧ್ಯಕ್ಷ ರಾಘವೇಂದ್ರ ಪುರಸಭಾ ಮಾಜಿ ಅಧ್ಯಕ್ಷ ಎನ್ ಗಂಗಣ್ಣ ಪುರಸಭಾ ಸದಸ್ಯರುಗಳಾದ.ಲಾಲಪೇಟೆ ಮಂಜುನಾಥ್. ಹಲೀಮ್ ಸಾಧಿಕ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವೀರಣ್ಣ ಪಂಚಾಯತ್ ಸದಸ್ಯರುಗಳಾದ ಗೌರಮ್ಮ ವೆಂಕಟರಾಮು ರಾಜಗೋಪಾಲ್ ಲೋಕೇಶ್ ಲಕ್ಷ್ಮಣ ಸಿದ್ದರಾಜು ಮುಖಂಡರುಗಳಾದ ಎಸ್ ಬಿ ಟಿ ರಾಮು ರಾಮಕೃಷ್ಣಪ್ಪ ಮಂಜುನಾಥ ಜೆಪಿ ಮಹದೇವ ಶಿವಲಿಂಗಯ್ಯ ಮತ್ತಿತರರು ಹಾಜರಿದ್ದರು
ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು