IMG 9452

ಪಾವಗಡ ಕೊರೋನಾ : ಸೋಂಕು ನಿಯಂತ್ರಣಕ್ಕೆ ಬ್ಯಾಂಕ್‌ ಮೇನೆಜರ್‌ ಗಳ ಜೊತೆ ಸಭೆ…!

DISTRICT NEWS ತುಮಕೂರು

ಕೋವಿಡ್19 ಕಾರ್ಯಪಡೆ (ಟಾಸ್ಕ್ ಪೆÇೀರ್ಸ್)ಯ ಎಂಟನೆಯ ಸಭೆ ಇಂದು ಐ.ಎಂ.ಎ.ಸಭಾಂಗಣದಲ್ಲಿ ನಡೆಯಿತು.

ಈ ಸಭೆಯು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದ ಸಭೆಯಾಗಿ ಕಂಡುಬಂತು. ಕಾರಣ, ಪಾವಗಡ ಪಟ್ಟಣದ ಎಂಟು ಬ್ಯಾಂಕುಗಳ ಪ್ರಬಂಧಕರು ಹಾಗೂ ಉಪತಹಶೀಲ್ದಾರ್ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಪೂಜ್ಯ ಸ್ವಾಮಿ ಜಪಾನಂದಜೀ ರವರು ವಹಿಸಿದ್ದ ಈ ತುರ್ತು ಸಭೆಯಲ್ಲಿ ಡಾ.ಜಿ.ವೆಂಕಟರಾಮಯ್ಯ, ಹಿರಿಯ ತಜ್ಞರು, ಉಪಾಧ್ಯಕ್ಷರು, ಕಾರ್ಯಪಡೆ ಮತ್ತು ಡಾ.ಶ್ರೀಕಾಂತ್, ಕಾರ್ಯದರ್ಶಿ, ಐ.ಎಂ.ಎ., ಶ್ರೀ ನವೀನ್ ಚಂದ್ರ, ಮುಖ್ಯಾಧಿಕಾರಿಗಳು, ಪುರಸಭೆ, ಶ್ರೀ ಸುದೇಶ್ ಬಾಬು, ಅಧ್ಯಕ್ಷರು, ಆರ್ಯವೈಶ್ಯ ಮಂಡಳಿ, ಶ್ರೀ ರಾಮಚಂದ್ರಪ್ಪ, ಪೆÇಲೀಸ್ ಅಧಿಕಾರಿಗಳು ಭಾಗವಹಿಸಿದ ಈ ಸಭೆಯಲ್ಲಿ ಕೆನರಾ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ಡಿ.ಸಿ.ಸಿ. ಬ್ಯಾಂಕ್, ಕಾಪೆರ್Çರೇಷನ್ ಬ್ಯಾಂಕ್, ವಿಜಯಾ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಪ್ರಬಂಧಕರು ಭಾಗವಹಿಸಿದ್ದು ವಿಶೇಷವಾಗಿತ್ತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪೂಜ್ಯ ಸ್ವಾಮಿ ಜಪಾನಂದಜೀ ರವರು ಪ್ರತಿಯೊಂದು ಬ್ಯಾಂಕುಗಳಲ್ಲಿ ಪ್ರತಿನಿತ್ಯ ಸರಿಸುಮಾರು 200ಕ್ಕೂ ಮಿಗಿಲಾದ ಗ್ರಾಮೀಣ ಭಾಗಗಳಿಂದ ಬಂದ ರೈತಾಪಿ ಜನರು ಹಾಗೂ ಅವರೊಡನೆ ಪ್ರಯಾಣಿಸಿದ ಜನರನ್ನು ಯಾವ ರೀತಿಯಲ್ಲಿ ನಿಯಂತ್ರಣ ಮಾಡಬಹುದು ಎಂಬ ವಿಚಾರಕ್ಕೆ ಚಾಲನೆ ನೀಡಿದರು. ಈ ನಿಟ್ಟಿನಲ್ಲಿ ಪಾವಗಡ ಸರಿಸುಮಾರು 73 ಸೋಂಕಿತ ರೋಗಿಗಳನ್ನು ಹೊಂದಿದ್ದು ಪ್ರತಿನಿತ್ಯ ರೋಗಿಗಳ ಪತ್ತೆಯಾಗುತ್ತಿರುವುದು ಅತ್ಯಂತ ಭಯಾನಕ ವಿಚಾರ ಎಂದು ವಿವರಿಸಿದರು. ದುರದೃಷ್ಟವಶಾತ್ ಕಳೆದ ಹಲವಾರು ತಿಂಗಳಿನಿಂದ ಬ್ಯಾಂಕಿನ ಮುಖ್ಯಸ್ಥರುಗಳಿಗೆ ಅನೇಕ ರೀತಿಯಲ್ಲಿ ಕೋರಿಕೊಂಡಾಗ್ಯೂ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲವಾದ್ದರಿಂದ ಮುಖಾಮುಖಿ ಮಾತನಾಡಿ ಈ ತಾಲ್ಲೂಕನ್ನು ಹಾಗೂ ಪಟ್ಟಣವನ್ನು ಸುರಕ್ಷಿತವಾಗಿಡುವ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ ಎಂದು ತಿಳಿಸಿದರು.

ಸ್ವಾಮೀಜಿಯವರ ಈ ಮಾತುಗಳಿಗೆ ಉತ್ತರವನ್ನು ನೀಡುತ್ತಾ ಎಲ್ಲ ಬ್ಯಾಂಕಿನ ಪ್ರಬಂಧಕರು ತಮ್ಮ ಅಸಹಾಯಕತೆಯನ್ನು ವಿವರಿಸಿದರು. ಅತ್ಯಂತ ಆಶ್ಚರ್ಯಕರವಾದ ವಿಚಾರವೆಂದರೆ ಬ್ಯಾಂಕುಗಳಿಗೆ ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳಿಗೆ ಶುದ್ಧೀಕರಣದ ಸಿಂಪಡಿಕೆಯೂ ಆಗದಿರುವುದನ್ನು ಎತ್ತಿಹಿಡಿದ ಪೂಜ್ಯ ಸ್ವಾಮೀಜಿಯವರು ನಿಜಕ್ಕೂ ಬ್ಯಾಂಕಿನ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಕೈಗನ್ನಡಿಯಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ತಜ್ಞರಾದ ಡಾ.ವೆಂಕಟರಾಮಯ್ಯ ರವರು ಪರಿಸರವನ್ನು ಹಾಗೂ ಬ್ಯಾಂಕಿನ ಒಳಾಂಗಣವನ್ನು ಔಷಧಿಗಳನ್ನು ಸಿಂಪಡಿಸಿ ಶುಚಿಯಾಗಿಟ್ಟುಕೊಳ್ಳದಿದ್ದಲ್ಲಿ ಮೊದಲಿಗೆ ಬ್ಯಾಂಕ್ ಸಿಬ್ಬಂದಿಯವರೇ ಸೋಂಕಿನಿಂದ ನರಳಬೇಕಾದೀತು ಎಂದು ಎಚ್ಚರಿಸಿದರು. ಈ ನಿಟ್ಟಿನಲ್ಲಿ ಬ್ಯಾಂಕ್ ಪ್ರಬಂಧಕರುಗಳು ತತ್‍ಕ್ಷಣದ ಕಾರ್ಯವನ್ನು ನಿರ್ವಹಿಸದಿದ್ದರೆ ಬ್ಯಾಂಕಿಗೆ ಬರುವ ರೈತಾಪಿ ಜನರಿಗೂ ಹಾಗೂ ಬ್ಯಾಂಕಿನ ಸಿಬ್ಬಂದಿಯವರಿಗೂ ಸುರಕ್ಷತೆ ಇಲ್ಲದೆ ಇಡೀ ಪಟ್ಟಣ ಸೋಂಕಿನಿಂದ ನರಳಬೇಕಾದೀತು ಎಂದು ಎಚ್ಚರಿಸಿದರು.

IMG 9455

ತದನಂತರ ಮಾತನಾಡಿದ ಶ್ರೀ ಸುದೇಶ್ ಬಾಬು ರವರು ಬ್ಯಾಂಕುಗಳ ಹಾಗೂ ತಹಶೀಲ್ದಾರ್ ಕಛೇರಿ, ಪೆÇಲೀಸ್ ಠಾಣೆ ಹಾಗೂ ವ್ಯವಸಾಯ ಅಭಿವೃದ್ಧಿ ಕಛೇರಿಯ ಸ್ಥಳಗಳು ಸೋಂಕಿನ ಮೂಲ ಸ್ಥಳಗಳಾಗುವುದರಲ್ಲಿ ಸಂದೇಹವಿಲ್ಲ ಎಂದು ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಉಪತಹಶೀಲ್ದಾರ್ ಶ್ರೀ ಸತ್ಯನಾರಾಯಣ್ ರವರು ತಹಶೀಲ್ದಾರ್ ಕಛೇರಿಗೆ ಸರಿಸುಮಾರು 500ಕ್ಕೂ ಹೆಚ್ಚು ಜನರು ಬರುತ್ತಿದ್ದು ಯಾವುದೇ ರೀತಿಯ ಸಾಮಾಜಿಕ ಅಂತರ ಹಾಗೂ ಮುಖಗವಸಿಲ್ಲದೆ, ಎಷ್ಟೇ ಹೇಳಿದರೂ ಯಾರೂ ಶಿಸ್ತಿನಿಂದ ವರ್ತಿಸುತ್ತಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ಮುಂದಿಟ್ಟರು. ತದನಂತರ ಮಾತನಾಡಿದ ಮುಖ್ಯಾಧಿಕಾರಿ ಶ್ರೀ ನವೀನ್ ಚಂದ್ರ, ಪುರಸಭೆಯ ವತಿಯಿಂದ ತಾವು ಆದಷ್ಟು ಸೇವೆ ಸಲ್ಲಿಸುತ್ತಿದ್ದು ಜನಸಾಮಾನ್ಯರಲ್ಲಿ ಜಾಗೃತಿ ಮೂಡದಿರುವ ಸ್ಥಿತಿಯನ್ನು ವಿವರಿಸಿದರು

. ಈ ನಿಟ್ಟಿನಲ್ಲಿ ಪೂಜ್ಯ ಸ್ವಾಮಿ ಜಪಾನಂದಜೀ ರವರು ತಮ್ಮ ಸಂಸ್ಥೆ ಹಾಗೂ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಕೆಲವು ದಿನ ಈ ಎಲ್ಲಾ ಬ್ಯಾಂಕುಗಳಿಗೆ ಹಾಗೂ ಪೆÇಲೀಸ್ ಠಾಣೆ, ತಹಶೀಲ್ದಾರ್ ಕಛೇರಿಗಳಿಗೆ ಸ್ಯಾನಿಟೈಸರ್ ಸಿಂಪಡಿಸುವ ಜವಾಬ್ಧಾರಿಯನ್ನು ತೆಗೆದುಕೊಂಡು ತನ್ಮೂಲಕ ಬ್ಯಾಂಕುಗಳ ಹಿರಿಯ ಅಧಿಕಾರಿಗಳ ಗಮನವನ್ನು ಸೆಳೆಯುವುದಕ್ಕೆ ಪ್ರಯತ್ನಿಸುತ್ತೇವೆ ಎಂದು ಆಶ್ಚರ್ಯಕರ ರೀತಿಯಲ್ಲಿ ಜವಾಬ್ಧಾರಿಯನ್ನು ಸ್ವೀಕರಿಸಿದರು. ಇದನ್ನು ಕೇಳಿ ನೆರೆದ ಸಭಿಕರೆಲ್ಲಾ ದಿಗ್ಮೂಢರಾದರು. ಆದಾಗ್ಯೂ ಬುಧವಾರ ಬೆಳಿಗ್ಗೆ ಡಿ.ಸಿ.ಸಿ. ಬ್ಯಾಂಕ್, ತಹಶೀಲ್ದಾರ್ ರವರ ಕಛೇರಿ, ಪೆÇಲೀಸ್ ಠಾಣೆ ಮತ್ತು ಕರ್ಣಾಟಕ ಬ್ಯಾಂಕ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಒಳಗೆ ಮತ್ತು ಹೊರಗೆ ದ್ರಾವಣವನ್ನು ಸಿಂಪಡಿಸುವ ಯಂತ್ರದಿಂದ ತಮ್ಮ ಸಂಸ್ಥೆಯ ಮೂಲಕ ಆ ಕೆಲಸವನ್ನು ಮಾಡುತ್ತೇವೆಂದು ಘೋಷಿಸಿದರು.

ಈ ಮೂಲಕವಾದರೂ ಜನರಲ್ಲಿ ಜಾಗೃತಿ ಮೂಡಿ ಅದರಲ್ಲೂ ಮುಖ್ಯವಾಗಿ ಬ್ಯಾಂಕಿನ ಪ್ರಬಂಧಕರಿಗೆ ಹಾಗೂ ದೂರದ ನಗರಗಳಲ್ಲಿರುವ ಹಿರಿಯ ಅಧಿಕಾರಿಗಳಿಗೆ ಕಣ್ತೆರೆಯುವಂತಾಗಲಿ ಎಂದು ಪೂಜ್ಯ ಸ್ವಾಮಿ ಜಪಾನಂದಜೀ ರವರು ತಿಳಿಸಿದರು.

    ಕಾರ್ಯಕ್ರಮದ ವಂದನಾರ್ಪಣೆಯನ್ನು ಕಾರ್ಯದರ್ಶಿಗಳಾದ ಡಾ.ಶ್ರೀಕಾಂತ್ ರವರು ನಡೆಸಿಕೊಟ್ಟು ಪೂಜ್ಯ ಸ್ವಾಮಿ ಜಪಾನಂದಜೀ ರವರ ಅಹರ್ನಿಷಿ ಸೇವೆ ಹಾಗೂ ಕೋವಿಡ್19 ಕಾರ್ಯಪಡೆಯ ಮುಖ್ಯಸ್ಥರಾಗಿ ಎಲ್ಲರಿಗೂ ಮಾರ್ಗದರ್ಶನ ನೀಡುತ್ತಿರುವ ಪರಿಯನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ನೆರೆದ ಸಭಿಕರಿಗೆ ವೈದ್ಯಕೀಯ ದೃಷ್ಟಿಯಲ್ಲಿ ಶುಚಿತ್ವದ ಬಗ್ಗೆ ಕಿವಿಮಾತನ್ನು ನೀಡಿದರು.