IMG 20250618 WA0015 scaled

ತುಮಕೂರು :ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಇದು ಕಾರ್ಯಕರ್ತರ ಪಕ್ಷ…..! 

DISTRICT NEWS ತುಮಕೂರು

ಸಮಾಜದ ಬದಲಾವಣೆ ಹೆಣ್ಣು ಮಕ್ಕಳಿಂದ ಸಾಧ್ಯ.

ಪಾವಗಡ: ಸಮಾಜದಲ್ಲಿ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಬೇಕೆಂದು, ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಬೇಕೆಂದು ಜೆ.ಡಿ.ಎಸ್ ನ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಪಟ್ಟಣದ ಆಂಜನೇಯ ಶೆಟ್ಟಿ ಕಲ್ಯಾಣ ಮಂಟಪದ ಆವರಣದಲ್ಲಿ ಮಂಗಳವಾರ ತಾಲೂಕು ಜೆಡಿಎಸ್ ಘಟಕ ವತಿಯಿಂದ ಏರ್ಪಡಿಸಿದ್ದ ಜನರೊಂದಿಗೆ ಜನತಾದಳ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಯಾವ ಪಕ್ಷವನ್ನು ಬೇಕಾದರೆ ಬೆಳೆಸಬಹುದೆಂದು, ಆದುದರಿಂದ ಹೆಣ್ಣು ಮಕ್ಕಳು ಹೆಚ್ಚು ಪಕ್ಷ ಸಂಘಟನೆಗೆ ಸಂಘಟಿತರಾಗಬೇಕೆಂದು ಕರೆ ನೀಡಿದರು.

ಜನರ ಅಭಿಮಾನ ವಿಶ್ವಾಸ ವನ್ನು ಹೆಚ್ಚು ಹೊಂದಿ ಸ್ಥಳೀಯ ಚುನಾವಣೆಗಳಲ್ಲಿ ಗೆಲ್ಲುವ ಸಾಮರ್ಥ್ಯವಿರುವವರು ಮುಖ್ಯಮಂತ್ರಿ ಆಯ್ಕೆಯವರಿಗೂ ಹೆಚ್ಚಿನ ಪ್ರಾಮುಖ್ಯತೆ ಹೊಂದಿರುತ್ತಾರೆ ಎಂದರು.

ಜೆಡಿಎಸ್ ಪಕ್ಷಕ್ಕೆ ಸದಸ್ಯತ್ವವನ್ನು ಪಡೆಯಲು 9964002028 ಸಂಖ್ಯೆಗೆ ಮಿಸ್ ಕಾಲ್ ನೀಡಿ ಸದಸ್ಯತ್ವ ಪಡೆದುಕೊಳ್ಳಬೇಕೆಂದು ತಿಳಿಸಿದರು.
ತಾಲೂಕಿನ ಅಭಿವೃದ್ಧಿ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರಿಗಿದ್ದ ಕಾಳಜಿಯ ಫಲಿತವೇ ಇಂದು ತಾಲೂಕಿನಲ್ಲಿರುವ ಬಸ್ ಡಿಪೋ ಮತ್ತು ಮೊರಾರ್ಜಿ ಶಾಲೆಗಳು ಎಂದರು.
ಗ್ಯಾರೆಂಟಿ ಹೆಸರಿನಲ್ಲಿ ಬಂದ ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ಐದು ಗ್ಯಾರಂಟಿಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುತ್ತಿದೆಯೇ ಎಂದು ಪ್ರಶ್ನಿಸಿದರು.

IMG 20250618 WA0013
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾನು ಹಿಂದುಳಿದ ವರ್ಗದ ಸಮಾಜವಾದಿ ನಾಯಕ ಎನ್ನುತ್ತಾರೆ, ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕಾಲೋನಿಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಎಸ್ ಇ ಬಿ ಟಿ ಎಸ್ ಪಿ ಹಣವನ್ನು ಕಾಂಗ್ರೆಸ್ ಸರ್ಕಾರ ತೆಲಂಗಾಣ ಚುನಾವಣೆಗೆ ಬಳಸಿದ್ದು ಸರಿಯೇ ಎಂದು ಪ್ರಶ್ನಿಸಿದರು.
ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಇರುವ ವಾಲ್ಮೀಕಿ ನಿಗಮದ ಯಾರ ಕೈ ಸೇರಿದೆ ಎಂದು ಪ್ರಶ್ನಿಸಿದರು.
ಜನರು ಕಾಂಗ್ರೆಸ್ ಸರ್ಕಾರದ ಬಗ್ಗೆ ಬೇಸರ ಹೊಂದಿದ್ದು ಮುಂಬರುವ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಾಲದಲ್ಲಿ ಪಾವಗಡ ತಾಲೂಕಿಗೆ ಹೆಚ್ಚಿನ ಮನ್ನಣೆ
ದೊರೆಯಿತೆಂದು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ 10 ಪ್ರೌಢ ಶಾಲೆಗಳನ್ನು ಬಸ್ ಡಿಪೋ ಸ್ಥಾಪನೆ ಮಾಡಲಾಯಿತು ಎಂದು ತಿಳಿಸಿದರು,
ಸುವರ್ಣ ಗ್ರಾಮ ಯೋಜನೆ ತಾಲೂಕಿನಲ್ಲಿ 100 ಕೋಟಿ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ, ಮಹಿಳಾ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ ಮಾಡಲಾಗಿದೆ ಎಂದರು.

ಜೆಡಿಎಸ್, ಜಿಲ್ಲಾ ಘಟಕದ ಅಧ್ಯಕ್ಷ ಆರ್ ಸಿ ಅಂಜಿನಪ್ಪ ಮಾತನಾಡಿ.ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಜೆಡಿಎಸ್ ಪಕ್ಷವನ್ನು ಬಲಪಡಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಮಹಿಳಾ ಮಂಡಳಿಯ ಅಧ್ಯಕ್ಷ ರಶ್ಮಿಕ, ಮಾಜಿ ಎಂಎಲ್ಸಿ ತಿಪ್ಪೇಸ್ವಾಮಿ, ತಾಹಿರಾಬಾನು,ಸೊಗಡು ವೆಂಕಟೇಶ್, ಮನು ಮಹೇಶ್, ಅಕ್ಕಲಪ್ಪ ನಾಯ್ಡು, ತಾಲೂಕು ಅಧ್ಯಕ್ಷ ಈರಣ್ಣ, ಗೌರವಾಧ್ಯಕ್ಷ ರಾಜಶೇಖರಪ್ಪ ಕೊತ್ತೂರ್ ನಾಗೇಶ್ ಮುಂತಾದವರು ಹಾಜರಿದ್ದರು.IMG 20250618 WA0011

* ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಇದು ಕಾರ್ಯಕರ್ತರ ಪಕ್ಷ  *

*  ತುಮಕೂರು ಜಿಲ್ಲೆಯಲ್ಲಿ ಮೂರನೇ ದಿನ ಮುಂದುವರೆದ ಜನರೊಂದಿಗೆ ಜನತಾದಳ ಪ್ರವಾಸ *

* ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮಸ್ಯೆಗಳನ್ನು ಆಲಿಸುತ್ತಿರುವ ನಿಖಿಲ್ ಕುಮಾರಸ್ವಾಮಿ *

* ಹೊಸ ಬದಲಾವಣೆ ಬೇಕೆಂದರೆ ನಾವು ಬಿದಿಗಿಳಿದು ಹೋರಾಟ ಮಾಡುತ್ತೇನೆ-ನಿಖಿಲ್ *

ತುಮಕೂರು, ಕೊರಟಗೆರೆ : ರಾಜ್ಯದ ಜನ ಕಾಂಗ್ರೆಸ್ ಆಡಳಿತದಿಂದ ರೋಸಿಹೋಗಿದ್ದಾರೆ. ದೇವೇಗೌಡರ ಮಾರ್ಗದರ್ಶನದಲ್ಲಿ, ಕುಮಾರಣ್ಣನವರ ನಾಯಕತ್ವದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕು ನಿಮ್ಮ ಜೊತೆ ನಾನಿದ್ದೇನೆ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ಜನರೊಂದಿಗೆ ಜನತಾದಳ ಇಂದು ಮೂರನೇ ದಿನದ ರಾಜ್ಯ ಪ್ರವಾಸ ಬೈಕ್ ರ್ಯಾಲಿ ಮೂಲಕ ಕೊರಟಗೆರೆ ಕ್ಷೇತ್ರದಲ್ಲಿ “ಜನರೊಂದಿಗೆ ಜನತಾದಳ” ಮಿಸ್ಡ್ ಕಾಲ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಸಭೆಯನ್ನ ಉದ್ದೇಶಿಸಿ ಮಾತನಾಡಿದರು.

ಸುಧಾಕರ್ ಲಾಲ್ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲು ಪೂರಕವಾಗಿ ಕೆಲಸ ಮಾಡಿ ಮಾಡುತ್ತಿದ್ದೇವೆ. ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಇದು ಕಾರ್ಯಕರ್ತರ ಪಕ್ಷ ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರು ಮತ್ತು ಮುಖಂಡರ ಜತೆ ನಾನಿದ್ದೇನೆ ಎಂದು ಧೈರ್ಯ ತುಂಬಿದರು.

ಪ್ರವಾಸ ಅವಧಿಯಲ್ಲಿ ರಾಜ್ಯದ ಪ್ರತಿ ಜಿಲ್ಲೆ ಮತ್ತು ಪ್ರತಿ ತಾಲ್ಲೂಕಿನ ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ಸಾಮಾನ್ಯ ಜನರನ್ನ ಭೇಟಿ ಮಾಡಳಿದ್ದೇನೆ. ಪಕ್ಷದ ಬಗ್ಗೆ
ಕಾರ್ಯಕರ್ತರು ಹೊಂದಿರುವ ಭಾವನೆಯನ್ನು ಅರ್ಥಮಾಡಿಕೊಳ್ಳಳಿದ್ದೇನೆ. ಪಕ್ಷವನ್ನು ಮತ್ತೆ ತಳ ಮಟ್ಟದಿಂದ ಗಟ್ಟಿಗೊಳಿಸಲು ಏನು ಮಾಡಬೇಕೆಂದು ಜನರಿಂದ ಕೇಳಲಿದ್ದೆನೇ ಎಂದರು.

ನನ್ನ ರಾಜ್ಯ ಪ್ರವಾಸ ವೇಳೆ ಎಲ್ಲರನ್ನೂ ಭೇಟಿ ಮಾಡುತ್ತೇನೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ದದಲ್ಲಿನ ಸ್ಥಳೀಯ ಸಮಸ್ಯೆ ಆಲಿಸುತ್ತಿದ್ದು, ಕಾರ್ಯಕರ್ತರ ಜತೆ ಬೆರೆತು ಅದಕ್ಕೆ ಪರಿಹಾರ ಉತ್ತರವನ್ನು ಕಂಡುಕೊಳ್ಳಲು ಇದೊಂದು ಉತ್ತಮ ವೇದಿಕೆ ಎಂದು ತಿಳಿಸಿದರು.

58 ದಿನಗಳ ಕಾಲ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ.ನಮ್ಮ ಪಕ್ಷವನ್ನು ಹಲವು ದಶಕಗಳಿಂದ ಕಟ್ಟಿ ಬೆಳೆಸಿದ ದೇವೇಗೌಡರ ಕಾಲಘಟ್ಟದ ಸಾಕಷ್ಟು ಹಿರಿಯ ನಾಯಕರಿದ್ದೀರಾ.ನಿಮ್ಮ ಸಂಪರ್ಕ ಬಯಸಿ ಪ್ರವಾಸ ಕೈಗೊಂಡಿದ್ದೇನೆ. ಜಿಲ್ಲೆಯಲ್ಲಿ ದೇವೇಗೌಡರ ಹೋರಾಟಕ್ಕೆ ಜೊತೆಯಾಗಿ ನಿಂತು ಬೆಂಬಲ ನೀಡಿದ್ದೀರಾ.

ಜನತಾದಳ ಪಕ್ಷ ಮುಗಿದೆ ಹೋಯ್ತು ಅಂತ ವಿರೋಧ ಪಕ್ಷದವರು ಹೇಳುತ್ತಿದ್ದಾರೆ.. ಆದರೆ ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಕ್ಕಿಂತ ಹೆಚ್ಚಿನ ವೋಟಿಂಗ್ ಪರ್ಸೆಂಟೇಜ್ ಅನ್ನ ಜೆಡಿಎಸ್ ಪಕ್ಷಕ್ಕೆ ಕೊಟ್ಟಿದ್ದೀರ ನಿಮ್ಮ ಋಣ ತೀರಿಸಲು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಎಂದರು.

ಡಿಸೆಂಬರ್ ನಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಬರಲಿದೆ. ಗ್ರಾಮ ಪಂಚಾಯ್ತಿ ಚುನಾವಣೆ ಪಕ್ಷದಲ್ಲಿ ಬೇರು ಇದ್ದಂತೆ.ಪಕ್ಷ ಎಲ್ಲಾದಕ್ಕೂ ತಯಾರಿ ಮಾಡಿಕೊಳ್ಳಬೇಕು. ಅದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ನಾನು ಮೂರು ಬಾರಿ ಚುನಾವಣೆಯಲ್ಲಿ ಪೆಟ್ಟು ತಿಂದಿರಬಹುದು. ನಾನು ಒಳ್ಳೆ ಉದ್ದೇಶದಿಂದ ನಾನು ಪ್ರವಾಸಕ್ಕೆ ಬಂದಿದ್ದೇನೆ ನಿಮ್ಮ ಪ್ರೀತಿ ಸಹಕಾರ ಇರಲಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ದೇವೇಗೌಡರ ಮಾರ್ಗರ್ದಶದಲ್ಲಿ ಪಕ್ಷವನ್ನು ಬೇರು ಮಟ್ಟದಲ್ಲಿ ಪ್ರಾದೇಶಕ ಪಕ್ಷವನ್ನು ಕಟ್ಟಿಬೆಳೆಸಬೇಕು ಅಂತ ಹೊರಟ್ಟಿದ್ದೇನೆ.ರಾಜ್ಯದ ಸಮಸ್ಯೆಗಳನ್ನ ಅರ್ಥೈಸಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದು‌ ಹೊರಟ್ಟಿದ್ದೇನೆ. ಕಾಂಗ್ರೆಸ್ ಪಕ್ಷದ ಎರಡು ವರ್ಷದ ಆಡಳಿತ ನೋಡಿದ್ದೀರಾ.? ಹೆಚ್ಚು ಸ್ಥಾನ ಗೆದ್ದಿರುವ ಕಾಂಗ್ರೆಸ್ ಪಕ್ಷ
ಜನಪರ ಕಾರ್ಯಕ್ರಮ ಕೊಡಬಹುದಿತ್ತು. ಆದರೆ ಸಾಲದ ಹೊರೆ ಹೊರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕುಮಾರಸಣ್ಣ ಅವರು ಮುಖ್ಯಮಂತ್ರಿ ಆಗಿದ್ದ 14 ತಿಂಗಳಲ್ಲಿ 25 ಸಾವಿರ ಕೋಟಿ ರೈತರ ಸಾಲ ಮನ್ನ ಮಾಡಿದ್ದಾರೆ.ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರ ಪರಿಸ್ಥಿತಿ ಏನಾಗಿದೆ.25 ಸಾವಿರ ಇದ್ದ ಟಿಸಿ ಬೆಲೆ 3-4 ಲಕ್ಷಕ್ಕೆ ಏರಿದೆ. ಪ್ರಾದೇಶಿಕ ಪಕ್ಷದ ಅಸ್ತಿತ್ವ ಕಾಪಾಡುವ ಜವಬ್ದಾರಿ ನಿಮ್ಮ ಮೇಲಿದೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದರು.

ಹಿರಿಯರು, ಯುವಕರು ಹಾಗೂ ತಾಯಂದಿರು ಜೆಡಿಎಸ್ ಪಕ್ಷವನ್ನು ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಲಿಷ್ಠವಾಗಿ ಸಂಘಟಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಮಾಡಿಸಬೇಕು. ನನ್ನ ಮನವಿಗೆ ಸ್ಪಂದಿಸಿದ ಕಾರ್ಯಕರ್ತ ಬಂಧುಗಳು ಬೂತ್ ಮಟ್ಟದಲ್ಲಿ ತಂಡಗಳನ್ನು ಕಟ್ಟಿಕೊಂಡು ಪಕ್ಷ ಸಂಘಟಿಸುವ ಭರವಸೆ ನೀಡಿದರು

ನನ್ನ ಪ್ರೀತಿಯ ಯುವಕರು, ಹಿರಿಯರ ಮಾರ್ಗದರ್ಶನ ಪಡೆಯಬೇಕು ಆಗ ಮಾತ್ರ ನಮಗೆ ಅಧಿಕಾರ ದೊರೆಯಲು ಸಾಧ್ಯ, ನಾವೆಲ್ಲರೂ ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ ಎಂದು ಯುವ ಸಮುದಾಯಕ್ಕೆ ಅವರು ಕರೆನೀಡಿದರು.

ಇದೇ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರರಾದ ತಿಪ್ಪೇಸ್ವಾಮಿ ರವರು, ಮಾಜಿ ಶಾಸಕರಾದ ಪಿ.ಆರ್ ಸುಧಾಕರ್ ಲಾಲ್ ರವರು, ಜಿಲ್ಲಾಧ್ಯಕ್ಷರಾದ ಆರ್.ಸಿ ಆಂಜಿನಪ್ಪ ರವರು, ಮಹಿಳಾ ಅಧ್ಯಕ್ಷರಾದ ಶ್ರೀಮತಿ ಸುಮಾ ರವರು, ತಾಲ್ಲೂಕು ಅಧ್ಯಕ್ಷರಾದ ಕಾಮರಾಜ್ ರವರು, ಕಾರ್ಯಧ್ಯಕ್ಷರಾದ ಲಕ್ಮೀಶ್ ರವರು, ಮುಖಂಡರಾದ ಶಿವರಾಮೇಗೌಡರು ಸೇರಿದಂತೆ ಪ್ರಮುಖ ಮುಖಂಡರು ಹಾಗೂ ಪಧಾದಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

IMG 20250618 WA0006

* ಸಚಿವ ರಾಜಣ್ಣ ಅವರೇ ನಿಮ್ಮ ಹಿರಿತನಕ್ಕೆ ಗೌರವವಿದೆ ಬೆಲೆ ಕೊಡುತ್ತೇವೆ *

* ಕ್ಷೇತ್ರದಲ್ಲಿ ಹಿಟ್ಲರ್ ರಾಜಕಾರಣ ಮಾಡಬೇಡಿ, ನಿಮ್ಮ ದರ್ಪಕ್ಕೆ, ಧಮ್ಕಿಗೆ ಯಾರು ಹೆದರುವುದಿಲ್ಲ *

*ಮಧುಗಿರಿಯಲ್ಲಿ ನಿಮ್ಮ ಟಾರ್ಗೆಟ್ ರಾಜಕಾರಣ ನಡೆಯಲ್ಲ, ಕಾರ್ಯಕರ್ತರ ಜತೆ ನಾವಿದ್ದೇವೆ*

*ಮಧುಗಿರಿ ಕ್ಷೇತ್ರ ನಮಗೆ ಮಾತೃಕ್ಷೇತ್ರ, ಯಾರು ಎದೆಗುಂದಬೇಡಿ ಎಂದ ನಿಖಿಲ್ *

ತುಮಕೂರು, ಮಧುಗಿರಿ: ಸಚಿವ ರಾಜಣ್ಣ ಅವರೇ ನೀವೂ ಹಿರಿಯರು ಗೌರವವಿದೆ, ನಿಮ್ಮ ಹಿರಿತನಕ್ಕೆ ನಾನು ಬೆಲೆ ಕೊಡುತ್ತೇನೆ. ಆದರೆ ಹಿಟ್ಲರ್ ಕಾಲದ ರಾಜಕಾರಣ ಮಾಡಬೇಡಿ, ಇಲ್ಲಿ ಯಾರು ಕೂಡಾ ನಿಮ್ಮ ದರ್ಪಕ್ಕೆ, ಧಮ್ಕಿಗೆ, ಟಾರ್ಗೆಟ್ ರಾಜಕಾರಣಕ್ಕೆ ಕೈ ಕಟ್ಟಿಕೊಂಡು ಕೂರಲ್ಲ ರಾಜಣ್ಣ ವಿರುದ್ಧ ಅವರು ವಾಗ್ದಾಳಿ ನಡೆಸಿದರು

ತುಮಕೂರಿನ ಮಧುಗಿರಿಯಲ್ಲಿ ಆಯೋಜಿಸಲಾಗಿದ್ದ ಮೂರನೇ ದಿನದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಸಭೆಯನ್ನ ಉದ್ದೇಶಿಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ಟಾರ್ಗೆಟ್ ರಾಜಕಾರಣ ಮಾಡುತ್ತಿದ್ದಾರೆ. ಕೃಷಿ ಇಲಾಖೆಯಲ್ಲಿ ಡಿ ಗ್ರೂಪ್ ನೌಕರ ನರಸಿಂಹಮೂರ್ತಿ ಜೆಡಿಎಸ್ ಪಕ್ಷದ ಅಭಿಮಾನಿಯಾಗಿದ್ದು ತಪ್ಪಾ.? ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡ ಅನ್ನೋ ಕಾರಣಕ್ಕೆ ಅಮಾಯಕ ನನ್ನ ಟಾರ್ಗೆಟ್ ಮಾಡಿ ಬಲಿಪಶು ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆ ಅಭಿಮಾನಿ ಪಕ್ಷದ ಮೇಲೆ ಅಭಿಮಾನ ಇಡುವುದು ತಪ್ಪಾ.? ಅಂತಹ ಮುಗ್ಧ ವ್ಯಕ್ತಿಯ ಮೇಲೆ ಟಾರ್ಗೆಟ್ ಮಾಡಿ ಕಿತ್ತು ಬಿಸಾಕಿದ್ದಾರೆ. ಇಲ್ಲಿರುವ ಶಾಸಕರು ಹಿರಿಯರಿದ್ದಾರೆ. ಅವರು ಹಿರಿಯ ತನಕ್ಕೆ ನಾನು ಬೆಲೆ ಕೊಡುತ್ತೇನೆ. ಈ ರೀತಿ ದಬ್ಬಾಳಿಕೆ ದೌರ್ಜನ್ಯ, ಅಹಂಕಾರ ಎಷ್ಟು ದಿನ ಮಾಡ್ತೀರಿ ಎಂದು ಕಿಡಿಕಾರಿದರು.

ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ಎಂತ ಬಲಿಷ್ಠ ನಾಯಕರನ್ನು ಸೋಲಿಸುವ ಹಾಗೂ ಉಲ್ಟಾ ಸೀದಾ ಮಾಡುವ ಶಕ್ತಿ, ಸಾಮರ್ಥ್ಯ ತಾಲ್ಲೂಕಿನ ಜನತೆಗೆ ಇದೆ. ಅಧಿಕಾರ ಶಾಶ್ವತ ಅಲ್ಲ ಕಾಲ ಚಕ್ರ ಬದಲಾಗುತ್ತೆ ಎಂದು ಹೀಗೆ ಇರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

2008ರಲ್ಲಿ ಅನಿತಾ ಕುಮಾರಸ್ವಾಮಿ ಅವರು ಮಧುಗಿರಿ ಶಾಸಕರಾಗಿದ್ದಾಗ ಕ್ಷೇತ್ರದಲ್ಲಿ ಯಾವುದೇ ಸಂಘರ್ಷಕ್ಕೆ ಎಡೆ ಮಾಡಿಕೊಳ್ಳದೆ ಆರೋಗ್ಯಕರವಾಗಿ ಅಧಿಕಾರ ನಡೆಸಿದರು. ಆದರೆ ಮಧುಗಿರಿಗೆ ಕ್ಷೇತ್ರದಲ್ಲಿ ಈಗ ಪರಿಸ್ಥಿತಿ ಏನಾಗಿದೆ ಎಂದರು.

ಮಾಜಿ ಶಾಸಕ ವೀರಭದ್ರಯ್ಯ ಅವರು ಮೂರು ಬಾರೀ ಚುನಾವಣೆಯಲ್ಲಿ ಒಂದು ಬಾರೀ ಗೆದ್ದಿದ್ದಾರೆ. ಆದರೆ ರಾಜಕೀಯ ಷಡ್ಯಂತರದಲ್ಲಿ ನನ್ನ ಬಲಿಪಶು ಮಾಡಿದ್ದಾರೆ. ನಾನು ಸೋತಿದೀನಿ ಅನ್ನೋ ಕಾರಣಕ್ಕೆ ಮನೆಯಲ್ಲಿ ಕೂತ್ತಿಲ್ಲ, ಪಕ್ಷ ಸಂಘಟನೆ ಮಾಡ್ಬೇಕು ಅಂತ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಎಂದರು.

ದಯವಿಟ್ಟು ಛಲ ಕಳೆದುಕೊಳ್ಳಬೇಡಿ, ಈ ಪಕ್ಷವನ್ನ ಕಟ್ಟಿ ಬೆಳೆಸಿದಂತಹ ನಿಷ್ಠಾವಂತ ಕಾರ್ಯಕರ್ತರ ಪ್ರಶ್ನೆ ಇದು. ಅವರಿಗೆ ನಾವು ರಕ್ಷಣೆ ಕೊಡಬೇಕು. ಅವರ ಬೆನ್ನೆಲುಬಾಗಿ ನಿಲ್ಲಬೇಕು. ಏನು ತಪ್ಪೇ ಮಾಡದಿರುವ ಅಮಾಯಕರ ಮೇಲೆ ಈ ರೀತಿ ದೌರ್ಜನ್ಯ ಆದಂತ ಸಂದರ್ಭದಲ್ಲಿ ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಧೈರ್ಯ ತುಂಬಿದರು.

ಯಾವುದೇ ಕಾರಣಕ್ಕೂ ಕಾರ್ಯಕರ್ತರನ್ನ ಬಿಟ್ಟುಕೊಡುವ ಪ್ರಶ್ನೆ ಇಲ್ಲ. ನೀವು ಯಾರು ಕೂಡ ಆತಂಕಕ್ಕೆ ಒಳಗಾಗಬೇಡಿ ನಾನಿದ್ದೇನೆ, ಪಕ್ಷ ಇದೆ ನಾನು ರಾಜ್ಯ ಪ್ರವಾಸ ಮಾಡುತ್ತಿರುವ ಉದ್ದೇಶವೇ ನಿಮ್ಮ ಜೊತೆ ನಾನಿದ್ದೇನೆ ಎಂದು ತಿಳಿಸುವುದಕ್ಕೆ ನಿಮ್ಮ ಸಂಬಂಧ ಪ್ರೀತಿ ಸಹಕಾರ ನನ್ನ ಮೇಲೆ ಇರಲಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಮಾಜಿ ಶಾಸಕ ವೀರಭದ್ರಪ್ಪ, ತಿಮ್ಮರಾಯಪ್ಪ , ಜಿಲ್ಲಾಧ್ಯಕ್ಷರಾದ ಆರ್.ಸಿ ಆಂಜಿನಪ್ಪ, ತಾಲ್ಲೂಕು ಅಧ್ಯಕ್ಷರಾದ ಬಸವರಾಜ್ , ಮುಖಂಡರಾದ ಗೋವಿಂದರಾಜ್ , ಕೊಂಡವಾಡಿ ಚಂದ್ರಶೇಖರ್ ಸೇರಿದಂತೆ ಪ್ರಮುಖ ಮುಖಂಡರು ಹಾಗೂ ಪಧಾದಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪಾವಗಡ ವರದಿ : ಶ್ರೀನಿವಾಸಲು 

 

 

Leave a Reply

Your email address will not be published. Required fields are marked *