ಪುನಃಶ್ಚೇತನಗೊಂಡ ಕೆರೆ ಹಸ್ತಾಂತರ.
ಪಾವಗಡ: ತಾಲ್ಲೂಕಿನ ಪೋಲೆನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ವತಿಯಿಂದ ಪುನಶ್ಚೇತನಗೊಂಡ ಪೋಲೆನಹಳ್ಳಿ ಕೆರೆಯನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಕೆರೆ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ರೆಡ್ಡಿ ಮಾತನಾಡಿ.
ಗ್ರಾಮೀಣ ಭಾಗಗಳಲ್ಲಿ ಕೆರೆಗಳ ಪುನಃಶ್ಚೇತನ ಮಾಡುವುದ ರಿಂದ ರೈತಾಪಿ ವರ್ಗಕ್ಕೆ ಅನುಕೂಲ ವಾಗುತ್ತದೆ ಎಂದು ಗ್ರಾಮಸ್ಥರ ಪರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಮೆಚ್ಚುವಂತದ್ದಾಗಿದೆ ಎಂದರು
ತುಮಕೂರು ಜಿಲ್ಲೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯದ್ಯಂತ ಸುಮಾರು 1000 ಕೆರೆಗಳ ಪುನಶ್ಚೇತನ ಮಾಡಿದ್ದು ರೈತರಿಗೆ ದನ ಕರುಗಳಿಗೆ ಅಕ್ಕಪಕ್ಕದ ಬೋರ್ವೆಲ್ಗಳಿಗೆ ಅನುಕೂಲವಾಗಿದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ತಾಲ್ಲೂಕು ಯೋಜನಾ ಅಧಿಕಾರಿಯಾದ ಮಹೇಶ್ ಮಾತನಾಡಿ.
ಪಾವಗಡ ತಾಲೂಕಿನಲ್ಲಿ ಈಗಾಗಲೇ 326ವಿದ್ಯಾರ್ಥಿಗಳಿಗೆ ಸುಜ್ಞಾನಿಧಿ ಶಿಷ್ಯವೇತನ ಹಾಗೂ 20 ಆಯ್ದ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರು ನೀಡಲಾಗಿದೆ ಎಂದರು.
123 ನಿರ್ಗಾತಿಕರ ಮಾಶಾಸನ ಮತ್ತು ತಾಲೂಕಿನಲ್ಲಿ ಏಳು ಶಾಲೆಗಳಿಗೆ ಬೆಂಚು ಡೆಸ್ಕು ಬೇಡಿಕೆ ಬಂದಿದೆ ಎಂದು.
05 ಶುದ್ಧಗಂಗಾ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ.
ಇದುವರೆಗೆ ಪಾವಗಡ ತಾಲೂಕಿನಲ್ಲಿ ಒಟ್ಟು 7 ಕೆರೆಗಳ ಕಾಮಗಾರಿ ಮಾಡಿರುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಸಾಸಲಕುಂಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಂಗಾಧರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ನಿರಂಜನ್ ರೆಡ್ಡಿ ಸಮಿತಿಯ ಉಪಾಧ್ಯಕ್ಷರಾದ ಚಂದ್ರಮೌಳಿ . ಲಿಂಗದಳ್ಳಿ ವಲಯದ ಮೇಲ್ವಿಚಾರಕರಾದ ಆಲೇಶ್, ಕೃಷಿ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಗ್ರಾಮಸ್ಥರು ಊರಿನ ಗಣ್ಯರು ಉಪಸಿತರಿದ್ದರು.
ವರದಿ : ಶ್ರೀನಿವಾಸಲು ಎ
