IMG 20250914 WA0003

ಪಾವಗಡ: ಲೋಕ್ ಅದಾಲತ್ – 35 ಪ್ರಕರಣ ಇತ್ಯರ್ಥ….!

DISTRICT NEWS ತುಮಕೂರು

ಸಂಧಾನದ ಮೂಲಕ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳಿ. ಹಿರಿಯ ಸಿವಿಲ್ ನ್ಯಾಯಾಧೀಶ ವಿ ಮಾದೇಶ್.

ಪಾವಗಡ: ದಾವೆ, ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥ ಪಡಿಸುವುದೇ ಲೋಕ್ ಅದಾಲತ್ ನ ಮೂಲ ಉದ್ದೇಶವೆಂದು
ಹಿರಿಯ ಸಿವಿಲ್ ನ್ಯಾಯಾಧೀಶ ವಿ ಮಾದೇಶ್ ತಿಳಿಸಿದರು.

ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಲೋಕ ಅದಾಲತ್ ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಲೋಕ ಅದಾಲತ್ ನಿಂದ ಕಕ್ಷಿದಾರರ ನಡುವೆ ಒಳ್ಳೆಯ ಸಂಬಂಧ ಮುಂದುವರಿಸುವುದಕ್ಕೆ ಅವಕಾಶ ಕಲ್ಪಿಸಲಾ ಗಿದೆ ಎಂದರು.ಪ್ಬ್ ಪ್ರತಿಯೊಬ್ಬರಿಗೂ   ಕಾನೂನಿನ ಅರಿವು  ಜೊತೆಗೆ ಸರ್ಕಾರಿ ಯೋಜನೆಗಳನ್ನು ಬಡವರಿಗೆ ಮತ್ತು ಅವಶ್ಯಕತೆ ಇದ್ದವರಿಗೆ ಸೌಲಭ್ಯಗಳನ್ನು ಪ್ರಚಾರ ಮಾಡುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ತಿಳಿಸುವ ಕೆಲಸ ಆಗಬೇಕು ಎಂದರು.

ನ್ಯಾಯಾಲಯದಲ್ಲಿ ಇಂದು ಕಾನೂನು ಸಲಹಾ ಕೇಂದ್ರ ಮತ್ತು ಮಧ್ಯಸ್ಥಿಕೆ ದಾರರ ಕೇಂದ್ರದ ಕಚೇರಿ ಲೋಕಾರ್ಪಣೆ ಮಾಡಲಾಗಿದೆ ಎಂದು ತಳಿಸಿದರು

IMG 20250914 WA0005
ಎರಡೂ ಕೇಂದ್ರಗಳನ್ನು ಆರಂಭಿಸಲು ಜಿಲ್ಲಾ ಪ್ರಧಾನ ನ್ಯಾಯದೀಶರಾದ ಜಯಂತ್ ಕುಮಾರ್ ಅವರು ಸೂಕ್ತ ಮಾರ್ಗದರ್ಶನ ನೀಡಿದರು. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅನಿಲ್ ಕುಮಾರ್ ಕೇಂದ್ರ ನಿರ್ಮಿಸಲು ಸಹಕಾರ ನೀಡಿದರು ಎಂದರು.
ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು

ಸಾರ್ವಜನಿಕರು ಕಾನೂನು ಸಲಹಾ ಕೇಂದ್ರದಲ್ಲಿ ಕಾನೂನಿಗೆ ಸಂಬಂಧಪಟ್ಟ ಸಲಹೆಗಳನ್ನು ಪಡೆಯಲು ಪ್ಯಾನೆಲ್ ವಕೀಲರು ಕೆಲಸ ನಿರ್ವಹಿಸಲಿದ್ದು ಪ್ರತಿ ದಿನ ಸರತಿ ರೀತಿಯಂತೆ ಸಿಗುವರೆಂದು, ಕಾನೂನು ವಿಚಾರವಾಗಿ ಮತ್ತು ಪ್ರಕರಣಗಳನ್ನ ಹೂಡಲು ಉಚಿತ ವಕೀಲರ ನೇಮಕ ಮಾಡಲಾಗುವುದೆಂದು ತಿಳಿಸಿದರು.

ಕೆಲವು ಬಾರಿ ಮಧ್ಯಸ್ಥಿಕೆ ಮಾಡಲು ಪ್ರತ್ಯೇಕ ಕಚೇರಿ ಇಲ್ಲದಿದ್ದಾಗ ಮಧ್ಯಸ್ಥಿಕದಾರರು ಕೆಲವು ಕೌಟುಂಬಿಕ ವಿಷಯಗಳನ್ನು ಬಹಿರಂಗವಾಗಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲವೆಂದು

ಆದರೆ ಈಗ ಮಧ್ಯಸ್ಥಿಕೆ ಕೇಂದ್ರ ತೆರೆದಿದ್ದು ಮಧ್ಯಸ್ಥಿಕೆ ದಾರರು ಕೆಲಸವನ್ನು ಗೌರವಯುತವಾಗಿ ಮಾಡಲು ಸಹಾಯಕವಾಗುತ್ತದೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮತ್ತು ಅಧಿಕ ಸಿವಿ ನ್ಯಾಯಾಧೀಶರಾದ ಪಿ.ಎನ್ ಮುನಿರತ್ನಮ್ಮ ಮಾತನಾಡಿ.
ನ್ಯಾಯಾಲಯದಲ್ಲಿ ಎರಡು ಕಚೇರಿಗಳನ್ನು ತೆರೆಯಲಾಗಿದ್ದು ಸಾರ್ವಜನಿಕರು ಇದರ ಅನುಕೂಲವನ್ನು ಪಡೆದುಕೊಳ್ಳಬೇಕೆಂದರು.

ಸಾರ್ವಜನಿಕರು ಇತ್ಯರ್ಥ ಪಡಿಸಿಕೊಳ್ಳಬಹುದಾದ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಸಮಸ್ಯೆ ಬಗೆಹರಿಸಿ ಕೊಳ್ಳಿ ಎಂದು ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾದೀಶರಾದ ವಿ ಮಾದೇಶ ಅವರು ಚೆಕ್ ಬೌನ್ಸ್, ಕರಾರು, ವಿಭಾಗ ದಾವೆ ಸೇರಿದಂತೆ 35 ಪ್ರಕರಣನ್ನು ಬಗೆಹರಿಸಿದರು. 61.33 ಲಕ್ಷ ರೂಪಾಯಿ ಇತ್ಯರ್ಥಪಡಿಸಿದರು.
ಪ್ರಧಾನ, ಅಧಿಕ ಸಿವಿಲ್ ನ್ಯಾಯಾದೀಶೆ ಸಿ ಎನ್ ಮುನಿರತ್ನಮ್ಮ 1086 ಪ್ರಕರಣಗಳನ್ನು ಬಗೆಹರಿಸಿದರು. 7.05 ಲಕ್ಷ ರೂ ಮೌಲ್ಯದ ದಾವೆಗಳನ್ನು ಇತ್ಯರ್ಥಪಡಿಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ವಕೀಲ ಸಣ್ಣೀರಪ್ಪ, ವಕೀಲ ಸಂಘದ ಶೇಷಾನಂದನ್, ಎಚ್ ಎ ಪ್ರಭಾಕರ್, ಪ್ಯಾನಲ್, ಮಧ್ಯಸ್ಥಿಕೆ ವಕೀಲರು, ನ್ಯಾಯಾಲಯದ ಸಿಬ್ಬಂದಿ, ಕಕ್ಷಿದಾರರು ಉಪಸ್ಥಿತರಿದ್ದರು.

ವರದಿ: ಶ್ರೀನಿವಾಸಲು ಎ