ಜನರ ಆರೋಗ್ಯವನ್ನು ಸುಧಾರಿಸುವಲ್ಲಿ ಆರೋಗ್ಯ ಶಿಬಿರಗಳ ಪಾತ್ರ ಮಹತ್ವವಾದುದು.ಶಾಸಕ ಹೆಚ್. ವಿ ವೆಂಕಟೇಶ್.
ಪಾವಗಡ: ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಜನರ ಆರೋಗ್ಯವನ್ನು ಸುಧಾರಿಸಲು. ಆರೋಗ್ಯ ಶಿಬಿರಗಳ ಅವಶ್ಯಕತೆ ಹೆಚ್ಚಿದೆ ಎಂದು . ಶಾಸಕ ಹೆಚ್. ವಿ ವೆಂಕಟೇಶ್ ತಿಳಿಸಿದರು .
ಆರೋಗ್ಯ ಶಿಬಿರಗಳಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಜನರ ಆರೋಗ್ಯವನ್ನು ಸುಧಾರಿಸಲು ಮತ್ತು ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಹಾಯವಾಗಲಿದೆ ಎಂದರು.
ಕೆಲ ಖಾಸಗಿ ಆಸ್ಪತ್ರೆಗಳು ಜನರಿಗೆ ಸೇವೆ ಮಾಡುವ ಬದಲು ರಕ್ತ ಹೀರುತ್ತಿರುವುದು ಶೋಚನೀಯವೆಂದರು. ಸಾಮಾನ್ಯ ಹೆರಿಗೆಯನ್ನು ಮಾಡಿಸದೆ ಸಿಸೇರಿಯನ್ ಮಾಡಿ 70ರಿಂದ 80 ಸಾವಿರ ಹಣವನ್ನು ಬಡ ಜನರಿಂದ ವಸೂಲಿ ಮಾಡುತ್ತಿದ್ದಾರೆ ಎಂದು ಅಂತಹ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೂನ್ ಆಸ್ಪತ್ರೆಯು ಸೇವಾಮನೋಭಾವನೆಯಿಂದ ಸ್ಥಾಪನೆಯಾದ ಆಸ್ಪತ್ರೆಯಾಗಿದ್ದು, ಇತರೆ ಆಸ್ಪತ್ರೆಗಳಿಗೆ ಮಾದರಿಯಾಗಿದೆ ಎಂದರು.
ಬೆಂಗಳೂರು ತುಮಕೂರು ನಗರಗಳಲ್ಲಿ ಸಿಗುವಂತಹ ಅತ್ಯಾಧುನಿಕ ಗುಣಮಟ್ಟದ ಚಿಕಿತ್ಸಾ ಸೌಲಭ್ಯಗಳನ್ನು ಪಾವಗಡದ ಬೂನ್ಆಸ್ಪತ್ರೆ ನೀಡಲಿದ್ದು. ತಾಲೂಕಿಗೆ ವರದಾನವಾಗಿದೆ ಎಂದರು.
ಮೂಲತಃ ಪಾವಗಡ ಪಟ್ಟಣದವರಾದ ಎಲ್ ಕೆ ಅತಿಕ್ ರವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದವರೆಂದು, ಅವರ ಸಹಕಾರ ತಾಲೂಕಿನ ಅಭಿವೃದ್ಧಿಗೆ ಅತಿ ಮುಖ್ಯವೆಂದರು.ತಾಲೂಕಿನ ಕಡಮಲ ಕುಂಟೆಯಲ್ಲಿ ಮೊರಾರ್ಜಿ ಅಲ್ಪಸಂಖ್ಯಾತರ ಶಾಲೆ, ಸಿದ್ದಾಪುರದಲ್ಲಿ ಕಾರ್ಮಿಕ ಶಾಲೆಯನ್ನು ಸ್ಥಾಪಿಸಲಾಗುವುದು ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಎಲ್ ಕೆ ಅತೀಕ್ ಮಾತನಾಡಿ.
ತಾನು ಮೂಲತಃ ಪಾವಗಡ ಪಟ್ಟಣವಾಸಿಯಾಗಿದ್ದು, ತಾನು ಭಾರತ ಆಡಳಿತ ಸೇವೆಯಲ್ಲಿ ವಿವಿಧ ಕಡೆ ಕಾರ್ಯನಿರ್ವಹಿಸಿದರೂ ಸಹ ಪಾವಗಡವನ್ನು ಮರೆತಿಲ್ಲವೆಂದರು.
ತನ್ನ ಹುಟ್ಟೂರಿಗೆ ಸೇವೆ ಮೂಲಕ ಕೊಡುಗೆಯೊಂದು ನೀಡಬೇಕು ಎನ್ನುವ ಹಂಬಲದಿಂದ ಪಾವಗಡದಲ್ಲಿ ಬೂನ್ಆಸ್ಪತ್ರೆ ಸ್ಥಾಪನೆ ಮಾಡಿರುವುದಾಗಿ ತಿಳಿಸಿದರು.
ತಾಲೂಕಿಗೆ ಆರೋಗ್ಯಸೇವೆಯ ಅವಶ್ಯಕತೆಯಿದ್ದು
ಬೆಂಗಳೂರಿನಂತಹ ಪಟ್ಟಣದಲ್ಲಿ ಸಿಗುವಂತಹ ಗುಣಮಟ್ಟದ ಚಿಕಿತ್ಸೆಯನ್ನು ಪಾವಗಡ ಪಟ್ಟಣದಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು
ಕಾರ್ಯಕ್ರಮ ಉದ್ದೇಶಿಸಿ ಬೆಂಗಳೂರು ಕಿದ್ವಾಯ್ ಆಸ್ಪತ್ರೆಯ ಎಚ್. ಓ. ಡಿನದೀಮುಲ್ ಹೂಡ ಮಾತನಾಡಿ.
ಆರೋಗ್ಯ ಶಿಖರಗಳು ದುಶ್ಚಟಗಳಿಂದ ದೂರವಿರಲು ಪ್ರೇರೇಪಿಸತ್ತದೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಜನರಿಗೆ ಹತ್ತಿರ ತರಲು ಸಹಾಯ ಮಾಡುತ್ತದೆ ಎಂದು. ಇದರಿಂದ ಆರೋಗ್ಯವಂತ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದರು.
ಶಿಕ್ಷಣ ಮತ್ತು ಉತ್ತಮ ಆರೋಗ್ಯ ದಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದರೆಇತ್ತೀಚೆಗೆ ತಂಬಾಕು ಮತ್ತು ತಂಬಾಕು ವಿವಿಧ ಪದಾರ್ಥಗಳ ಸೇವನೆಯಿಂದ ಬಾಯಿ ಕ್ಯಾನ್ಸರ್ ಬರುತ್ತಿದ್ದು ತಂಬಾಕು ಸೇವನೆಯನ್ನು ಕಡಿಮೆ ಮಾಡಬೇಕೆಂದು ತಿಳಿಸಿದರು.
ಈ ಶಿಬಿರದಿಂದಾಗಿ 2350 ಜನ ಸಾರ್ವಜನಿಕರು ಅನುಕೂಲವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಬೂನ್ಆಸ್ಪತ್ರೆ ಎಂ.ಡಿ ಬದ್ರು ಜಮಾ ಖಾನಂ, ನಿವೃತ್ತ ಆರ್ ಡಿ ಪಿ ಆರ್ ನಿರ್ದೇಶಕರಾದ ಬೂವನಹಳ್ಳಿ ನಾಗರಾಜ್.ಕಿದ್ವಾಯ್ ಆಸ್ಪತ್ರೆಯಸೀನಿಯರ್ ಮೆಡಿಕಲ್ ಆಫೀಸರ್, ಡಾಕ್ಟರ್ ಮಹಾಂತೇಶ್,
ತುಮಕೂರಿನ ಹೆಚ್ ಎಂ ಎಸ್ ಕಾಲೇಜಿನ ವಿಶ್ರಾಂತಿ ಪ್ರಾಂಶುಪಾಲ ರೆಹಮತುಲ್ಲಾ ಖಾನ್.ಇ. ಓ ಮಧುಸೂದನ್, ತಾಲ್ಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರವಿಕುಮಾರ್, ಮುಖಂಡ ಗುಮ್ಮಘಟ್ಟ ಶ್ರೀನಿವಾಸ್, ಮಾನಂ ವೆಂಕಟಸ್ವಾಮಿ, ಫೈಜ್ ಅತಿಕ್, ಸಲೀಮ್ ಉಲ್ಲಾ ಖಾನ್, ಮುಖ್ಯ ಶಿಕ್ಷಕ ಮಾರುತೇಶ್, ಶಿಕ್ಷಕಿ ರುದ್ರಮ, ಮುಬಾರಕ್ ಮುಂತಾದವರು ಹಾಜರಿದ್ದರು
ವರದಿ -ಶ್ರೀನಿವಾಸಲು ಎ
