IMG 20260102 WA0095

ಪಾವಗಡ : ವಿಷಾಹಾರ ಸೇವನೆ: 50ಕ್ಕೂ ಹೆಚ್ಚಿನ ಕುರಿಗಳ ಸಾವು….!

DISTRICT NEWS ತುಮಕೂರು

ವಿಷಾಹಾರ ಸೇವನೆ: 50ಕ್ಕೂ ಹೆಚ್ಚಿನ ಕುರಿಗಳ ಸಾವು.

ಪಾವಗಡ : ತಾಲ್ಲೂಕಿನ ಪೆನ್ನೊಬನ ಹಳ್ಳಿಯ ಗೊಲ್ಲರಹಟ್ಟಿ ಯಲ್ಲಿ ಗುರುವಾರ ವಿಷಪೂರಿತ ಮೇವು ತಿಂದು 50 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.

ಜಂಪಕ್ಕ ರಾಮಪ್ಪ ಎಂಬುವವರ ಸುಮಾರು 200 ಕುರಿಗಳು ಮೇಯಲು ಹೋದಾಗ ವಿಷಪೂರಿತ ಮೇವು ತಿಂದಿವೆ.ಸುಮಾರು 70ಕ್ಕೂ ಹೆಚ್ಚಿನ ಕುರಿಗಳು ಅಸ್ವಸ್ಥಗೊಂಡಿದ್ದು 50ಕ್ಕೂ ಹೆಚ್ಚಿನ ಕುರಿಗಳು ಸಾವನ್ನಪ್ಪಿವೆ.

ವಿಷಯ ತಿಳಿದ ನಂತರ ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ವರ್ಕೆರಪ್ಪ ಮತ್ತು ಸಿಬ್ಬಂದಿಗಳು ಗುರುವಾರ ಸಂಜೆ ಸ್ಥಳಕ್ಕೆ ಆಗಮಿಸಿ ಉಳಿದ ಕುರಿಗಳಿಗೆ ಚಿಕಿತ್ಸೆ ನೀಡಿ ಬದುಕಿಸುವಲ್ಲಿ ಪಶುವೈದ್ಯರು ಯಶಸ್ವಿಯಾಗಿದ್ದಾರೆ.

ಕುರಿಗಾಹಿ ಜಂಪಕ್ಕ ಘಟನೆ ಬಗ್ಗೆ ಪ್ರತಿಕ್ರಯಿಸಿ.
ತನ್ನ ಗಂಡನಿಗೆ ಆರೋಗ್ಯ ಸಮಸ್ಯೆ ಇದ್ದು, ತಮಗೆ ಯಾರು ಸಹ ಇಲ್ಲವೆಂದು, ತಾವು ಕುರಿಗಾಹಿಗಳಾಗಿ ಜೀವನ ನಡೆಸುತ್ತಿರುವುದಾಗಿ
ಕುರಿಗಳ ಸಾವಿನಿಂದ ತಮಗೆ ಹೆಚ್ಚಿನ ನಷ್ಟ ಉಂಟಾಗಿದ್ದು ಸರ್ಕಾರ ತಮಗೆ ಸಹಾಯ ಮಾಡಬೇಕೆಂದು ಅಳಲನ್ನು ತೋಡಿಕೊಂಡರು.

ಘಟನೆ ಬಗ್ಗೆ ತಾಲೂಕು ಪಶು ಇಲಾಖೆಯ ಸಹಾಯಕ ನಿರ್ದೇಶಕ ವರ್ಕೆರಪ್ಪ ಮಾತನಾಡಿ.ಜೋಳದ ಚಿಗುರು ಸಪ್ಪೆ ಯಲ್ಲಿ ಹೈಡ್ರೋಜನ್ ಸೈನೈಡ್ ಎಂಬ ವಿಷಕಾರಿ ವಸ್ತುವಿದ್ದು ಕುರಿಗಳು ಚಿಗುರು ಸಪ್ಪೆ ತಿಂದಿದ್ದರಿಂದ ಸಾವನ್ನಪ್ಪಿವೆ ಎಂದು ತಿಳಿಸಿದರು.
ಗುರುವಾರ ಸಂಜೆ ಮಾಹಿತಿ ತಿಳಿದ ಮೇಲೆ ಸ್ಥಳಕ್ಕೆ ಬಂದು ಉಳಿದ ಕುರಿಗಳಿಗೆ ಚಿಕಿತ್ಸೆ ನೀಡಲಾಯಿತು ಎಂದರು. ಸರ್ಕಾರದ ವತಿಯಿಂದ ಒಂದು ಕುರಿಗೆ ಏಳುವರೆ ಸಾವಿರ ರೂಪಾಯಿ ಪರಿಹಾರ ದೊರೆಯುವುದೆಂದು.

ಮರಣ ಹೊಂದಿದ ಕುರಿಗಳಿಗೆ ಪೋಸ್ಟ್ ಮಾರ್ಟಂ ನಿರ್ವಹಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಪಶು ಇಲಾಖೆ ಸಿಬ್ಬಂದಿಗಳಾದ ಡಾ. ಧರಣಿ, ಸತ್ ನಾರಾಯಣ ಶೆಟ್ಟಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದರು.

ವರದಿ : ಶ್ರೀನಿವಾಸಲು ಎ

Leave a Reply

Your email address will not be published. Required fields are marked *