*ಪುರವಂಕರ ಸಂಸ್ಥೆಯು ಮುಂಬೈ ಮತ್ತು ದಕ್ಷಿಣ ಭಾರತದಾದ್ಯಂತ 30ಕ್ಕೂ ಹೆಚ್ಚು ಯೋಜನೆಗಳ* ಪೋರ್ಟ್ಫೋಲಿಯೊವನ್ನು ಮುಂದಿನ 24 ತಿಂಗಳುಗಳಲ್ಲಿ 55,000 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಒಟ್ಟು ಅಭಿವೃದ್ಧಿ ಮೌಲ್ಯದೊಂದಿಗೆ ಯೋಜನೆಯನ್ನು ಲೋಕಾರ್ಪಣೆಗೊಳಿಸಲಿದೆ.
ವಿಶ್ವ ಆರ್ಥಿಕ ವೇದಿಕೆಯ 1t.org ಯೋಜನೆಯಡಿ 2030 ರ ವೇಳೆಗೆ 10 ಲಕ್ಷ ಮರಗಳನ್ನು ನೆಡುವ ಪ್ರತಿಜ್ಞೆಯೊಂದಿಗೆ ಸುಸ್ಥಿರತೆಯ ಬದ್ಧತೆ ಹೊಂದಿದೆ.
*Bengaluru, 25th March 2026* : ಭಾರತದ ಅತ್ಯಂತ ವಿಶ್ವಾಸಾರ್ಹ ಹಾಗೂ ಮೆಚ್ಚುಗೆ ಪಡೆದ ರಿಯಲ್ ಎಸ್ಟೇಟ್ ಡೆವಲಪರ್ಗಳಲ್ಲಿ ಒಂದಾದ ಪುರವಂಕರ ಲಿಮಿಟೆಡ್ (NSE: PURVA | BSE: 532891) ಮುಂದಿನ 24 ತಿಂಗಳುಗಳಲ್ಲಿ ಪ್ರಾಥಮಿಕವಾಗಿ ಮುಂಬೈ ಮತ್ತು ದಕ್ಷಿಣ ಭಾರತದಾದ್ಯಂತ ಸುಮಾರು 30 ಯೋಜನೆಗಳನ್ನು ಪ್ರಾರಂಭಿಸುವ ಯೋಜನೆಯನ್ನು ಇಂದು ಪ್ರಕಟಿಸಿದೆ. ಯೋಜಿತ ಪೈಪ್ಲೈನ್ ಸುಮಾರು 40 ಲಕ್ಷ ಚದರ ಅಡಿ ಅಭಿವೃದ್ಧಿಶೀಲ ಪ್ರದೇಶವನ್ನು ಒಳಗೊಂಡಿದೆ, 30 ಯೋಜನೆಗಳಲ್ಲಿ, ಹಲವು ಯೋಜನೆಗಳು ಈಗಾಗಲೇ ಅನುಮೋದನೆಗಾಗಿ ಕಾಯುತ್ತಿವೆ, ಉಳಿದವು ವಿನ್ಯಾಸ ಹಂತದಲ್ಲಿವೆ, ಈ ಯೋಜನೆಗಳಿಗೆ ಶೀಘ್ರದಲ್ಲೇ ಅನುಮೋದನೆ ಸಿಗಲಿದೆ. ಈ ಯೋಜನೆಯ ಅಂದಾಜು ಒಟ್ಟು ಅಭಿವೃದ್ಧಿ ಮೌಲ್ಯ (GDV) 55,000 ಕೋಟಿ ರೂಪಾಯಿಗಳಾಗಿದ್ದು ಇದು ಕಂಪನಿಯ ಬೆಳವಣಿಗೆಯ ಹಾದಿಯಲ್ಲಿ ಗಮನಾರ್ಹ ಹೆಜ್ಜೆಯಾಗಿದೆ.
ಮುಂದಿನ ಹಂತದ ವಿಸ್ತರಣೆಯ ಭಾಗವಾಗಿ ಈ ಯೋಜನೆ ಪ್ರಮುಖವಾಗಿದ್ದು ದಾಸ್ತಾನು ಮತ್ತು ಶಿಸ್ತುಬದ್ಧ ಬಂಡವಾಳ ಹಂಚಿಕೆಯಿಂದ ಪ್ರಮುಖ ನಗರಗಳ ಮಾರುಕಟ್ಟೆಗಳಲ್ಲಿ ಉತ್ತಮ-ಗುಣಮಟ್ಟದ ಹಾಗೂ ಉತ್ತಮ ಸ್ಥಳದಲ್ಲಿ ಅಭಿವೃದ್ಧಿಗಳ ಮೇಲೆ ಪುರವಂಕರ ತನ್ನ ಗಮನವನ್ನು ಕೇಂದ್ರೀಕರಿಸಿದೆ.
2026ರ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳುಗಳ (9MFY26) ಅಂತ್ಯಕ್ಕೆ ಕಂಪನಿಯು 3,859 ಕೋಟಿ ರೂಪಾಯಿಗಳ ಮುಂಗಡ ಮಾರಾಟ (pre-sales) ಮತ್ತು 3,045 ಕೋಟಿ ರೂಗಳ ಗ್ರಾಹಕರ ಸಂಗ್ರಹಣೆಯನ್ನು ವರದಿ ಮಾಡಿದೆ. ಇದು ಮಾರುಕಟ್ಟೆಯಲ್ಲಿನ ಸ್ಥಿರ ಬೇಡಿಕೆ ಮತ್ತು ಬಲಿಷ್ಠ ಕಾರ್ಯನಿರ್ವಹಣಾ ರೀತಿಯನ್ನು ಪ್ರತಿಬಿಂಬಿಸುತ್ತದೆ.
ಎಲ್ಲಾ ಪಾಲುದಾರರಿಗೆ ದೀರ್ಘಕಾಲೀನ ಮೌಲ್ಯವನ್ನು ಸೃಷ್ಟಿಸುವ ತನ್ನ ಗುರಿಗೆ ಅನುಗುಣವಾಗಿ ಕಂಪನಿಯ ಮುಂಬರುವ ಯೋಜನೆಗಳು ಆರ್ಥಿಕ ಚಟುವಟಿಕೆಗೆ ಅರ್ಥಪೂರ್ಣವಾಗಿ ಗಮನಾರ್ಹ ಕೊಡುಗೆ ನೀಡುವ ನಿರೀಕ್ಷೆಯಿದೆ.
ಈ ಯೋಜನೆಗಳು ವಾರ್ಷಿಕವಾಗಿ ಸುಮಾರು 80 ಲಕ್ಷ (8 ಮಿಲಿಯನ್) ಮಾನವ ದಿನಗಳ ನೇರ ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ. ರಿಯಲ್ ಎಸ್ಟೇಟ್ ವಲಯಕ್ಕೆ ಸಂಬಂಧಿಸಿದ 250ಕ್ಕೂ ಹೆಚ್ಚು ಪೂರಕ ಕೈಗಾರಿಕೆಗಳಿಗೆ ಉತ್ತೇಜನ ನೀಡಲಿದೆ.
ಕಳೆದ ಐದುದಶಕಗಳಲ್ಲಿ, ನಾವು ನಂಬಿಕೆ, ಪಾರದರ್ಶಕತೆ ಮತ್ತು ಅತ್ಯುತ್ತಮ ಸೇವಾ ವಿತರಣೆಯ ಭದ್ರ ಬುನಾದಿಯ ಮೇಲೆ ಪುರವಂಕರ ಸಂಸ್ಥೆಯನ್ನು ನಿರ್ಮಿಸಿದ್ದೇವೆ. ನಾವು ನಮ್ಮ ಬೆಳವಣಿಗೆಯ ಮುಂದಿನ ಹಂತಕ್ಕೆ ಪ್ರವೇಶಿಸುತ್ತಿದ್ದಂತೆ, ಬಲಿಷ್ಠ ಸಾಮರ್ಥ್ಯ, ವೃತ್ತಿಪರ ಹಾಗೂ ಉತ್ತಮ ಆಡಳಿತದ ಸಂಘಟನೆಯಿಂದ ಮುಂಬೈ ಹಾಗೂ ದಕ್ಷಿಣ ಭಾರತದಾದ್ಯಂತ ಉನ್ನತ ಗುಣಮಟ್ಟದ ಯೋಜನೆಗಳೊಂದಿಗೆ ನಾವು ಮುಂದಿನ ಹಂತಕ್ಕೆ ತೆರಳಲು ಸಜ್ಜಾಗಿದ್ದೇವೆ ಎಂದು *ಪುರವಂಕರ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ಆಶಿಶ್ ಪುರವಂಕರ ಅವರು ಹೇಳಿದ್ದಾರೆ* .
ವಿಭಿನ್ನ ಉತ್ಪನ್ನಗಳನ್ನು ರಚಿಸುವುದು, ಪ್ರಮುಖ ಸೂಕ್ಷ್ಮ ಮಾರುಕಟ್ಟೆಗಳಲ್ಲಿ ನಮ್ಮ ಅಸ್ತಿತ್ವವನ್ನು ಬಲಪಡಿಸುವುದು ನಮ್ಮ ಆದ್ಯತೆಯಾಗಿದೆ. ನಮ್ಮ ಗ್ರಾಹಕರು ಹಾಗೂ ಪಾಲುದಾರರಿಗೆ ದೀರ್ಘಕಾಲೀನ ಮೌಲ್ಯವನ್ನು ತಲುಪಿಸುವುದರ ಮೇಲೆ ನಮ್ಮ ಗಮನ ಕೇಂದ್ರೀಕೃತವಾಗಿದೆ. ಈ ಪೈಪ್ಲೈನ್ ನಮ್ಮ ಬೆಳವಣಿಗೆಯ ಮಹತ್ವಾಕಾಂಕ್ಷೆಗಳನ್ನು ಮಾತ್ರವಲ್ಲದೆ ಭಾರತದ ರಚನಾತ್ಮಕ ವಸತಿ ಬೇಡಿಕೆ ಮತ್ತು ನಗರ ಮಾರುಕಟ್ಟೆಗಳಲ್ಲಿ ಹೊರಹೊಮ್ಮುತ್ತಿರುವ ಅವಕಾಶಗಳಲ್ಲಿ ನಮ್ಮ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.
ನಾವು ಈ ಹಂತವನ್ನು ಪ್ರಬಲವಾದ, ಹೆಚ್ಚು ಚುರುಕಾದ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಸ್ಪಷ್ಟವಾದ ಅನುಷ್ಠಾನ ಮಾರ್ಗಸೂಚಿಯೊಂದಿಗೆ ಪ್ರವೇಶಿಸುತ್ತಿದ್ದೇವೆ. ನಮ್ಮ ಅಭಿವೃದ್ಧಿಗಳನ್ನು ರಿಯಲ್ ಎಸ್ಟೇಟ್ ಯೋಜನೆಗಳಾಗಿ ಮಾತ್ರವಲ್ಲದೆ, ವಿಕಸನಗೊಳ್ಳುತ್ತಿರುವ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸುವ ಸಮಗ್ರ ಸಮುದಾಯಗಳಿಗಾಗಿ ವಿನ್ಯಾಸಗೊಳಿಸುತ್ತಿದ್ದೇವೆ ಎಂದು *ಪುರವಂಕರ ಲಿಮಿಟೆಡ್ನ ದಕ್ಷಿಣದ ಸಿಇಒ ಮಲ್ಲಣ್ಣ ಸಾಸಲು ತಿಳಿಸಿದ್ದಾರೆ* .
ಇದೇ ವೇಳೆ ಆರ್ಥಿಕತೆಯ ಬೆಳವಣಿಗೆಯಲ್ಲಿ ವಹಿಸಿರುವ ವಿಶಾಲ ಪಾತ್ರವನ್ನು ನಾವು ಗುರುತಿಸಿಕೊಂಡಿದ್ದೇವೆ. ಈ ಅಭಿವೃದ್ಧಿಯ ಪ್ರಮಾಣವು ಉತ್ತಮ ಜೀವನೋಪಾಯವನ್ನು ಸೃಷ್ಟಿಸುತ್ತದೆ, ಕೈಗಾರಿಕೆಗಳ ವಿಶಾಲ ಪರಿಸರ ವ್ಯವಸ್ಥೆಗೆ ಅನುವು ಮಾಡಿಕೊಡುತ್ತದೆ. ನಗರ ಬೆಳವಣಿಗೆಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುತ್ತದೆ. ನಮ್ಮ ಅರಣ್ಯೀಕರಣ ಪ್ರತಿಜ್ಞೆ ಮತ್ತು ಸಂಪನ್ಮೂಲ ದಕ್ಷತೆಯ ಮೇಲೆ ಕೇಂದ್ರೀಕರಿಸುವುದು ಸೇರಿದಂತೆ ನಮ್ಮ ಸುಸ್ಥಿರತೆಯ ಯೋಜನಗಳು ಭವಿಷ್ಯಕ್ಕಾಗಿ ನಾವು ಹೇಗೆ ನಿರ್ಮಿಸುತ್ತೇವೆ ಎಂಬುದರ ಅವಿಭಾಜ್ಯ ಅಂಗವಾಗಿದೆ ಎಂದಿದ್ದಾರೆ.
ಬಲಿಷ್ಠ ಪೈಪ್ಲೈನ್, ಸುಧಾರಿತ ಕಾರ್ಯಾಚರಣೆಯ ಮಾಪನಗಳು ಮತ್ತು ಬೆಳವಣಿಗೆಯ ಕಡೆಗಿನ ಶಿಸ್ತುಬದ್ಧ ವಿಧಾನದೊಂದಿಗೆ, ಪುರವಂಕರ ಸಂಸ್ಥೆಯು ಬಲವಾದ ದೂರದೃಷ್ಟಿತ್ವ ಮತ್ತು ಆತ್ಮವಿಶ್ವಾಸದೊಂದಿಗೆ ತನ್ನ ಮುಂದಿನ ಹಂತವನ್ನುಪ್ರವೇಶಿಸುತ್ತಿದೆ.
ನಮ್ಮ ಸುವರ್ಣ ಮಹೋತ್ಸವದ ವರ್ಷದ ಭಾಗವಾಗಿ, ನಾವು ನಮ್ಮ ಸುಸ್ಥಿರತೆಯ ಬದ್ಧತೆಗಳನ್ನು ಇನ್ನಷ್ಟು ಬಲಪಡಿಸಿದ್ದೇವೆ. ವಿಶ್ವ ಆರ್ಥಿಕ ವೇದಿಕೆಯ (WEF) ‘1t.org’ ಜಾಗತಿಕ ಯೋಜನೆ ಅಡಿಯಲ್ಲಿ 2030 ರ ವೇಳೆಗೆ 10 ಲಕ್ಷ ಮರಗಳನ್ನು ನೆಡುವ ನಮ್ಮ ಪ್ರತಿಜ್ಞೆಯಂತೆ ನಾವು ಈ ಬದ್ಧತೆಯನ್ನು 29 ಮಾರ್ಚ್ 2026 ರಂದು ನಡೆಯಲಿರುವ ‘ಪುರವಂಕರ 10ಸಾವಿರ ರನ್’ ಮೂಲಕ ನೆರವೇರಿಸುತ್ತೇವೆ, ಈ ಸಂದರ್ಭದಲ್ಲಿ 10,000 ಮರಗಳನ್ನು ನೆಡಲಾಗುವುದು.
ಇದಕ್ಕೆ ಪೂರಕವಾಗಿ ನೀರು ಸಂರಕ್ಷಣೆ, ಹಸಿರು ಕಟ್ಟಡ ಪದ್ಧತಿಗಳು ಮತ್ತು ಎಲ್ಲಾ ಯೋಜನೆಗಳಲ್ಲಿ ಪರಿಸರ ಜವಾಬ್ದಾರಿಯುತ ಅಭಿವೃದ್ಧಿಯ ಮೇಲೆ ನಿರಂತರ ಗಮನಹರಿಸಲಾಗುತ್ತಿದೆ.ಉತ್ತಮ ಗುಣಮಟ್ಟದ ಅಭಿವೃದ್ಧಿಗಳು, ಕಾರ್ಯಾಚರಣೆಯ ಶ್ರೇಷ್ಠತೆ ಮತ್ತು ಸುಸ್ಥಿರತೆ ಹಾಗೂ ಪಾಲುದಾರರ ವಿಶ್ವಾಸದ ಮೇಲೆ ನಿರಂತರ ಗಮನಹರಿಸುವ ಮೂಲಕ ದೀರ್ಘಕಾಲೀನ ಮೌಲ್ಯವನ್ನು ನೀಡಲು ಕಂಪನಿಯು ಬದ್ಧವಾಗಿದೆ.
