IMG 20260511 WA0012

ಪಾವಗಡ: ತುಂಗಭದ್ರ ನೀರು ಸರಬರಾಜು ಸ್ಥಗಿತ….!

DISTRICT NEWS ತುಮಕೂರು

ಪಾವಗಡಕ್ಕೆ ತುಂಗಭದ್ರ ನೀರು ಸರಬರಾಜು ಸ್ಥಗಿತ. ರೈತರ ಪ್ರತಿಭಟನೆ.

ಪಾವಗಡ: ಬೇಸಿಗೆಯ ಹಿನ್ನೆಲೆ ಕೆರೆ ಕಾಲುವೆಗಳು ಬತ್ತಿ ಹೋಗಿದ್ದು, ಕುಡಿಯಲು ಹಾಗೂ ದನ ಕರುಗಳಿಗೆ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ತಿಳಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಶೀಲ್ದಾರ್ ಪ್ರಸಾದ್ ರವರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.

ತಾಲ್ಲೂಕಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದಾಗಿ ತಾಲೂಕಿನ ರೈತ ಸಂಘ ಇತರೆ ಸಂಘ ಸಂಸ್ಥೆ,ಗಳು ರಾಜಕೀಯ ಪಕ್ಷಗಳು ಒಂದಾಗಿ ಸುದೀರ್ಘವಾಗಿ 33 ದಿನಗಳ ಕಾಲ ಹೋರಾಟದ ನಡೆಸಿದರ ಹಿನ್ನೆಲೆ ತಾಲೂಕಿಗೆ 1 ಟಿ. ಎಮ್. ಸಿ ತುಂಗಭದ್ರ ಕುಡಿಯುವ ನೀರು ಸರಬರಾಜು ಆಗುತ್ತಿದ್ದು.

15 ದಿನಗಳಿಂದ ತಾಲ್ಲೂಕಿಗೆ ತುಂಗಭದ್ರಾ ಕುಡಿಯುವ ನೀರು ಸ್ಥಗಿತಗೊಂಡಿದ್ದು ಹಿನ್ನೆಲೆ ಬಹುತೇಕ ಹಳ್ಳಿಗಳಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಸಿಗದೇ ಬೋರ್ವೆಲ್ ಗಳಿಗೆ ಹೋಗಿ ನೀರು ತರುವ ಪರಿಸ್ಥಿತಿ ಉಂಟಾಗಿದೆ ಎಂದರು.

ಸಕಾಲಕ್ಕೆ ಮಳೆ ಬಾರದ ಹಿನ್ನೆಲೆ ತಾಲ್ಲೂಕಿನಲ್ಲಿರುವ ಕೆರೆಕಟ್ಟೆಗಳು ಬತ್ತಿ ಹೋಗಿ ರೈತರು ಮತ್ತು ಜಾನುವಾರಗಳಿಗೆ ಸಮಸ್ಯೆಯಾಗಿದೆ ಎಂದರು.

ತಾಲ್ಲೂಕಿನ 34 ಪಂಚಾಯಿತಿ ಗಳಲ್ಲಿ ಕೊರೆಯಿಸಿರುವ ಬೋರ್‌ವೆಲ್‌ಗಳು ಸಾವಿರ ಅಡಿಗಳು ಕೊರೆಯಿಸಿದರೂ ನೀರು ಸಿಗದ ಪರಿಸ್ಥಿತಿ ಉಂಟಾಗಿದೆ ಎಂದು.

ತಾಲ್ಲೂಕಿನ 4 ಹೋಬಳಿ ಗಳಲ್ಲಿ ಬಹುತೇಕ ಕಡೆ ಬೋರ್ವೆಲ್ ಗಳು ಒಣಗಿ ಹೋಗಿದ್ದು ರೈತರು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು. ಈ ಕೂಡಲೇ ಶಾಸಕರು ನೀರಿನ ತೀವ್ರತೆಯ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿ ನೀರಿನ ಸಮಸ್ಯೆ ಹೋಗಲಾಡಿಸಬೇಕು ಎಂದರು.

ತಾಲ್ಲೂಕಿಗೆ ತುಂಗಭದ್ರ ಡ್ಯಾಮ್ ನಿಂದ
1 ಟಿ.ಎಂ.ಸಿ ನೀರು ಸರಬರಾಜು ಮಾಡದ ಪಕ್ಷದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಎಲ್ಲಾ ಪ್ರಗತಿಪರ ಸಂಘಟನೆಗಳು ನಿರಂತರ ದೊಡ್ಡ ಮಟ್ಟದಲ್ಲಿ ಧರಣಿಯನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆಯನ್ನು ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಶಿವು ಮಾತನಾಡಿ.
ಗ್ರಾಮಗಳಲ್ಲಿ ವಾಟರ್ ಮ್ಯಾನ್ ಗಳು ಸರಿಯಾದ ಸಮಯಕ್ಕೆ ನೀರು ಬಿಡುತ್ತಿಲ್ಲವೆಂಬ ಆರೋಪ ಕೇಳಿ ಬಂದಿದ್ದು, ಕೆಲ ಗ್ರಾಮಗಳಲ್ಲಿ ವಾಟರ್ ಮ್ಯಾನ್ ಮತ್ತು ಸಾರ್ವಜನಿಕರ ನಡುವೆ ಗಲಾಟೆಗಳು ಸಹ ಆಗಿರುವ ನಿದರ್ಶನಗಳು ತಿಳಿದು ಬಂದಿದೆ ಎಂದು.

ಈ ಬಗ್ಗೆ ತಾಲೂಕು ಪಂಚಾಯಿತಿಯ ಇ ಓ ಮತ್ತು ಪಿಡಿಒಗಳು ಗಮನಹರಿಸಬೇಕೆಂದು ತಿಳಿಸಿದರು.

ತಾಲೂಕಿನ ನಾಗಲಮಡಿಕೆ ಡ್ಯಾಮ್ ಗೆ ಪಕ್ಕದ ಆಂಧ್ರದ ಶಾಸಕ ಮತ್ತು ಸಚಿವರ ಜೊತೆ ಶಾಸಕ ಹೆಚ್ ವಿ ವೆಂಕಟೇಶ್ ಮಾತುಕತೆ ನಡೆಸಿ ಉತ್ತರ ಪಿನಾಕಿನಿಗೆ ನೀರನ್ನು ಪೂರೈಕೆ ಮಾಡಿ ಆ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು

ಈ ಸಂದರ್ಭದಲ್ಲಿ ರೈತ ಸಂಘದ ಸದಸ್ಯರಾದ
ಮೂರ್ತಿ, ಚಿತ್ತಯ್ಯ, ಗುಡಿ ಪಲ್ಲಪ್ಪ, ರಾಮಾಂಜಿ, ಸುರೇಶ್, ನಾಗೇಂದ್ರಪ್ಪ, ಲಲಿತಮ್ಮ, ಆಂಜನೇಯ, ದುರ್ಗಪ್ಪ, ಸಂಜೀವಪ್ಪ, ನಡಿ ಪನ್ನ, ಹನುಮಂತರಾಯ, ನಾಗೇಂದ್ರ, ಸದಾಶಿವಪ್ಪ,, ಬಸವರಾಜು, ನಾಗರಾಜ್ ಮುಂತಾದವರು ಹಾಜರಿದ್ದರು.

ವರದಿ: ಶ್ರೀನಿವಾಸಲು. ಎ

Leave a Reply

Your email address will not be published. Required fields are marked *