ಬಸ್ ಹತ್ತುವಾಗ ಚಿನ್ನಾಭರಣ ಕಳ್ಳತನ.
ಪಾವಗಡ:: ಪಟ್ಟಣದ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್ ಹತ್ತುವ ವೇಳೆ ಜನಸಂದಣಿಯ ಲಾಭ ಪಡೆದ ಕಳ್ಳರು ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ರೂ. 4,98,000 ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾದ ಘಟನೆ ಆಗಸ್ಟ್ 22ರಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಶೈಲಾಪುರ ಗ್ರಾಮದ ಅನುಸೂಯಮ್ಮ ಚಿನ್ನಾಭರಣ ಕಳೆದುಕೊಂಡವರು.
ಅನುಸೂಯಮ್ಮ ಅವರು ಊರಿನಲ್ಲಿ ಮನೆ ಕಟ್ಟಲು ಮತ್ತು ತನ್ನ ಮಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಂಗಾರದ ಒಡವೆಗಳನ್ನು ಬ್ಯಾಂಕ್‌ನಲ್ಲಿಟ್ಟು ಸಾಲ ಪಡೆಯಬೇಕೆಂದು.
ಅನುಸೂಯಮ್ಮನ ಮಗಳು ಸಿದ್ದಮ್ಮ ಬೆಂಗಳೂರಿಂದ ಪಾವಗಡಕ್ಕೆ ಬರುವುದಾಗಿ ಹೇಳಿದ್ದು ತನ್ನ ತಾಯಿ ಅನುಸೂಯಮ್ಮನನ್ನು ಶೈಲಾಪುರದಿಂದ ಪಾವಗಡಕ್ಕೆ ಬರಲು ತಿಳಿಸಿದರು.
ಆಗಸ್ಟ್ 22ರಂದು ಅನಸೂಯಮ್ಮ ಪಾವಗಡಕ್ಕೆ ಬಂದಿದ್ದರು. ಹಾಗೂ ಒಡವೆಗಳನ್ನು ತಂದಿರುವ ವಿಚಾರವನ್ನು ಮಗಳು ಸಿದ್ದಮ್ಮನಿಗೆ ತಿಳಿಸಿದ್ದರು.
ಸಿದ್ದಮ್ಮ ಅವರು ನಾನು ನಿಡಗಲ್‌ಗೆ ಹೋಗಿ ಬರುತ್ತೇನೆ, ನೀನು ಬೆಂಗಳೂರಿಗೆ ಹೋಗು” ಎಂದು ತಾಯಿಗೆ ಹೇಳಿದ್ದರು. ಬೆಂಗಳೂರಿಗೆ ಹೋಗಲು ಬಸ್ ಹತ್ತುವಾಗ ಜನಜಂಗುಳಿ ಇದ್ದಿದ್ದರಿಂದ ಯಾರೋ ಕಳ್ಳರು ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಬಂಗಾರದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ತಾಯಿ-ಮಗಳು ಎಷ್ಟೇ ಹುಡುಕಾಡಿದರೂ ಬ್ಯಾಗ್ ಪತ್ತೆಯಾಗದ ಕಾರಣ ಸೆಪ್ಟೆಂಬರ್ 4ರಂದು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ
