ಅನ್ನ ಸೇವಾ” ಮೊಬೈಲ್ ಆ್ಯಪ್‍ಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದ ಸಚಿವ ರಿಜ್ವಾನ್ ಅರ್ಷದ್
ಬೆಂಗಳೂರು, ಅಕ್ಟೋಬರ್ 01 (ಕರ್ನಾಟಕ ವಾರ್ತೆ) : ಪಡಿತರ ಚೀಟಿಯ ಫಲಾನುಭವಿಗಳು ಇ-ಕೆವೈಸಿ ಯನ್ನು ಅಪ್‍ಡೇಟ್ ಮಾಡಿಸಲು ಅನುಕೂಲವಾಗುವಂತೆ, ಹಾಗೂ ನ್ಯಾಯಬೆಲೆ ಅಂಗಡಿ ಮುಂದೆ ಸರತಿ ಸಾಲ್ಲಿನಲ್ಲಿ ನಿಲ್ಲುವುದನ್ನು ತಪ್ಪಿಸುವ ಸಲುವಾಗಿ ನೂತನವಾಗಿ ಅಭಿವೃದ್ಧಿಪಡಿಸಲಾಗಿರುವ “ಅನ್ನ ಸೇವಾ” ಮೊಬೈಲ್ ಆ್ಯಪ್‍ಗೆ ಮಾನ್ಯ ಆಹಾರ ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಚಿವರಾದ ಶ್ರೀ ರಿಜ್ವಾನ್ ಅರ್ಷದ್ ಅವgಸ್ತ್ರಿಂದು ಪ್ರಾಯೋಗಿಕವಾಗಿ ಚಾಲನೆ ನೀಡಿದರು.
ಶಿವಾಜಿ ನಗರದ ರಾಜೀವ್ ಗಾಂಧಿ ಕಾಲೋನಿಯಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಅನ್ನ ಸೇವಾ” ಮೊಬೈಲ್ ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದ ಅವರು. ಪಡಿತರ ಫಲಾನುಭವಿಗಳು ಸರಳ, ಅನುಕೂಲಕರ ಹಾಗೂ ಸುಲಭವಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ತಾವೇ ಖುದ್ದಾಗಿ ಮೊಬೈಲ್ ಆ್ಯಪ್ ಮೂಲಕ ಡೌನ್ ಲೋಡ್ ಮಾಡಿಕೊಂಡು ಅಕ್ಟೋಬರ್ 20ರ ವರೆಗೆ ಇ-ಕೆವೈಸಿ ಅಪ್‍ಡೇಟ್ ಮಾಡಲು ಅವಧಿಯನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮೀಣ, ಉಡುಪಿ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದ್ದು, ಇನ್ನುಳಿದ ಜಿಲ್ಲೆಗಳಿಗೆ 15-20 ದಿನಗಳೊಳಗಾಗಿ ಜಾರಿ ಮಾಡಲಾಗುವುದು. ಸರ್ಕಾರವು ನಾಲ್ಕುವರೆ ಕೋಟಿ ಬಡಜನರ ಆಗುತ್ತಿರುವ ತೊಂದರೆ ಹಾಗೂ ಸಮಯದ ಮಹತ್ವವನ್ನು ಗಮನದಲ್ಲಿರಿಸಿಕೊಂಡು ಆ ಬಗ್ಗೆ ಚಿಂತನೆ ಮಾಡಿ ಈ ಆಪ್‍ನ್ನು ಜಾರಿಮಾಡಿದೆ. ಪ್ರತಿಯೊಬ್ಬ ಫಲಾನುಭವಿಗಳು ಈ ಆ್ಯಪ್‍ನ ಉಪಯೋಗ ಪಡೆದುಕೊಳ್ಳಬೇಕೆಂದರು. ರಾಜ್ಯದಲ್ಲಿ ಈವರೆಗೆ ಒಟ್ಟು 3,82,362 ಫಲಾನುಭವಿಗಳು ಒಂದು ಬಾರಿಯೂ ಇ-ಕೆವೈಸಿ ಮಾಡಿರುವುದಿಲ್ಲ ಆದ್ದರಿಂದ ಎಲ್ಲಾರೂ ತಪ್ಪದೇ ಇ-ಕೆವೈಸಿ ಮಾಡಿಕೊಳ್ಳುವಂತೆ ತಿಳಿಸಿದರು
