IMG 20201003 WA0070

ಮಾಸ್ಕ್ ದಂಡ: ಜನರ ಲೂಟಿಗೆ ನಿಂತ ಸರ್ಕಾರ….!

STATE Genaral

 

*ಮಾಸ್ಕ್ ಧರಿಸದಿದ್ದರೆ 1 ಸಾವಿರ ದಂಡ- ಜನರ ಲೂಟಿಗೆ ನಿಂತ ಸರ್ಕಾರ*

ಕೊರೋನಾ ಸೋಂಕು ಹರಡುವುದನ್ನು ತಡೆಯಲು ಮಾಸ್ಕ್ ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿ, ಮಾಸ್ಕ್ ಹಾಕದವರಿಗೆ ₹ 200 ದಂಡ ನಿಗದಿ ಮಾಡಿತ್ತು. ಯಾವಾಗ ದಂಡದ ರೂಪದಲ್ಲಿ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಹರಿದ ತಕ್ಷಣ ಹಣದ ಆಸೆಗೆ ಬಿದ್ದ ಸರ್ಕಾರ ನಗರ ಭಾಗದಲ್ಲಿ ದಂಡದ ಮೊತ್ತವನ್ನು ₹ 1 ಸಾವಿರ, ಗ್ರಾಮೀಣ ಭಾಗದಲ್ಲಿ ₹ 500 ಹೆಚ್ಚಳ ಮಾಡಿ ಜನ ಸಾಮಾನ್ಯರ ಲೂಟಿಗೆ ಹೊರಟಿದೆ.

ದಂಡ ಹಾಕಲು ಪ್ರಾರಂಭಿಸಿದ ಜುಲೈ ತಿಂಗಳೊಂದರಲ್ಲೇ ಬೆಂಗಳೂರು ನಗರದಲ್ಲಿ ಸುಮಾರು *₹ 58 ಲಕ್ಷ* ದಂಡ ಸಂಗ್ರಹವಾಗಿದೆ. *ಹಾಯ್ದುಕೊಂಡು ತಿನ್ನುವವನ ಬಳಿ ಕಿತ್ಕೊಂಡು ತಿಂದರಂತೆ ಎನ್ನುವ ಗಾದೆ ಮಾತಿನಂತೆ ಜನರ ನೆರವಿಗೆ ನಿಲ್ಲಬೇಕಾಗಿದ್ದ ಸರ್ಕಾರವೇ ಹಗಲು ದರೋಡೆಗೆ ನಿಂತಿದೆ.* ಇದುವರೆಗೂ ಒಂದೇ ಒಂದು ಮಾಸ್ಕ್ ವಿತರಿಸದ ಸರ್ಕಾರ *ಹೆದರಿಸಿ, ಬೆದರಿಸಿ ಜನರ ಬಳಿ ಕೋಟ್ಯಂತರ ರೂಪಾಯಿ ನುಂಗಿ ನೀರು ಕುಡಿಯುತ್ತಿದೆ.*

ಬಿಬಿಎಂಪಿ ನೇಮಿಸಿರುವ ಮಾರ್ಷಲ್‌ಗಳು ಜನರ ಹತ್ತಿರ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. *ದಂಡದ ರುಚಿ ಹತ್ತಿರುವ ಬಿಬಿಎಂಪಿ* ಮತ್ತಷ್ಟು ಮಾರ್ಷಲ್‌ಗಳನ್ನು ನೇಮಿಸಿಕೊಂಡು ಜನರನ್ನು ಹೆದರಿಸುತ್ತಿದೆಯೇ ಹೊರತು, ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ.
*ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರನ್ನು ಶೋಷಣೆ ಮಾಡಲು ಈ ಕಾನೂನು ದಾರಿ ಮಾಡಿಕೊಟ್ಟಿದೆ.*

ಗ್ರಾಮೀಣ ಭಾಗದಲ್ಲಿ ಒಬ್ಬ ವ್ಯಕ್ತಿ ಕೆಲಸಕ್ಕೆ ಹೋದರೆ ಅವನ ದಿನದ ಆದಾಯ ₹ 350 ರಿಂದ 400 ಇದೆ. ಇಂತಹ ಕಡೆ ₹500 ದಂಡ ವಿಧಿಸುವ ಮೂಲಕ ಪಿಡಿಒಗಳು ಲೂಟಿ ಮಾಡಲು ಸರ್ಕಾರ ಅವಕಾಶ ಮಾಡಿಕೊಟ್ಟಂತಾಗಿದೆ.

ನಿಯಂತ್ರಣಕ್ಕೆ ಸಿಗದೆ ದಿನದಿಂದ‌‌ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಸೋಂಕು ತಡೆಗಟ್ಟಲು ಮಾಸ್ಕ್ ಕಡ್ಡಾಯ ಆದರೆ *ಗೂಂಡಾಗಳ ರೀತಿ ಹೆದರಿಸಿ, ಹಣ ಸುಲಿಗೆ ಮಾಡಿ ಅರಿವು ಮೂಡಿಸುವ ಅಗತ್ಯವಿಲ್ಲ*. ಲೂಟಿಗೆ ನಿಂತಿರುವ ಮಾರ್ಷಲ್‌ಗಳಿಗೆ ಆಯುಕ್ತ ಮಂಜುನಾಥ್ ಪ್ರಸಾದ್ ಸೂಕ್ತ ಸೂಚನೆ ನೀಡಬೇಕು ಹಾಗೂ ಕೂಡಲೇ ದಂಡದ ಮೊತ್ತವನ್ನು ಕಡಿಮೆ ಮಾಡಬೇಕು ಹಾಗೂ ಉಚಿತವಾಗಿ ಸರ್ಕಾರದಿಂದ ಮಾಸ್ಕ್ ವಿತರಿಸಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.