18 10 20 Relief work SRKS PVG 1

ಪಾವಗಡ: ನೆರೆಸಂತ್ರಸ್ಥರ ನೆರವಿಗೆ ರಾಮಕೃಷ್ಣ ಸೇವಾಶ್ರಮ…!

DISTRICT NEWS ತುಮಕೂರು

ಕಲ್ಯಾಣ ಕರ್ನಾಟಕ ದಲ್ಲಿ ಉಂಟಾಗಿರುವ ಪ್ರವಾಹ  ಪರಿಸ್ಥಿತಿ ಯಿಂದ  ಸಂಕಷ್ಟಕ್ಕೆ  ಸಿಲುಕಿರುವ ಜನರ ನೆರವಿಗೆ ಬಂದಿದೆ.ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಪೌಂಡೇಶನ್.

ಮಸ್ಕಿ, ಹುಕ್ಕೇರಿ, ಯಾದಗಿರಿ, ಜೇವರ್ಗಿ ಮತ್ತು ರಾಯಚೂರು ಪ್ರದೇಶಗಳಲ್ಲಿನ ಪ್ರವಾಹ ಪೀಡಿತರಿಗೆ ಎಲ್ಲ ರೀತಿಯ ವಸ್ತುಗಳನ್ನು ಸಿದ್ದಪಡಿಸುತ್ತಿದ್ದ ದೃಷ್ಯ ನಿಜಕ್ಕೂ ಆಶ್ಚರ್ಯಕರವಾಗಿತ್ತು. ಸೀರೆ, ಪಂಚೆ, ಟವೆಲ್, ಹೊದಿಕೆ, ಚಾಪೆ, ಸಕ್ಕರೆ, ಅಕ್ಕಿ ಹೀಗೆ ಎಲ್ಲ ಅಡುಗೆ ಸಾಮಾನುಗಳ ಚೀಲಗಳನ್ನು ಸಿದ್ದಪಡಿಸುತ್ತಿದ್ದಾರೆ.

18 10 20 Relief work SRKS PVG

ಇದು ಶ್ರೀಮತಿ ಸುಧಾಮೂರ್ತಿ ರವರ ಹೃದಯ ವೈಶಾಲ್ಯದ ಸೇವೆ ಎನ್ನಬಹುದು. ಇದರೊಂದಿಗೆ ಈ ಕಾರ್ಯ ಯೋಜನೆಗಳನ್ನು ಎಲ್ಲ ರೀತಿಯಲ್ಲಿ ಉಸ್ತುವಾರಿ ತೆಗೆದುಕೊಂಡು ನಿರಂತರವಾಗಿ ಕಾರ್ಯ ನಡೆಸುತ್ತಿರುವ ಪೂಜ್ಯ ಸ್ವಾಮಿ ಜಪಾನಂದಜೀರವರು ಹಾಗೂ ಶ್ರೀರಾಮಕೃಷ್ಣ ಸೇವಾಶ್ರಮ “ಮಾನವನ ಸೇವೆಯೇ ಮಾಧವನ ಸೇವೆ” ಎಂಬ ದಿವ್ಯ ವಾಕ್ಯದಂತೆ ನಿರಂತರವಾಗಿ ಸೇವಾ ಯುಜ್ಞವನ್ನು ನಡೆಸುತ್ತಿರುವುದು ನಿಜಕ್ಕೂ ಸ್ವಾಮಿ ವಿವೇಕಾನಂದರ ಕನಸಿನ ಭಾರತ ನನಸಾಗುವುದರಲ್ಲಿ ಸಂದೇಹವಿಲ್ಲವೆಂದು ಅರಿವಾಗುತ್ತದೆ. ಈ ನಿಟ್ಟಿನಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮ, ಪಾವಗಡ ಕಳೆದ ಎಂಟು ತಿಂಗಳುಗಳಿಂದ ಕೋವಿಡ್ ನಿಯಂತ್ರಣಕ್ಕಾಗಿ ಅಹರ್ನಿಷಿ ನಡೆಸುತ್ತಿರುವ ನಾನಾ ರೀತಿಯ ಜನಪರ ಕಾರ್ಯಕ್ರಮಗಳೊಂದಿಗೆ ಇತ್ತೀಚಿನ ಭೀಕರ ಪ್ರವಾಹದ ಕಾರಣದಿಂದ ಸಾವಿರಾರು ಜನರಿಗೆ ಸಾಂತ್ವನ ನೀಡುವಂತಹ ಸಮಯೋಚಿತ ಕೆಲಸಗಳನ್ನೂ ಸಹ ಕೈಗೊಂಡಿರುವುದು ನಿಜಕ್ಕೂ ಈ ಭಕ್ತರ ಹಾಗೂ ತಂಡದ ಸದಸ್ಯರ ಮನಸ್ಥೈರ್ಯ ಹಾಗೂ ಧೈರ್ಯಕ್ಕೆ ಸಾಕ್ಷಿಯಾಗಿದೆ ಎನ್ನಬಹುದು. ಮಂಗಳವಾರ ಮಸ್ಕಿ ಪ್ರದೇಶಕ್ಕೆ ತೆರಳಲಿರುವ ಸ್ವಾಮೀಜಿಯವರು ಈ ಎಲ್ಲ ಪರಿಹಾರ ಸಾಮಗ್ರಿಗಳನ್ನು ಅಲ್ಲಿಯ ಆಡಳಿತ ವರ್ಗದ ಸಹಕಾರದೊಂದಿಗೆ ವಿತರಿಸಲು ಏರ್ಪಾಡು ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಇಂದು ರಾಯಚೂರಿನ ಶಕ್ತಿನಗರ ಪ್ರದೇಶದಲ್ಲಿ ಉಂಟಾಗಿರುವ ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ಶಕ್ತಿನಗರದ ಜನರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಈ ಯೋಜನೆ ಇನ್ಫೋಸಿಸ್ ಫೌಂಡೇಷನ್ ಹಾಗೂ ಶ್ರೀರಾಮಕೃಷ್ಣ ಸೇವಾಶ್ರಮದ ವತಿಯಿಂದ ನಡೆಯುತ್ತಿದ್ದು ಸ್ಥಳೀಯ ಮುಖಂಡರಾದ ಶ್ರೀ ವಿಜಯಕುಮಾರ್ ಪಾಟೀಲ್, ಮಾಜಿ ಅಧ್ಯಕ್ಷರು, ರಾಯಚೂರು ವಕೀಲರ ಸಂಘ, ನಿರ್ದೇಶಕರು, ಸಹಕಾರ ಸಂಘ, ಕರ್ನಾಟಕ ಸರ್ಕಾರ ಮತ್ತು ಕಾರ್ಯದರ್ಶಿಗಳು, ಇಂಡಿಯನ್ ರೆಡ್ ಕ್ರಾಸ್, ಕರ್ನಾಟಕ ಇವರ ಸಂಯೋಜನೆಯಲ್ಲಿ ವಿತರಣೆಯಾಗುತ್ತಿದೆ.