IMG 20201029 WA0006

R R ನಗರ ಉಪ ಚುನಾವಣೆ ಗೆ ಸಜ್ಜಾದ ಬಿಬಿಎಂಪಿ…!

STATE Genaral

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 4,62,236 ಮತದಾರರಿದ್ದು,  16 ಅಭ್ಯರ್ಥಿಗಳು‌  ಚುನಾವಣಾ ಕಣದಲ್ಲಿ  

ಬೆಂಗಳೂರು : ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಿದ್ದತೆ ಗಳ ಬಗ್ಗೆ ಮಾನ್ಯ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಆಯುಕ್ತರು ರವರು ಇಂದು ಬಿಬಿಎಂಪಿ ಕೇಂದ್ರ ಕಛೇರಿಯ ಮಾಧ್ಯಮ ಗೋಷ್ಠಿ  ಯಲ್ಲಿ ಮಾತನಾಡಿದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ನವೆಂಬರ್ 3 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ನವೆಂಬರ್ 10 ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ನವೆಂಬರ್ 12ಕ್ಕೆ ಚುನಾವಣೆ ಪ್ರಕ್ರಿಯೆ ಮುಗಿಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಆಯುಕ್ತರು ರವರು ತಿಳಿಸಿದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 4,62,236 ಮತದಾರರಿದ್ದು, ಒಟ್ಟು 16 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಒಂದು ಬ್ಯಾಲೆಟ್ ಯೂನಿಟ್‌ನಲ್ಲಿ 16 ಅಭ್ಯರ್ಥಿಗಳ ಹೆಸರು ಬರಲಿದ್ದು, ನೋಟಾಗಾಗಿ ಮತ್ತೊಂದು ಬ್ಯಾಲೆಟ್ ಯೂನಿಟ್ ಅಳವಡಿಸಲಾಗುತ್ತದೆ. ಒಟ್ಟು 678 ಮತಗಟ್ಟೆಗಳಲ್ಲಿ 82 ಕ್ರಿಟಿಕಲ್, 11 ವಲ್ನರೆಬಲ್ ಹಾಗೂ 5 ಸಾಮಾನ್ಯ ಸೇರಿ 88 ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್‌ವರ್, ವೀಡಿಯೋಗ್ರಾರ‍್ಸ್ ಹಾಗೂ ವೆಬ್‌ಕಾಸ್ಟಿಂಗ್ ಮಾಡಲಾಗುತ್ತದೆ. ಒಟ್ಟು 3,957 ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಚುನಾವಣಾ ಆಯೋಗ ನಿರ್ದೇಶನದಂತೆ ಇವಿಎಂ ಮತ್ತು ವಿವಿಪ್ಯಾಟ್‌ಗಳ ರ‍್ಯಾಂಡಮೈಜೇಷನ್ ಮಾಡಲಾಗಿದ್ದು, ಕಂಟ್ರೋಲ್ ಯೂನಿಟ್-950, ಬ್ಯಾಲೆಟ್ ಯೂನಿಟ್-950 ಹಾಗೂ ವಿವಿಪ್ಯಾಟ್-1017 ಗಳನ್ನು ಹಂಚಿಕೆ ಮಾಡಲಾಗಿದೆ. ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಸ್ಟ್ರಾಂಗ್ ರೂಂ ಹಾಗೂ ಮಸ್ಟರಿಂಗ್-ಡಿ ಮಸ್ಟರಿಂಗ್ ಕೇಂದ್ರ ಸ್ಥಾಪಿಸಿದ್ದು, ಮತ ಎಣಿಕೆ ಪ್ರಕ್ರಿಯೆ ಕೂಡಾ ಅಲ್ಲೇ ನಡೆಯಲಿದೆ ಎಂದು ಹೇಳಿದರು.

IMG 20201029 WA0005

ಮತದಾನ ಮಾಡಲು ಬರುವ ಮತದಾರರಿಗೆ ಬಲಗೈಗೆ ಕೈಗವಸು ನೀಡಲಾಗುತ್ತದೆ. ಮತದಾರರು ಮತಗಟ್ಟೆ ಮುಂದೆ ಮಹಿಳೆಯರು, ಪುರಷರು, ವಿಕಲಚೇತನರಿಗಾಗಿ ಮೂರು ಮೂರು ಸಾಲಿನ ವ್ಯವಸ್ಥೆ ಮಾಡಲಾಗಿರುತ್ತದೆ. ಪ್ರತಿ ಮತಗಟ್ಟೆಗೂ ಆರೋಗ್ಯ ಸಿಬ್ಬಂದಿಯೊಬ್ಬರನ್ನು ನಿಯೋಜನೆ ಮಾಡಲಾಗಿದೆ. ಮತಗಟ್ಟೆ ಮುಂದೆ ಮಾರ್ಕಿಂಗ್ ಮಾಡಲಾಗಿದ್ದು, 678 ಥರ್ಮಲ್ ಸ್ಕ್ಯಾನಿಂಗ್ ಯಂತ್ರ ಕೊಡಲಾಗಿದೆ. ಈ ಸ್ಕ್ಯಾನಿಂಗ್ ಮುಗಿದ ಬಳಿಕ ಕೈ ಸ್ಯಾನಿಟೈಸ್ ಮಾಡಿ, ಕೈಗೆ ಗ್ಲೌಸ್ ಹಾಕಿಕೊಳ್ಳಬೇಕು. ಮತದಾನ ಚಲಾಯಿಸುವ ಮತದಾರರ ಎಡಗೈನ ಮಧ್ಯದ ಬೆರಳಿಗೆ ಅಳಿಸಲಾಗದ ಶಾಹಿಯಿಂದ ಗುರುತು ಮಾಡಲಾಗುತ್ತದೆ ಎಂದರು.

ರಾಜರಾಜೇಶ್ವರಿನಗರ ವ್ಯಾಪ್ತಿಯಲ್ಲಿ 9 ವಾರ್ಡ್ಗಳು ಬರಲಿದ್ದು, ಕಳೆದ 17 ದಿನದಲ್ಲಿ 1,177 ಕೋವಿಡ್ ಪಾಸಿಟಿವ್ ರೋಗಿಗಳನ್ನು ಗುರುತಿಸಲಾಗಿದ್ದು, ಮತದಾನ ಮಾಡಲು ಇಚ್ಚಿಸುವವರಿಗೆ ಕಂಟ್ರೋಲ್ ರೂಂ ಸಿಬ್ಬಂದಿ ಕರೆ ಮಾಡಲಿದ್ದಾರೆ. ಅಲ್ಲದೆ ಇಂದಿನಿಂದ 3ನೇ ತಾರೀಕಿನವರೆಗೆ ಪಾಸಿಟಿವ್ ಅಗುವವರಿಗೆ, ಕಂಟ್ರೋಲ್ ರೂಂನಿಂದ ಕರೆ ಮಾಡಲಾಗುತ್ತದೆ. ಮನೆಬಾಗಿಲಿಗೆ ಪಿಪಿಇ ಕಿಟ್ ಹಾಗೂ ಆಂಬುಲೆನ್ಸ್ ಹೋಗಲಿದೆ. ಮತದಾನದ ಕಡೇಯ ಒಂದು ಗಂಟೆ(5 ರಿಂದ 6) ಗಂಟೆಯವರೆಗೆ ಮತದಾನ ಮಾಡಿಸಿ, ಅದೇ ಆಂಬ್ಯುಲೆನ್ಸ್ ಮೂಲಕ ಮನೆಗೆ ಬಿಡಲಾಗುತ್ತದೆ. 9 ವಾರ್ಡ್ ಗಳಿಗೆ ತಲಾ ಹತ್ತು ಆಂಬ್ಯುಲೆನ್ಸ್ ನಂತೆ 90 ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಪಾಸಿಟಿವ್‌ನ ಲಕ್ಷಣ ಇರುವವರಿಗೆ ಕೂಡಾ ಪಾಲಿಕೆ ವತಿಯಿಂದ ವಾಹನ ಕಳುಹಿಸಲಾಗುತ್ತದೆ. ಈ ಸಮಯದಲ್ಲಿ ಬೇರೆ ಮತದಾರರು ತಡವಾಗಿ ಮತ ಚಲಾಯಿಸಲು ಬಂದರೆ, ಮತಗಟ್ಟೆಗೆ ಸಂಪೂರ್ಣ ಸ್ಯಾನಿಟೈಸ್ ಮಾಡಿ, ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ 27 ಲಕ್ಷ ರೂ. ನಗದು, 3 ಲಕ್ಷ ವೆಚ್ಚದ 209 ಲೀಟರ್ ಮದ್ಯ, 16.48 ಲೀಟರ್ ಬಿಯರ್ ಜಪ್ತಿ ಮಾಡಲಾಗಿದೆ ಎಂದರು.

ಈ ವೇಳೆ ವಿಶೇಷ ಆಯುಕ್ತರು(ಆಡಳಿತ) ಶ್ರೀ ಜೆ.ಮಂಜುನಾಥ್, ಮುಖ್ಯ ಆರೋಗ್ಯಾಧಿಯ ಡಾ. ವಿಜೇಂದ್ರ ಹಾಗೂ ಇನ್ನಿತರೆ  ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು