ಪಾವಗಡ ತಾಲ್ಲೂಕಿನ ಬಿ.ಹೊಸಹಳ್ಳಿ ಗ್ರಾಮದಲ್ಲಿ ಟೆನಿಸ್ ಕ್ರಿಕೆಟ್ ಟೂರ್ನಿಮೆಂಟ್ ನ್ನ ಗ್ರಾಮಸ್ಥರ ಸಮ್ಮುಖದಲ್ಲಿ ಆಯೋಜಿಸಲಾಗಿತ್ತು.
ಆಧುನಿಕ ಜಗತ್ತು ಬೆಳೆದಂತೆ ಗ್ರಾಮೀಣ ಭಾಗದಲ್ಲಿ ಕ್ರೀಡೆಗಳು ಹಾಗೂ ಯುವಕರಲ್ಲಿನ ಕ್ರೀಡೆಯ ಆಸಕ್ತಿ ಕಳೆಗುಂದುತ್ತಿದೆ, ಆದರೆ ಈ ಗ್ರಾಮದಲ್ಲಿ ಯುವಕರಿಗೆ ಗ್ರಾಮಸ್ಥರು ಕ್ರೀಡಾ ಚಟುವಟುಕೆಗಳಲ್ಲಿ ಭಾಗವಹಿಸುವಂತೆ ಚೈತನ್ಯ ತುಂಬುತ್ತಿರೋದು ನಿಜಕ್ಕೂ ಮಾದರಿಯಾಗಿದೆ.
ತಾ.ಪಂ.ಸದಸ್ಯರು ಮತ್ತು ಮಾಜಿ ಕಬ್ಬಡ್ಡಿ, ಕ್ರಿಕೆಟ್ ಕ್ರೀಡಾಪಟುವಾಗಿದ್ದ ಅಂಜನ್ ನಾಯಕರವರು ಮಾತನಾಡುತ್ತ ಇಂದಿನ ಯುವ ಶಕ್ತಿ ಮಾನಸಿಕವಾಗಿ ದೈಹಿಕವಾಗಿ ಬಲಗೊಳ್ಳಬೇಕಾದರೆ ಇಂತಹ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನ ತೊಡಗಿಸಿಕೊಳ್ಳಬೇಕು. ನಿಮ್ಮ ಈ ಆಸಕ್ತಿಗೆ ನಮ್ಮೆಲ್ಲ ಪೂರಕ ಬೆಂಬಲ ನಿಮಗೆ ಸಿಗುತ್ತದೆ ಎಂದು ಕ್ರೀಡಾಸಕ್ತ ಯುವಕರನ್ನ ಪ್ರೋತ್ಸಾಹಿಸಿ ಆರ್ಥಿಕವಾಗಿ ಕ್ರೀಡೆಗೆ ಬೆಂಬಲಿಸಿದರು.
ಮತ್ತೊಂದು ವಿಶೇಷವೆಂದರೆ ತಮ್ಮ ಆಡಳಿತದ ಅಧಿಕಾರದ ಅಡಿಯಲ್ಲಿ ತಾ.ಪಂ.ಸದಸ್ಯರಾದ ಅಂಜನ್ ನಾಯಕ ಮತ್ತು ಸುಶೀಲಮ್ಮರವರು ತಮ್ಮ ಅನುದಾನದಡಿಯಲ್ಲಿ ಕ್ರೀಡಾಂಗಣವನ್ನು ನಿರ್ಮಿಸಿ ಕ್ರೀಡಾಸಕ್ತರಿಗೆ ಹೆಚ್ಚು ಪ್ರೋತ್ಸಾಹಿಸಿದ್ದಾರೆ.
ಇನ್ನು ಈ ಟೂರ್ನಿಯಲ್ಲಿ ಆಸಕ್ತ ಕ್ರಿಕೆಟ್ ಆಟಗಾರರ ತಂಡ ಉತ್ಸುಕತೆಯಿಂದ ಭಾಗವಹಿಸಿ ತಮ್ಮ ತಮ್ಮ ಪ್ರತಿಭೆಯ ಮಟ್ಟಕ್ಕನುಗುಣವಾಗಿ ಮೊದಲ ಬಹುಮಾನ, ದ್ವಿತೀಯ , ತೃತೀಯ ಬಹುಮಾನಗಳನ್ನ ತಮ್ಮದಾಗಿಸಿಕೊಂಡು ಗ್ರಾಮೀಣ ಮಂದಿಯಲ್ಲಿ ಸಂತಸ ಮೂಡಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಮಾಜಿ ಕ್ರೀಡಾಪಟು ವೈ.ಎನ್ ನರಸಿಂಹರೆಡ್ಡಿ, ಮಾರಣ್ಣ,ಅಜಯ್,ರಾಮಲಿಂಗರೆಡ್ಡಿ, ಮಲ್ಲಿಕಾರ್ಜುನ, ಗೋವಿಂದ ರಾಜು, ಚಂದ್ರಶೇಖರ್, ಗೋಪಿ ಪ್ರಸಾದ್, ಸೇರಿದಂತೆ ಹಲವರು ಇದ್ದರು.
ವರದಿ: ನವೀನ್ ಕಿಲಾರ್ಲಹಳ್ಳಿ*