ಬೆಂಗಳೂರು: – ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಕ್ಕೆ ನೂತನ ಅಧ್ಯಕ್ಷ ರಾಗಿ ನೇಮಕವಾಗಿದ್ದ ಬಿಜೆಪಿ ನಾಯಕರಾದ ಸಿ ಮುನಿಕೃಷ್ಣ ಅವರು ಬುಧವಾರ ತಮ್ಮ ಕಚೇರಿ ಯಲ್ಲಿ ವಿಧ್ಯುಕ್ತವಾಗಿ ಪೂಜೆ ಮಾಡುವ ಮೂಲಕ ಪದಗ್ರಹಣ ಮಾಡಿದರು.
ಇತ್ತೀಚೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ದ ಅಧ್ಯಕ್ಷರಾಗಿ ನೇಮಕ ಮಾಡಿದ್ದರು.
ಪದಗ್ರಹಣ ನಂತರ ಮಾತನಾಡಿದ ಅವರು ಕಳೆದ 30 ವರ್ಷಗಳಿಂದ ಬಿಜೆಪಿ ಪಕ್ಷಕ್ಕೆ ನಾನು ಮಾಡಿದ ಸೇವೆಯನ್ನು ಪರಿಗಣಿಸಿ ಪಕ್ಷ ನನಗೆ ಈ ಅವಕಾಶ ನೀಡಿದೆ. ಅಂಬೇಡ್ಕರ್ ನಿಗಮದಲ್ಲಿ ಹಲವಾರು ಯೋಜನೆಗಳು ಇವೆ,ಈ ಯೋಜನೆ ಸರಿಯಾದ ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು