IMG 20201123 172951

ನೂತನ ಶಾಸಕರ ಪ್ರಮಾಣವಚನ….!

STATE POLATICAL

ಪ್ರಮಾಣ ವಚನ ಸಮಾರಂಭ

ಬೆಂಗಳೂರು, ನವೆಂಬರ್ 23 (ಕರ್ನಾಟಕ ವಾರ್ತೆ):
ಇತ್ತೀಚಿಗೆ ನಡೆದ ವಿಧಾನಸಭೆಯ ಉಪಚುನಾವಣೆಯಲ್ಲಿ ಆಯ್ಕೆಯಾದ ಶಾಸಕರಾದ ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದ ಮುನಿರತ್ನ ಹಾಗೂ ಸಿರಾ ಕ್ಷೇತ್ರದ                       ಡಾ. ಸಿ. ಎಮ್. ರಾಜೇಶ್‍ಗೌಡ ಅವರು ಇಂದು ಪ್ರಮಾಣವಚನ ಸ್ವೀಕರಿಸಿದರು.

IMG 20201123 173018
ಇಂದು ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರಳ ಸಮಾರಂಭದಲ್ಲಿ ರಾಜರಾಜೇಶ್ವರಿನಗರದ ಶಾಸಕರಾದ ಮುನಿರತ್ನ ಅವರು ತಾಯಿ ರಾಜರಾಜೇಶ್ವರಿ ಹೆಸರಿನಲ್ಲಿ ಹಾಗೂ ಸಿರಾ ಶಾಸಕರಾದ ಡಾ. ಸಿ. ಎಮ್. ರಾಜೇಶ್‍ಗೌಡ ಅವರು ಭಗವಂತನ ಹೆಸರಿನಲ್ಲಿ  ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವಿಧಾನಸಭೆಯ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭೆಯ ಕಾರ್ಯದರ್ಶಿ ಶ್ರೀಮತಿ ಎಂ. ಕೆ. ವಿಶಾಲಾಕ್ಷಿಯವರು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.