*ದ್ರೋಹ ಬಗೆದ ಪ್ರತಾಪಗೌಡನನ್ನು ಮಸ್ಕಿ ಮತದಾರರು ತಿರಸ್ಕರಿಸಿ, ಬಸನಗೌಡಗೆ ಆಶೀರ್ವದಿಸಲಿದ್ದಾರೆ: ಡಿ.ಕೆ ಶಿವಕುಮಾರ್*
ಗಂಗಾವತಿ:: – ಹೆತ್ತ ತಾಯಿಗೆ ದ್ರೋಹ ಬಗೆವ ರೀತಿಯಲ್ಲಿ ತಾನು ಗೆದ್ದ ಪಕ್ಷಕ್ಕೆ ಮೋಸ ಮಾಡಿರುವ ಪ್ರತಾಪಗೌಡನಿಗೆ ಮಸ್ಕಿ ಮತದಾರ ತಕ್ಕ ಪಾಠ ಕಲಿಸಲಿದ್ದು, ಆರ್.ಬಸನಗೌಡ ಅವರಿಗೆ ಆಶೀರ್ವಾದ ಮಾಡಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಗಂಗಾವತಿಯಲ್ಲಿ ಸೋಮವಾರ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು,
‘ಜನರ ಸೇವೆ ಮಾಡುವರಿಗೆ ಸದಾವಕಾಶ ಇರುತ್ತದೆ. ಪಕ್ಷದಲ್ಲಿ ಗೆದ್ದು ಮೋಸ ಮಾಡಿದವರು ಪಕ್ಷ ಬಿಟ್ಟಿದೆ ಒಳ್ಳೆಯದ್ದು. ಉಪ ಚುನಾವಣೆಯಲ್ಲಿ ನಾವು ಸೊತಿದ್ದೇವೆ ಎಂದು ಕಾಂಗ್ರೆಸ್ ಧೃತಿಗೆಟ್ಟಿಲ್ಲ. ಮಸ್ಕಿ ಕ್ಷೇತ್ರದ ಮತದಾರರ ಬೆಂಬಲ ನೋಡಿದರೆ 20 ಸಾವಿರ ಅಂತರದಿಂದ ಗೆಲ್ಲುವ ಸಾಧ್ಯತೆ ಇದೆ.
ದೇಶದಲ್ಲಿ ಯುವಕರಿಗೆ ಉದ್ಯೋಗ ಕೊಡುತ್ತೇವೆ ಎಂದು ಬಿಜೆಪಿ ಭರವಸೆ ನೀಡಿದ್ದು ಸುಳ್ಳಾಗಿದೆ. ದೇಶಕ್ಕೆ ಸಂವಿಧಾನ ಕೊಟ್ಟಿರುವ ಕಾಂಗ್ರೆಸ್ ಪಕ್ಷಕ್ಕೆ ಜನರ ಬೆಂಬಲ ಇದೆ. ಈ ಭಾಗದ ರೈತರಿಗೆ ಅನುಕೂಲವಾಗುವ ನಂದವಾಡಗಿ ನೀರಾವರಿ ಯೋಜನೆಯನ್ನು ಕಾಂಗ್ರೆಸ್ ಪಕ್ಷ ಜಾರಿಗೆ ತಂದಿದೆ’ ಎಂದರು.
*ಫ್ಯಾಶನ್ ಗಾಗಿ ಹಸಿರು ಶಾಲು:*
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಫ್ಯಾಶನ್ ಗಾಗಿ ಹಸಿರು ಶಾಲು ಹಾಕಿಕೊಳ್ಳುತ್ತಾರೆ ಹೊರತು, ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ರೈತರ ಹಿತಕ್ಕಿಂತ ಅವರಿಗೆ ಸರ್ಕಾರ ಉಳಿಸಿಕೊಳ್ಳುವುದೇ ಮುಖ್ಯವಾಗಿದೆ. ಭತ್ತ ಹಾಗೂ ಮೆಕ್ಕೆಜೋಳ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ನೆರವಿಗೆ ಸರ್ಕಾರ ನಿಲ್ಲಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾಯ್ರಾಧ್ಯಕ್ಷ ಈಶ್ವರ ಖಂಡ್ರೆ, ಸತೀಸ ಜಾರಕಿಹೊಳಿ. ಆರ್.ಬಸನಗೌಡ ತುರವಿಹಾಳ, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ವಿಧಾನ ಪರಿಷತ್ ಸದಸ್ಯ ಎನ್. ಎಸ್ ಬೋಸರಾಜ್. ಮಾಜಿ ಸಂಸದ ಬಿ.ವಿ ನಾಯಕ. ಶಾಸಕ ಡಿ.ಎಸ್ ಹುಲಿಗೇರಿ, ಶಾಸಕ ಬಸನಗೌಡ ದದ್ದಲ್, ಬ್ಲಾಕ್ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ. ಹನುಂಮತಪ್ಪ ಮುದ್ದಾಪೂರ ಸೇರಿದಂತೆ ಕಾಂಗ್ರೆಸ್ ಪಕ್ಷದ ಇನ್ನಿತರ ಮುಖಂಡರು ಇದ್ದರು.