images 4

ಮೂರು ದಿನಗಳ ಸಾರಿಗೆ ಸಮರ ಅಂತ್ಯ…!

STATE Genaral

ಮೂರು ದಿನಗಳ ಸಾರಿಗೆ ಸಮರ ಅಂತ್ಯ….!

ಬೆಂಗಳೂರು: – ಮೂರು ದಿನಗಳಿಂದ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಅಂತ್ಯ ವಾಗಿದೆ.
ಮುಷ್ಕಕರ  ನಿರತ ನೌಕರ ಯೂನಿಯನ್  ನಾಯಕರು ಮತ್ತು ಸಾರಿಗ ಸಚಿವರು ಉಪ ಮುಖ್ಯಮಂತ್ರಿ ಲಕ್ಷಣ ಸವದಿ, ಸಚಿವರಾದ ಆರ್ ಅಶೋಕ್, ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು ಸಂಜೆ ವಿಕಾಸ ಸೌಧ ದಲ್ಲಿ‌ ನಡೆದ ಸಂದನಾ ಸಭೆ ಯಶಸ್ವಿಯಾಗಿದೆ ಎನ್ನಲಾಗಿದೆ.

ಸಾರಿಗೆ ನೌಕರರ ಬಹುತೇಕ ಬೇಡಿಕೆ ಈಡೇರಿಸಲಾಗಿದೆ ಎನ್ನಲಾಗುತ್ತಿದೆ.

ನೌಕರರ 10 ಬೇಡಿಕೆಗಳಲ್ಲಿ‌ 8 ಗ್ರೀನ್ ಸಿಗ್ನಲ್…?
* ಅಂತರ್ ನಿಗಮ ವರ್ಗಾವಣೆ ಗೆ ಸಮಿತಿ ರಚನೆ.
* 6 ನೇ ವೇತನಾ ಆಯೋಗ ಬಗ್ಗೆ ಪರಿಶೀಲನೆ.
* ಸರ್ಕಾರಿ ನೌಕರರಾಗಿ ಪರಿಗಣಿಸಲು ಸಾಧ್ಯವಿಲ್ಲ.
*ವೇತನ ಪರಿಷ್ಕರಣೆ ಗೆ ಒಪ್ಪಿಗೆ.
*  ಜನವರಿಯಿಂದ ನೌಕರರ ಭತ್ಯೆ ನೀಡಲು‌ ಗ್ರೀನ್ ಸಿಗ್ನಲ್
* ನೌಕರರಿಗೆ ವಿಮಾ ಸೌಲಭ್ಯ.
* ಕೋವಿಡ್ ನಿಂದ ಮೃತಪಟ್ಟ ನೌಕರರಿಗೆ 30 ಲಕ್ಷ ಪರಿಹಾರ.

* ನೌಕರರ ತರಬೇತಿ ಅವಧಿಯನ್ನು 2 ವರ್ಷದಿಂದ 1ವರ್ಷಕ್ಕೆ ಇಳಿಕೆ.

* ನೌಕರರ ಕಿರುಕುಳ ತಡೆಯಲು ಸಮಿತಿ ರಚನೆ

 

ಸಂಧಾನ ಯಶಸ್ವಿ ಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ  ಸೇರಿದಂತೆ  ರಾಜ್ಯಾದ್ಯಂತ ಬಸ್ ಸಂಚಾರ ಆರಂಭ.