IMG 20210104 211854

ವಿಧಾನ ಪರಿಷತ್ತಿನಲ್ಲಿ ನಡೆದ ಘಟನೆ ಸಂಸದೀಯ ವ್ಯವಸ್ಥೆಯನ್ನೇ ತಲ್ಲಣಗೊಳಿದೆ….!

Genaral STATE

ಕರ್ನಾಟಕ ವಿಧಾನ ಮಂಡಳದ ಮೌಲ್ಯಗಳನ್ನು ಎತ್ತಿ ಹಿಡಿಯಲು ಸಮಾಲೋಚನಾ ಸಭೆ

ಬೆಂಗಳೂರು, ಜನವರಿ 04 (ಕರ್ನಾಟಕ ವಾರ್ತೆ):
ಕರ್ನಾಟಕದ ವಿಧಾನ ಮಂಡಳದ ವ್ಯವಸ್ಥೆಗೆ  ಒಂದು ವಿಶಿಷ್ಟ ಇತಿಹಾಸವಿದೆ.  ಇಡೀ ದೇಶಕ್ಕೆ ಮಾದರಿ ವಿಧಾನ ಮಂಡಲವನ್ನು ನೀಡಿದ ರಾಜ್ಯ ಕರ್ನಾಟಕ.  ಡಿಸೆಂಬರ್ 15 ರಂದು ವಿಧಾನ ಪರಿಷತ್ತಿನಲ್ಲಿ ನಡೆದ ಘಟನೆ ಸಂಸದೀಯ ವ್ಯವಸ್ಥೆಯನ್ನೇ ತಲ್ಲಣಗೊಳಿಸುವ ಘಟನೆಯಾಗಿದೆ.  ಈ ಸಂಬಂಧ ಮುಂದಿನ ದಿನಗಳಲ್ಲಿ ಅಧಿವೇಶನಕ್ಕೂ ಮುನ್ನ ಸಾಮಾಜಿಕ ಚಿಂತಕರು, ತಜ್ಞರು, ಹಿರಿಯರು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ಒಳಗೊಂಡಂತೆ ಸಮಾಲೋಚನಾ ಸಭೆಯನ್ನು ಕರೆದು ಚರ್ಚಿಸುವುದಾಗಿ ಕರ್ನಾಟಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಧ್ಯಮದವರಿಗೆ ಇಂದು ಇಲ್ಲಿ ತಿಳಿಸಿದರು.
ದಿವಂಗತ ಎಸ್.ಎಲ್. ಧರ್ಮೇಗೌಡರಿಗೆ ಶ್ರದ್ಧಾಂಜಲಿ ಸಲ್ಲಿಸಿದ ವಿಧಾನಸಭಾಧ್ಯಕ್ಷರು ಅವರು ಧರ್ಮೇಗೌಡರು ಗ್ರಾಮಪಂಚಾಯತಿ ಒಳಗಂಡಂತೆ  ಎಂಎಲ್‍ಎ, ಎಂಎಲ್‍ಸಿ, ಮುಂತಾದ ಹಿರಿಯ ಸ್ಥಾನಗಳನ್ನು ಅಲಂಕರಿಸಿದವರು.  ಅವರ ಅನಿರೀಕ್ಷಿತ ಸಾವು ಆಘಾತ ನೀಡಿದೆ.  ಅವರ ನಿಧನದಿಂದ  ಅವರ ಕುಟುಂಬದವರಿಗೆ ಆಗಿರುವ ದು : ಖವನ್ನು ಭರಿಸುವ ಶಕ್ತಿ ಭಗವಂತನು ನೀಡಲಿ ಎಂದು ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿ ನಡೆದ ಘಟನೆಯಿಂದಾಗಿ ಲೋಕಸಭಾಧ್ಯಕ್ತ ತೀವ್ರ ದಿಭ್ರಮೆ ವ್ಯಕ್ತಪಡಿಸಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ ಇಡಿ ದೇಶದ ಗಣ್ಯರು, ರಾಜ್ಯದ ಗಣ್ಯರು, ಹಿರಿಯರು, ಮಾಧ್ಯಮದವರು ಖೇದವನ್ನು ವ್ಯಕ್ತಪಡಿಸಿದ್ದಾರೆ. ಜವಾಬ್ದಾರಿಯುತ ವ್ಯಕ್ತಿಗಳಾದ ನಾವು  ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಕಾರ್ಯವನ್ನು ಮಾಡಬೇಕು.  ಆದರೆ, ಈ ಘಟನೆಯಿಂದಾಗಿ ಪ್ರಜಾಪ್ರಭುತ್ವದ ಮೌಲ್ಯದಲ್ಲಿ ಕುಸಿತ ಉಂಟಾಗಿದೆ. ಈ ಸಂಬಂಧ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಕರ್ನಾಟಕ ವಿಧಾನಸಭಾಧ್ಯಕ್ಷರು ತಿಳಿಸಿದರು.