IMG 20210120 230452

ಕಾಂಗ್ರೆಸ್ ದಲ್ಲಾಳಿಗಳ ಪರ ಬ್ಯಾಟಿಂಗ್….!

Genaral STATE

ಬೆಂಗಳೂರು: ರೈತರನ್ನು ಎಲ್ಲ ರೀತಿಯ ಕಾನೂನು ಸಂಕೋಲೆಗಳಿಂದ ಮುಕ್ತಗೊಳಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರವು ಕ್ರಾಂತಿಕಾರಕ ಕೃಷಿ ಕ್ಷೇತ್ರ ಸುಧಾರಣಾ ಕಾಯ್ದೆಗಳನ್ನು ರೂಪಿಸಿದೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರೈತರಿಗೆ ಈಗ ಎಪಿಎಂಸಿ ಹೊರತಾಗಿ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಹೆಚ್ಚುವರಿ ಆಯ್ಕೆ ಸಿಕ್ಕಿದೆ.
ರೈತರು ಈಗ ತಮ್ಮ ಬೆಳೆಗಳನ್ನು ಎಪಿಎಂಸಿ ಮಾರುಕಟ್ಟೆಯಲ್ಲೂ ಮಾರಬಹುದು ಅಥವಾ ಹೆಚ್ಚಿನ ಬೆಲೆ ಸಿಗುವುದಾದರೆ ಎಪಿಎಂಸಿ ಹೊರೆಗಿನ ವ್ಯಾಪಾರಿಗಳಿಗೂ ಮಾರಬಹುದು.
ರೈತರಿಗೆ ಹೆಚ್ಚುವರಿ ಮಾರಾಟದ ಸ್ವಾತಂತ್ರ್ಯ ಸಿಕ್ಕರೆ ಕಾಂಗ್ರೆಸ್ಸಿನವರಿಗೇಕೆ ಹೊಟ್ಟೆಯುರಿ? ಕಾಂಗ್ರೆಸ್ಸಿಗರೇ, ನೀವು ರೈತರ ಪರವೋ ಅಥವಾ ದಲ್ಲಾಳಿಗಳ ಪರವೋ?
ಕಾಂಗ್ರೆಸ್ ಕೂಟ ಸುಳ್ಳು ಹೇಳುತ್ತಿರುವಂತೆ ಎಪಿಎಂಸಿ ಮಾರುಕಟ್ಟೆ ರದ್ದಾಗುತ್ತಿಲ್ಲ. ಅಷ್ಟಕ್ಕೂ ಎಪಿಎಂಸಿ ರಾಜ್ಯಗಳ ವ್ಯಾಪ್ತಿಗೆ ಸೇರಿದ್ದು.
ವಿಚಿತ್ರವೆಂದರೆ ಎಪಿಎಂಸಿ ಕಾಯ್ದೆಗಳನ್ನೇ ರದ್ದು ಮಾಡುವುದಾಗಿ ಇದೇ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಈಗ ಬಣ್ಣ ಬದಲಿಸಿರುವ ಅದು ದಲ್ಲಾಳಿಗಳ ಪರ ಬ್ಯಾಟಿಂಗ್ ಮಾಡುತ್ತಿದೆ.IMG 20210120 225822

ರೈತರನ್ನು ದಾರಿತಪ್ಪಿಸಲು ಕಾಂಗ್ರೆಸ್ ಕೂಟ ಹೇಳುತ್ತಿರುವಂತೆ ಕೇಂದ್ರವು ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ರದ್ದುಮಾಡುತ್ತಿಲ್ಲ. ನಿಜ ಹೇಳಬೇಕೆಂದರೆ ಹೊಸ ಕಾಯ್ದೆಗಳ ನಂತರ ವಿವಿಧ ಬೆಳೆಗಳ ಎಂಎಸ್ಪಿಯನ್ನು ಹೆಚ್ಚಿಸಲಾಗಿದೆ. ಅಲ್ಲದೆ ಎಂಎಸ್ಪಿ ಅಡಿ ಈ ಸಲ ರೈತರಿಂದ ಇನ್ನು ಹೆಚ್ಚು ಬೆಳೆ ಖರೀದಿಸಲಾಗಿದೆ.
ಈಗ ರೈತರ ಕೃಷಿಉತ್ಪನ್ನಗಳ ಅಂತರರಾಜ್ಯ ಸಾಗಣೆಗೆ ನಿರ್ಬಂಧವಿಲ್ಲ. ಕೃಷಿಯೇತರ ಉತ್ಪನ್ನಗಳಿಗೆ ಇದ್ದಂತೆಯೇ ಕೃಷಿ ಉತ್ಪನ್ನಗಳಿಗೂ ಈಗ “ಒಂದು ದೇಶ ಒಂದು ಮಾರುಕಟ್ಟೆ”. ರೈತರಿಗೆ ದೇಶದ ಮಾರುಕಟ್ಟೆಗಳೆಲ್ಲವೂ ಮುಕ್ತ. ರೈತರು ಕೂಡಾ ತಮ್ಮ ಬೆಳೆಗಳ ಬೆಲೆ ನಿಗದಿಪಡಿಸಬಹುದು. ಹಾಗೆಯೇ ರೈತರು ದಲ್ಲಾಳಿಗಳಿಂದ ಮುಕ್ತ. ಆದರೆ ಕಾಂಗ್ರೆಸ್ ದಲ್ಲಾಳಿಗಳ ಜೊತೆ ಕೈಜೋಡಿಸಿ ಕೃಷಿ ಮಸೂದೆಗಳ ಬಗ್ಗೆ ಅಪಪ್ರಚಾರ ನಡೆಸುತ್ತಿದೆ.IMG 20210120 225829

ಮುಗ್ಧ ರೈತರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಲು ಯತ್ನಿಸುತ್ತಿದೆ. ಅದು ಕೇಂದ್ರವೇ ಇರಲಿ ರಾಜ್ಯವೇ ಇರಲಿ ಕಾಂಗ್ರೆಸ್ ಆಡಳಿತದಲ್ಲಿಯೇ ‌ಅತಿಹೆಚ್ಚು ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರದಲ್ಲಿದ್ದಾಗ ರೈತರ ಮೇಲೆ ಇನ್ನಿಲ್ಲದ ದೌರ್ಜನ್ಯ ಎಸಗಿ ಉಡಾಪೆ ಮಾತು ಆಡುತ್ತಿದ್ದ ಕಾಂಗ್ರೆಸ್ಸಿಗರಿಗೆ ಈಗ ರೈತರ ಬಗ್ಗೆ ಈಗ ಅಗಾಧ ಪ್ರೀತಿ ಹೊಮ್ಮಿದೆ. ಕಾಂಗ್ರೆಸಿಗರೇ, ಇದು ಮಾಹಿತಿಯುಗ. ಬಹುಕಾಲ ನೀವು ರೈತರಿಗೆ ಮಂಕುಬೂದಿ ಎರಚಲಾರಿರಿ ಎಂದರು.